ಗಂಗೊಳ್ಳಿಯ ಪಂಚಗಂಗಾವಳಿ ಸೌಹಾರ್ದಕ್ಕೆ ರು. 29.59 ಲಕ್ಷ ನಿವ್ವಳ ಲಾಭ


ಗಂಗೊಳ್ಳಿ: ಇಲ್ಲಿನ ಪಂಚಗಂಗಾವಳಿ ಸೌಹಾರ್ದ ಕ್ರೆಡಿಟ್ ಸಹಕಾರಿಯು ಪ್ರಸಕ್ತ ಆರ್ಥಿಕ ವರ್ಷದಲ್ಲಿ 29.59 ಲಕ್ಷ ನಿವ್ವಳ ಲಾಭಗಳಿಸಿದೆ.
ಸಹಕಾರಿಯು ಪ್ರಸಕ್ತ ಸಾಲಿನಲ್ಲಿ ರು. 7.27 ಕೋಟಿ ಠೇವಣಿಯನ್ನು ಸ್ವೀಕರಿಸಿದ್ದು, ಠೇವಣಿಯಲ್ಲಿ ಶೇ.31 ರಷ್ಟು ಹೆಚ್ಚಳವಾಗಿದೆ. ಸದಸ್ಯರಿಗೆ ರು. 6.71 ಕೋಟಿ ಸಾಲವನ್ನು ವಿತರಿಸಲಾಗಿದೆ. ಸಹಕಾರಿಯ ಪಾಲು ಬಂಡವಾಳವು ವರ್ಷಾಂತ್ಯಕ್ಕೆ ರು. 28.83 ಲಕ್ಷಗಳಾಗಿದ್ದು, ಶೇ.21 ರಷ್ಟು ಹೆಚ್ಚಾಗಿದೆ. ಸಹಕಾರಿಯ ನಿವ್ವಳ ಲಾಭವು ಕಳೆದ ಸಾಲಿಗಿಂತ ಶೇ.85 ರಷ್ಟು ವೃದ್ಧಿಯಾಗಿದ್ದು, ವರ್ಷಾಂತ್ಯಕ್ಕೆ ರು. 20.20 ಕೋಟಿ ವಹಿವಾಟು ನಡೆಸಲಾಗಿದೆ. ಇತರ ಬ್ಯಾಂಕ್‌ಗಳಲ್ಲಿ ರು. 2.44 ಕೋಟಿ ಠೇವಣಿಯನ್ನು ಇರಿಸಲಾಗಿದೆ.
ಪಾಲು ಬಂಡವಾಳ ವೃದ್ಧಿ, ಸಾಲ ನೀಡಿಕೆ ಮತ್ತು ವಸೂಲಾತಿಯಲ್ಲಿ ಗಣನೀಯ ಸಾಧನೆ ಹಾಗೂ ಠೇವಣಾತಿ ಸಂಗ್ರಹಣೆಯಲ್ಲಿ ಹೆಚ್ಚಿನ ಪ್ರೋತ್ಸಾಹ ನೀಡಿದ ಗ್ರಾಹಕರಿಗೆ, ಸಹಕಾರಿಯ ನಿರ್ದೇಶಕರಿಗೆ ಹಾಗೂ ಸಿಬ್ಬಂದಿಗೆ ಸಹಕಾರಿಯ ಅಧ್ಯಕ್ಷ ರಾಜು ದೇವಾಡಿಗ ಕೃತಜ್ಞತೆ ಸಲ್ಲಿಸಿದ್ದಾರೆ.

ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com