ಕುಂದಾಪುರ: ನಾವು ಧರ್ಮವನ್ನು ರಕ್ಷಿಸಿದಾಗ ನಮ್ಮನ್ನು ಧರ್ಮ ರಕ್ಷಿಸುತ್ತದೆ. ಲೋಕ ಕಲ್ಯಾಣಾರ್ಥವಾಗಿ ಹಮ್ಮಿಕೊಂಡ ಸಾಮೂಹಿಕಸತ್ಯನಾರಾಯಣ ಪೂಜೆಯು ಹೆಚ್ಚಿನ ಫಲಪ್ರದವಾಗುತ್ತದೆ ಎಂದು ಬಾಳೆಕುದ್ರು ಮಠದ ಶ್ರೀ ನೃರಸಿಂಹಾಶ್ರಮ ಸ್ವಾಮೀಜಿ ಹೇಳಿದರು.
ಅವರು ಕುಂದಾಪುರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದಶಮಾನೋತ್ಸವ ಮತ್ತು ಹಳಅಳಿವೆ ಶ್ರೀ ಶನೈಶ್ವರ ದೇವಸ್ಥಾನ ಮತ್ತು ಶ್ರೀ ಶಿರಡಿ ಸಾಯಿಬಾಬಾ ಮಂದಿರ ಇದರ ವರ್ಧಂತ್ಸೋವದ ಅಂಗವಾಗಿ ಜರುಗಿದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶ್ರೀವಾಚನ ನೀಡಿದರು.
ವೇದಮೂರ್ತಿ ಶ್ರೀ ಕುಮಾರ್ ಐತಾಳ್ ಇವರ ನೇತೃತ್ವದಲ್ಲಿ ದಾರ್ಮಿಕ ವಿಧಿ ವಿಧಾನ ನಡೆಯಿತು. ಸಾಮೂಹಿಕ ಪೂಜಾ ಸಮಿತಿಯ ಅಧ್ಯಕ್ಷ ಸುರೇಶ್ ಬೆಟ್ಟಿನ್ ಅಧ್ಯಕ್ಷತೆ ವಹಿಸಿದ್ದರು. ಗಣೇಶ್ ಸ್ವಾಗತಿಸಿದರು. ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಪಾರ್ವತಿ ಕಾರ್ಯಕ್ರಮ ನಿರೂಪಿಸಿದರು. ಕುಂಬ್ರಿ ಒಕ್ಕೂಟದ ಸೇವಾ ಪ್ರತಿನಿಧಿ ಸುಜಾತ ಸಂದೇಶ ವಾಚಿಸಿದರು. ವಿಶ್ವನಾಥ ಆಚಾರ್ ವಂದಿಸಿದರು.
ಸಾಮೂಹಿಕ ಪೂಜಾ ಸಮಿತಿಯ ಗೌರವಾಧ್ಯಕ್ಷ ಶೇಷಗಿರಿ ಗೋಟ, ಉಡುಪಿ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ದುಗ್ಗೇಗೌಡ, ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಬಿ.ಅಪ್ಪಣ್ಣ ಹೆಗ್ಡೆ, ಶ್ರೀ ಶನೈೀಶ್ವರ ದೇವಸ್ಥಾನ ಮತ್ತು ಶ್ರೀ ಶಿರಡಿ ಸಾಯಿಬಾಬಾ ಮಂದಿರ ಸಮಿತಿಯ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ, ದೇವಳದ ಪ್ರಧಾನ ಆರ್ಚಕ ಬಸವರಾಜ್, ನುಡಿಸಿರಿ ಘಟಕದ ಕಾರ್ಯದರ್ಶಿ ಸುಬ್ರಮಣ್ಯ ಶೆಟ್ಟಿ, ಕುಂದಾಪುರ ವಲಯ ಮೇಲ್ವಿಚಾರಕ ಸತೀಶ್ ಯು, ಬೀಜಾಡಿ ಒಕ್ಕೂಟದ ಅಧ್ಯಕ್ಷೆ ಜಸಿಂತಾ, ಕುಂಬ್ರಿ ಒಕ್ಕೂಟದ ಅಧ್ಯಕ್ಷೆ ಮಾಲತಿ, ಕುಂಬ್ರಿ ಒಕ್ಕೂಟದ ಅಧ್ಯಕ್ಷೆ ಶೋಭಾ ಆಚಾರ್, ಸೇವಾ ಪ್ರತಿನಿಧಿಗಳಾದ ಸುಜಾತ, ರಾಗಿಣಿ, ಎ.ಪೂರ್ಣೀಮಾ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ - editor@kundapra.com