ಮಲ್ಯಾಡಿಯಲ್ಲಿ ವಿಶ್ವ ವಲಸೆ ಹಕ್ಕಿಗಳ ದಿನ ಆಚರಣೆ

ಕುಂದಾಪುರ: ಅಂತಾರಾಷ್ಟ್ರೀಯ ಸ್ವಯಂಸೇವಾ ಸಂಸ್ಥೆ ಎಫ್‌ಎಸ್‌ಎಲ್ ಇಂಡಿಯಾ ಆಶ್ರಯದಲ್ಲಿ ಮಲ್ಯಾಡಿ ಪಕ್ಷಿಧಾಮ ವಠಾರದಲ್ಲಿ ವಿಶ್ವ ವಲಸೆ ಹಕ್ಕಿಗಳ ದಿನಾಚರಣೆ ಆಚರಿಸಲಾಯಿತು. 
     ಪಕ್ಷಿತಜ್ಞ ವಿ.ಎಲ್. ಉಪಾಧ್ಯಾಯ ವಲಸೆ ಹಕ್ಕಿಗಳ ಬಗ್ಗೆ ಸಮಗ್ರ ಮಾಹಿತಿ ನೀಡಿ ಪಕ್ಷಿಗಳ ಛಾಯಾಗ್ರಹಣ ಕಲೆಯ ಬಗ್ಗೆ ತಿಳಿವಳಿಕೆ ನೀಡಿದರು. ಮನುಷ್ಯನಿಗೆ ಹಣ ಸಂತಸ ನೀಡಲಾರದು. ಮಕ್ಕಳು ಇಂತಹ ಹವ್ಯಾಸಗಳನ್ನು ರೂಢಿಸಿಕೊಂಡಾಗ ಬದುಕಿನುದ್ದಕ್ಕೂ ನೆಮ್ಮದಿಯ ಜೀವನ ಕಂಡುಕೊಳ್ಳಲು ಸಾಧ್ಯ ಎಂದು ಅವರು ಹೇಳಿದರು. 
      ಮಲ್ಯಾಡಿ ಪಕ್ಷಿಧಾಮ ಅಪರೂಪದ ವಲಸೆ ಹಕ್ಕಿಗಳ ಆಶ್ರಯತಾಣವಾಗಿದೆ. ದೇಶ-ವಿದೇಶಗಳಿಂದ ಪಕ್ಷಿಗಳು ಇಲ್ಲಿಗೆ ವಲಸೆ ಬರುತ್ತಿವೆ. ಆದರೆ ಸರಕಾರ ಗಮನಹರಿಸದೆ ಇರುವ ಕಾರಣ ಪಕ್ಷಿಧಾಮ ಕಡೆಗಣಿಸಲ್ಪಟ್ಟಿದೆ ಎಂದು ಅವರು ಅಭಿಪ್ರಾಯಪಟ್ಟರು. 
   ಸ್ಥಳೀಯ ನಂದಿಕೇಶ್ವರ ದೇವಸ್ಥಾನದ ಈಶ್ವರ ಹೆಗ್ಡೆ, ದಯಾ, ಬಸವ ಭಂಡಾರಿ, ಎಫ್‌ಎಸ್‌ಎಲ್ ಇಂಡಿಯಾ ಸ್ವಯಂಸೇವಕರಾದ ಶೋಭಾ ವಾಜ್, ಆಸ್ಟಿನ್ ಕರ್ವಾಲೊ, ಪ್ರೇಮಾ, ಪುಷ್ಪಾ, ನಾಗರತ್ನ, ಗಾಡ್ಪ್ರೀ, ದಿನೇಶ್, ದೀಪಕ್, ಮಂಜುಳಾ ಇದ್ದರು. 
   ಪಕ್ಷಿಗಳ ಬದುಕಿಗೆ ಕಂಠಕವಾಗಿರುವ ಪ್ಲಾಸ್ಟಿಕ್ ಇನ್ನಿತರ ತ್ಯಾಜ್ಯಗಳ ನಿರ್ಮೂಲನೆ ಕಾರ್ಯ ಇದೇ ಸಂದರ್ಭ ನಡೆಸಲಾಯಿತು. ಪರಿಸರದ ಚಿಣ್ಣರು ಈ ಕಾರ್ಯದಲ್ಲಿ ಕೈಜೋಡಿಸಿದರು.

ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com