ಕುಂದಾಪುರ: ತಾಲೂಕಿನ ಗೋಳಿಹೊಳೆಯ ಶ್ರೀ ಬಿಳಿಶಿಲೆ ವಿನಾಯಕ ದೇವಸ್ಥಾನದ ಅಷ್ಠಬಂಧ ಪ್ರತಿಷ್ಠಾ ಮಹೋತ್ಸವ ಬ್ರಹ್ಮಕಲಶೋತ್ಸವ ಮತ್ತು ನೂತನ ಪೌಳಿಯ ಉದ್ಘಾಟನಾ ಸಮಾರಂಭವು ಇತ್ತಿಚಿಗೆ ಜರುಗಿತು. ವಿವಿಧ ಧಾರ್ಮಿಕ ವಿಧಿ ವಿಧಾನಡೆದ ಗಳು ವೇದಮೂರ್ತಿ ಬ್ರಹ್ಮಶ್ರೀ ಯಜ್ಞ ನಾರಾಯಣ ಸೋಮಯಾಜಿ ಸಾಲಿಗ್ರಾಮ ಮತ್ತು ಕೆರೆಕಟ್ಟೆ ಸುಬ್ರಹ್ಮಣ್ಯ ಅಡಿಗರ ನೇತೃತ್ವದಲ್ಲಿ ನೆರೆವೇರಿತು.
ನಂತರ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಮಾಜಿ ಆಡಳಿತ ಧರ್ಮದರ್ಶಿ ಬಿ ಅಪ್ಪಣ್ಣ ಹೆಗ್ಡೆ ಸಭಾಧ್ಯಕ್ಷತೆಯನ್ನು ವಹಿಸಿ ಗ್ರಾಮಗಳ ಉನ್ನತಿ ಮತ್ತು ಅವನತಿಗಳನ್ನು ಅಲ್ಲಿನ ದೇವಸ್ಥಾನ ಮತ್ತು ಶಿಕ್ಷಣ ಸಂಸ್ಥೆಗಳ ಎಳುಬೀಳಿನ ಮೇಲೆ ನಿರ್ಧರಿಸಬಹುದು. ಆ ನಿಟ್ಟಿನಲ್ಲಿ ಗೋಳಿಹೊಳೆಯಂತಹ ಒಂದು ಪುಟ್ಟ ಗ್ರಾಮದಲ್ಲಿ ಗ್ರಾಮ ದೇವತೆಯಾದ ಬಿಳಿಶಿಲೆ ವಿನಾಯಕನ ನೂತನ ಪೌಳಿಯ ನಿರ್ಮಾಣ, ಮತ್ತು ದೇವಳದ ಅಭಿವೃದ್ಧಿ ಕಾರ್ಯಗಳು ಸಂತಸವನ್ನು ತಂದಿದೆ. ಇಂತಹ ಅಭಿವೃದ್ಧಿ ಕಾರ್ಯಗಳು ಹೀಗೆಯೆ ಮುಂದುವಲಿ ಎಂದರು.
ಕಮಲಶಿಲೆ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಧರ್ಮದರ್ಶಿಗಳಾದ ಸಚ್ಚಿದಾನಂದ ಚಾತ್ರ, ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಮಾರಣಕಟ್ಟೆಯ ಅನುವಂಶೀಯ ಮೊಕ್ತೇಸರರಾದ ಚಿತ್ತೂರು ಸೀತರಾಮ ಶೆಟ್ಟಿ ಹಾಗೂ ವಿಜಯ ಕುಮಾರ ಹೇರ್ಳೆ, ರೇಣುಕಾ ವಿ ಹಂದೆ, ನಾಗಪ್ಪ ಮರಾಠಿ ಕನ್ಕಿಮಡಿ ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶಿವರಾಜ ಪೂಜಾರಿ, ಕಾರ್ಯದರ್ಶಿ ರಘು ನಾಯ್ಕ ಸ್ವಾಗತಿಸಿದರು, ಚಂದ್ರ ನಾಕ ಕಾರ್ಯಕ್ರಮವನ್ನು ನಿರೂಪಿಸಿದರು. ನರಸಿಂಹ ಆಚಾರ್ಯ ವಂದಿಸಿದರು.
ಕುಂದಾಪ್ರ ಡಾಟ್ ಕಾಂ - editor@kundapra.com