‘ಮಳೆಬಿಲ್ಲು’ ಕವನ ಸಂಕಲನ ಬಿಡುಗಡೆ


ಕುಂದಾಪುರ: ಇಲ್ಲಿನ ಯುವ ಕವಯತ್ರಿ ಜ್ಯೋತಿ ಆಚಾರ್ಯ ನೇರಳಕಟ್ಟೆ ಇವರ ಚೊಚ್ಚಲ ಕವನ ಸಂಕಲನ ‘ಮಳೆಬಿಲ್ಲು’ ಬಿಡುಗಡೆ ಮತ್ತು ಕವಿಗೋಷ್ಠಿ ಕುಂದಾಪುರದ ಬಿ. ಆರ್. ರಾಯರ ಶಾಲೆಯಲ್ಲಿ ಜರುಗಿತು.
       ಹಾಸ್ಯ ಸಾಹಿತಿ ಕು.ಗೋ ಕಾರ್ಯಕ್ರಮದ ಉದ್ಘಾಟಿಸಿದರು. ಹಿರಿಯ ಸಾಹಿತಿ, ನ್ಯಾಯವಾದಿ ಎ.ಎಸ್.ಎನ್. ಹೆಬ್ಬಾರ್  ಕವನ ಸಂಕಲನವನ್ನು ಬಿಡುಗಡೆಗೊಳಿಸಿದರು. ಲೇಖಕ ವೈ.ಎಸ್ ಹರಗಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.
    ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ನ.ಭ ನೆಂಪು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಅಂತರಾಷ್ಟೀಯ ಖ್ಯಾತಿಯ ಗಾಳಿಪಟ ತಂಡ ‘ಟೀಂ ಮಂಗಳೂರು’ ಸದಸ್ಯ ದಿನೇಶ ಹೊಳ್ಳ ಅವರನ್ನು ಸನ್ಮಾನಿಸಲಾಯಿತು.  ಸತೀಶ್ ಶೆಟ್ಟಿಗಾರ್ ಜಪ್ತಿ ಸ್ವಾಗತಿಸಿ. ಕವಯತ್ರಿ ಜ್ಯೋತಿ ಆಚಾರ್ಯ ನೇರಳಕಟ್ಟೆ ಪ್ರಾಸ್ತಾವಿಕ ಮಾತುಗಳನ್ನಾಡಿದರು ಉದಯ್ ಗಾಂವ್ಕರ್ ಕೃತಿ ಪರಿಚಯಿಸಿದರು . ಅನಂತ ಪ್ರಕಾಶನದ ಗಣೇಶ ಸಾಲಿಯಾನ್ ವಂದಿಸಿ, ವಿದ್ಯಾ ವಾಮಂಜೂರು ಕಾರ್ಯಕ್ರಮ ನಿರ್ವಹಿಸಿದರು. ಬಿಡುಗಡೆ ಸಮಾರಂಭದ ಬಳಿಕ ಯುವ ಕವಿಗೋಷ್ಠಿ ನಡೆಯಿತು.

ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com