ಬೈಂದೂರಿನಲ್ಲಿ ಅಂಬೇಡ್ಕರ್ 122ನೇ ಜಯಂತಿ


ದಲಿತರ ಆತ್ಮಾಭಿಮಾನದ ಪ್ರತೀಕ ಅಂಬೇಡ್ಕರ್: ಜಯಪ್ರಕಾಶ್ ಶೆಟ್ಟಿ
ಬೈಂದೂರು: ಶೋಷಿತರ, ದಮನಿತರ, ಮಹಿಳೆಯರ ಹಾಗೂ ತಳಸಮುದಾಯದ ಜನರ ಧ್ವನಿಯಾದವರು ಡಾ. ಅಂಬೇಡ್ಕರ್. ದಲಿತರು ಆತ್ಮಾಭಿಮಾನದಿಂದ ತಲೆಯೆತ್ತಿ ಮುನ್ನಡೆವ ಚಿಂತನೆಯನ್ನು ಕೊಟ್ಟವರು ಅಂಬೇಡ್ಕರ್. ಅಂಬೇಡ್ಕರರ ವಿವೇಕ ಹಾಗೂ ಅರಿವಿನಿಂದ ದಲಿತರು ಎಚ್ಚರಗೊಳ್ಳಬೇಕು. ಅಧಿಕಾರ ಎನ್ನುವುದು ಸಂಘಟನಾತ್ಮಕ ಅರಿವಿನಿಂದ, ಸಂಘಟನೆಯ ಬೆಂಬಲದಿಂದ ಬಂದಾಗ ಮಾತ್ರ ದಲಿತ ಹಾಗೂ ಸಾಮಾಜಿಕವಾಗಿ ಕೆಳಸ್ತರದಲ್ಲಿರುವ ಜನರಿಗೆ ಮುಕ್ತಿ ದೊರಕಲು ಸಾಧ್ಯ ಎಂದು ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಜಯಪ್ರಕಾಶ್ ಶೆಟ್ಟಿ ಅವರು ಹೇಳಿದರು.
  ಬೈಂದೂರಿನ ಡಾ. ಬಿ.ಆರ್. ಅಂಬೇಡ್ಕರ್ ಸಂಘ ಮತ್ತು ಡಾ. ಬಿ. ಆರ್. ಅಂಬೇಡ್ಕರ್ ಮಹಿಳಾ ಸಂಘ ಆಶ್ರಯದಲ್ಲಿ ಬೈಂದೂರಿನ ಶಾರದಾ ವೇದಿಕೆಯಲ್ಲಿ ರವಿವಾರ ಸಂಜೆ ಜರಗಿದ ಡಾ. ಬಿ. ಆರ್. ಅಂಬೇಡ್ಕರ್ ಅವರ 122ನೇ ಜನ್ಮದಿನಾಚರಣೆ ಮತ್ತು ಉಭಯ ಸಂಘಗಳ 18ನೇ ವಾಷರ್ಿಕೋತ್ಸವ ಸಮಾರಂಭದಲ್ಲಿ ಅವರು ಪ್ರಮುಖ ಭಾಷಣ ಮಾಡಿದರು. 
  ಬೈಂದೂರಿನ ಅಂಜಲಿ ಆಸ್ಪತ್ರೆಯ ಡಾ. ಅಣ್ಣಪ್ಪ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ ನ್ಯಾಯವಾದಿ ಟಿ. ಮಂಜುನಾಥ ಗಿಳಿಯಾರು, ರಂಗಚಿಂತಕ ಸತ್ಯನಾ ಕೊಡೇರಿ ಮಾತನಾಡಿದರು. ಅಂಬೇಡ್ಕರ್ ಮಹಿಳಾ ಸಂಘದ ಅಧ್ಯಕ್ಷೆ ಮರ್ಲ ಪಿ., ಅಂಬೇಡ್ಕರ್ ಸಂಘದ ಗೌರವ ಸಲಹೆಗಾರ ಚಂದ್ರ ಕೆ. ಹೆಮ್ಮಾಡಿ ಮೊದಲಾದವರು ಉಪಸ್ಥಿತರಿದ್ದರು.
  ಅಂತಾರಾಷ್ಟ್ರೀಯ ಕ್ರೀಡಾಪಟು ಕಿಶೋರ್ಕುಮಾರ್ ಎಚ್. ಮತ್ತು ಮರಣೋತ್ತರ ದೇಹದಾನ ಮಾಡಿದ ಸಾಮಾಜಿಕ ಕಾರ್ಯಕರ್ತ ಕೋಣಿ ವೆಂಕಟೇಶ್ ನಾಯಕ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಲಿಂಗೇಶ್ವರ ಕಿರಿಮಂಜೇಶ್ವರ ಮತ್ತು ಹೃದಯ ಸಮಸ್ಯೆಯಿಂದ ಬಳಲುತ್ತಿರುವ ಅರುಣ ನಾವುಂದ ಅವರಿಗೆ ಆಥರ್ಿಕ ಸಹಾಯವನ್ನು ವಿತರಿಸಲಾಯಿತು.
  ಸಂಘದ ಗೌರವಾಧ್ಯಕ್ಷ ಸುರೇಶ್ಕುಮಾರ್ ಸ್ವಾಗತಿಸಿದರು. ಮಹಿಳಾ ಸಂಘದ ಕಾರ್ಯದಶರ್ಶಿ  ಚೈತ್ರಾ ಯಡ್ತರೆ ವರದಿವಾಚಿಸಿದರು. ಪ್ರಧಾನ ಕಾರ್ಯದರ್ಶಿ ಪಿ. ದಯಾನಂದ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಅಧ್ಯಕ್ಷ ಲಕ್ಷ್ಮಣ ಎಸ್. ಯಡ್ತರೆ ವಂದಿಸಿದರು.


ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com