ಕುಂದಾಪುರ : ಯೋಗಿಗಳು ಬ್ರಹ್ಮನಾಂದವನ್ನು ಮತ್ತು ಕಲಾವಿದರೂ ರಸರಂಗವನ್ನು ಅನುಭವಿಸಿ ಮೈ ಮರೆತು ಪ್ರೇಕ್ಷಕ ಮತ್ತು ಸಹೃದಯರಿಗೆ ನೀಡಿ ತಮ್ಮ ದರ್ಪಣವನ್ನು ಸಲ್ಲಿಸುತ್ತಾರೆ. ಅದರಂತೆ ಸಾಮಗರೂ ಕೂಡ ತಮ್ಮ ಅಭೂತಪೂರ್ವ ಕಲೆಗಳ ಮೂಲಕ ಎಲ್ಲರ ಮನ ಸೆಳೆದವರು ಎಂದು ಬಸ್ರೂರು ಶ್ರೀ ಶಾರದಾ ಕಾಲೇಜಿನ ಉಪನ್ಯಾಸಕ ಶ್ರೀಧರ ಉಪ್ಪೂರ ಹೇಳಿದರು.
ಅವರು ಬುಧವಾರ ಕೋಟೇಶ್ವರ ಸಂಯಮಂ ಸಂಸ್ಥೆ ಇವರ ಪ್ರಯೋಜಕತ್ವದಲ್ಲಿ ಚಿಪಾನಬೆಟ್ಟು ಸಾಮಧಾಮ ವೇದಿಕೆಯಲ್ಲಿ ನಡೆದ ದಿ.ಮಲ್ಪೆ ಹರಿದಾಸ ರಾಮದಾಸ ಸಾಮಗ ಸಂಸ್ಮರಣಾ ಪ್ರಶಸ್ತಿಯನ್ನು ಖ್ಯಾತ ಸ್ತ್ರೀ ವೇಷಧಾರಿ ಜಯಕುಮಾರ ಗಾಣಿಗ ಉದ್ಯಾವರ ಇವರಿಗೆ ಪ್ರದಾನ ಮಾಡಿ ಮಾತನಾಡಿದರು. ಜಯಕುಮಾರ ಗಾಣಿಗ ಅವರು ನಾಟಕ ಮತ್ತು ಯಕ್ಷಗಾನ ಇವುಗಳ ಪೈಪೂಟಿಯಿಂದಾಗಿ ಇಂದು ಯಕ್ಷಗಾನ ಮುಗಿಲೇತ್ತರಕ್ಕೆ ಬೆಳಿದಿದೆ. ಅಂದಿನ ಕಾಲ ಘಟ್ಟದಲ್ಲೂ ಕೂಡ ಸಾಮಗರೂ ಒಳ್ಳೆಯ ಹಾಡುಗಾರರಾಗಿ ಜೊತೆಗೆ ಮದ್ದಳೆಗಾರರಾಗಿ ಮೂಡಿಬಂದಿದ್ದಾರೆ ಎಂದು ತಿಳಿಸಿದರು.
ಸಾಮಗಾರ ಮೂಲ ಹರಿದಾಸತನದಿಂದ ಬಂದರೂ ಯಕ್ಷಗಾನ ಕ್ಷೇತ್ರಕ್ಕೆ ಆಕಸ್ಮಿಕ ಪ್ರವೇಶವಾಗಿ ಯಕ್ಷ ಕಲೆಯಲ್ಲಿ ತನ್ನದೇ ಆದ ವಿಶಿಷ್ಟ ಪಾತ್ರಗಳ ಮೂಲಕ ಹೆಸರಾದವರು. ಚಂದ್ರ ವಿಲಾಸದ ಪ್ರಸಂಗದಲ್ಲಿ ಕೃಷ್ಣನ ಪಾತ್ರದಲ್ಲಿ ಆಭಿನಯಿಸಿದ ಸಾಮಗರ ನಟನೆ ನಿಜವಾದ ಕೃಷ್ಣನ ವೇಷಕ್ಕಿಂತಲೂ ಅಧ್ಭುತವಾಗಿ ಮೂಡಿಬಂದಿದೆ ಎಂದು ಪ್ರಶಂಸೆ ವ್ಯಕ್ತ ಪಡಿಸಿದರು.
ಸಭಾ ಕಾರ್ಯಕ್ರಮ ಬಳಿಕ ಸುಭದ್ರಾ ರಾಯಭಾರ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮ ಜರುಗಿತು. ಭಾಗವತರಾಗಿ ಹೆಬ್ರಿ ಗಣೇಶ್ ಕುಮಾರ್, ಹರಿಕೃಷ್ಣ ಹೊಳ್ಳ, ಮದ್ದಲೆಯಲ್ಲಿ ರಾಘವೇಂದ್ರ ಭಟ್ ಯಲ್ಲಾಪುರ, ಚಂಡೆಯಲ್ಲಿ ದೇವಿದಾಸ ಜಲವಳ್ಳಿ, ಪಾತ್ರಧಾರಿಗಳಾಗಿ ಪ್ರೋ.ಎಮ್.ಎಲ್.ಸಾಮಗ, ಡಾ.ಕೊಳ್ಯೂರ್ ಆರ್.ರಾವ್, ವಾಸುದೇವರಂಗ ಭಟ್, ಡಾ.ವೈಕುಂಠ ಹೇರಳೆ, ಸುಜಯೀಂದ್ರ ಹಂದೆ ಮತ್ತಿತರು ಭಾಗವಹಿಸಿದ್ದರು.
ಸಾಲಿಗ್ರಾಮ ಮಕ್ಕಳ ಮೇಳದ ಸಂಚಾಲಕ ಎಚ್.ಶ್ರೀಧರ್ ಹಂದೆ ಅಧ್ಯಕ್ಷತೆ ವಹಿಸಿದ್ದರು. ಎಂ.ಆರ್.ವಾಸುದೇವ ಸಾಮಗ ಸ್ವಾಗತಿಸಿದರು. ಸಂಯಮಂ ಸಂಚಾಲಕ ಎಂ.ಆರ್.ವಾಸುದೇವ ಸಾಮಗ, ಕೋಶಧಿಕಾರಿ ಮೀರಾ ವಿ ಸಾಮಗ ಉಪಸ್ಥಿತರಿದ್ದರು
ಕುಂದಾಪ್ರ ಡಾಟ್ ಕಾಂ - editor@kundapra.com