ಕಾಂಗ್ರೆಸ್‌ ಗೆಲ್ಲುವ ದಾರಿ ಸುಗಮ: ಸಂಸದ ಜ. ಹೆಗ್ಡೆ


ಕುಂದಾಪುರ: ಏಳು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್‌ ಪರ ಜನಾಭಿಪ್ರಾಯವಿದ್ದು, ಮನೆ ಮನೆ ಮತ ಯಾಚನೆಯಲ್ಲಿ ಕಾರ್ಯಕರ್ತರು ತೊಡಗಿದ್ದಾರೆ. ಈ ಬಾರಿ ಕಾಂಗ್ರೆಸ್‌ ಗೆಲ್ಲುವ ದಾರಿ ಸುಗಮವಾಗಿದೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೆ. ಜಯಪ್ರಕಾಶ್‌ ಹೆಗ್ಡೆ ಹೇಳಿದ್ದಾರೆ.
     ಅವರು ಕುಂದಾಪುರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ನೀಡಿದ್ದ ಆಶ್ವಾಸನೆಗಳಲ್ಲಿ ಬಹುತೇಕ ಈಡೇರಿಸಿದಂತಾಗಿದ್ದು, ಉಳಿದ ಕೆಲವು ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.
      ಕುಡಿಯುವ ನೀರಿನ ಯೋಜನೆ, ಆರೋಗ್ಯಕ್ಕೆ ಸಂಬಂಧಿಸಿದ ಯೋಜನೆ, ರಾಜೀವ್‌ ಗಾಂಧೀ ವಿದ್ಯುತ್‌ ಸಂಪರ್ಕ ಯೋಜನೆ, ನರ್ಮ್ ಯೋಜನೆ ಮೂಲಕ 108 ಅಂಬ್ಯುಲೆನ್ಸ್‌ ಯೋಜನೆ, ವೋಲ್ವೋ ಎಸಿ ಬಸ್‌ ಪ್ರಯಾಣ ಸೌಲಭ್ಯ ಹೀಗೆ ಹಲವು ಯೋಜನೆಗಳನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿದ್ದರೂ ಅವುಗಳನ್ನು ಬಿಜೆಪಿ ಸರ್ಕಾರ ತನ್ನ ಯೋಜನೆಗಳೆಂದು ಬಿಂಬಿಸುವ ಮೂಲಕ ಮತದಾರರ ದಾರಿ ತಪ್ಪಿಸುತ್ತಿದೆ ಎಂದರು.
     ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ಸಾಧನೆ ಆಧಾರದಲ್ಲಿ ಮತ ಯಾಚನೆ ನಡೆಸುತ್ತದೆ ಎಂದ ಅವರು, ಕುಂದಾಪುರ ನಗರದ ಜನರ ಬಹುದಿನಗಳ ಬೇಡಿಕೆಯಾದ ಪ್ಲೈ ಓವರ್‌ ಕಾಮಗಾರಿ ಇನ್ನೇನು ಆರಂಭವಾಗಲಿದೆ. ಬೆಂಗಳೂರಿನಿಂದ ಕಾರವಾರಕ್ಕೆ ರೈಲು ಓಡಾಟ ಸೇರಿದಂತೆ ಇಲ್ಲಿನ ಅನೇಕ ಬೇಡಿಕೆಗಳು ಈಡೇರಿವೆ. ಕೋಡಿ ಹಾಗೂ ಆನಗಳ್ಳಿ ಸೇತುವೆ ನಿರ್ಮಾಣಕ್ಕೆ ನಾನು ಸಂಸದನಾಗಿ ಪ್ರಯತ್ನಿಸಿದ್ದೇನೆ. ಇದಕ್ಕೆ ಬೇಕಾದ ದಾಖಲೆಗಳಿವೆ ಎಂದರು.
     ಸುಷ್ಮಾ ಹೇಳಿಕೆಗೆ ಆಕ್ಷೇಪ : ಕಾಂಗ್ರೆಸ್‌ ನಾಯಕರ ಹೇಳಿಕೆಗೆ 'ಭೂತ‌ದ ಬಾಯಲ್ಲಿ ಭಗವದ್ಗಿತೆ' ಎಂದು ಬೆಂಗಳೂರಿನಲ್ಲಿ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್‌ ಅವರು ಪ್ರತಿಕ್ರಿಯಿಸಿರುವುದು ಆಕ್ಷೇಪಾರ್ಹವಾದದು ಎಂದು ಹೇಳಿದ ಹೆಗ್ಡೆ, ಚುನಾವಣೆ ಸಮಯದಲ್ಲಿ ಬಿಜೆಪಿಯವರಿಗೆ ಯಾವ ಪದವಾದರೂ ಬಾಯಲ್ಲಿ ಬರುತ್ತದೆ ಎನ್ನುವುದಕ್ಕೆ ಇದೇ ಉದಾಹರಣೆ. ಅಧಿಕಾರಕ್ಕಾಗಿ ಆಪರೇಶನ್‌ ಕಮಲ ನಡೆಸುವುದರ ಮೂಲಕ ಕೋಟ್ಯಂತರ ರೂಪಾಯಿ ಹಣ ಲೂಟಿ ಮಾಡಿದವರಿಗೆ ಮಣೆ ಹಾಕಿ ರಕ್ಷಣೆ ಮಾಡುತ್ತಿರುವ ಬಿಜೆಪಿಗಳು ಭಗವದ್ಗೀತೆ ಹೇಳುತ್ತಿಲ್ಲವೆ ಎಂದು ಅವರು ಪ್ರಶ್ನೆಸಿದರು.

ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com