
ಕುಂದಾಪುರ: ರೋಟರಿ ಸಂಸ್ಥೆ ಸಮಾಜ ಸೇವೆಗಳ ಮೂಲಕ ಕಾರ್ಯ ನಿರ್ವಹಿಸುವುದಲ್ಲದೇ ಪರಸ್ಪರ ರೋಟರಿ ಮಿತ್ರರನ್ನು ಕುಟುಂಬದ ಸದಸ್ಯರಂತೆ ಕಾಣುವುದನ್ನು ಕಲಿಸುತ್ತದೆ ಎಂದು ವಲಯ 1ರ ಟಿಆರ್ಎಫ್ ಛೇರ್ಮೇನ್ ಗಣೇಶ್ ಶೆಟ್ಟಿ ಮೊಳಹಳ್ಳಿ ಹೇಳಿದರು.
ಅವರು ತೆಕ್ಕಟ್ಟೆಯ ಗಣೇಶ್ ಅಚಾರ್ ನಿವಾಸದಲ್ಲಿ ಕೋಟೇಶ್ವರ ರೋಟರಿ ಮತ್ತು ಆನ್ಸ್ ಕ್ಲಬ್ ಜಂಟಿ ಆಶ್ರಯದಲ್ಲಿ ಜರುಗಿದ ಕುಟುಂಬ ಮಿಲನ ಕಾರ್ಯಕ್ರಮ ಉದ್ದೇಶೀಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ರೋಟರಿ ಹಿರಿಯ ಸದಸ್ಯ ಗಣೇಶ್ ಆಚಾರ್ ತೆಕ್ಕಟ್ಟೆ ಹಾಗೂ ನಾಗರತ್ನ ಆಚಾರ್ ತೆಕ್ಕಟ್ಟೆ ಇವರನ್ನು ಸಂಸ್ಥೆಗಳ ಪರವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.
ಕೋಟೇಶ್ವರ ರೋಟರಿ ಕ್ಲಬ್ ಅಧ್ಯಕ್ಷ ನಾಗರಾಜ ಆಚಾರ್ ಕೋಣಿ ಅಧ್ಯಕ್ಷತೆ ವಹಿಸಿದ್ದರು. ಸಾಲಿಗ್ರಾಮ-ಕೋಟ ಇದರ ಮಾಜಿ ಅಧ್ಯಕ್ಷ ಸೀತಾರಾಮ ಆಚಾರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಆನ್ಸ್ ಕ್ಲಬ್ ಅಧ್ಯಕ್ಷೆ ಸುಮ ನಾಗರಾಜ್, ಕಾರ್ಯದರ್ಶಿ ದೀಪಿಕಾ ಶೆಟ್ಟಿ, ರೋಟರಿ ಕಾರ್ಯದರ್ಶಿ ನಾರಾಯಣ ಖಾರ್ವಿ ಉಪಸ್ಥಿತರಿದ್ದರು
ಕುಂದಾಪ್ರ ಡಾಟ್ ಕಾಂ - editor@kundapra.com