ಪ್ರತಿ ಮಗುವಿನಲ್ಲೂ ಸುಪ್ತ ಪ್ರತಿಭೆ ಅಡಗಿದೆ: ವಸಂತ ಹೆಗ್ಡೆ


ಬೈಂದೂರು: ಪ್ರತಿಯೊಂದು ಮಗುವಿನಲ್ಲೂ ಸುಪ್ತವಾದ ಪ್ರತಿಭೆ ಅಡಗಿರುತ್ತದೆ, ಅದನ್ನು ಹೊರಸೂಸಲು ಅವಕಾಶವೀಯಬೇಕು. ಶಿಕ್ಷಣದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ತಮ್ಮನ್ನು ತೊಡಗಿಸಿಕೊಳ್ಳಲು ಪೋಷಕರು ಸಹಕರಿಸಬೇಕು, ಅದರಿಂದ ಸಮಾಜಮುಖಿಯಾದ ಸತ್ಪ್ರಜೆ ಸೃಷ್ಠಿಯಾಗುತ್ತಾನೆ ಎಂದು ಬೈಂದೂರು ರೋಟರಿಯ ಅಧ್ಯಕ್ಷರಾದ ವಸಂತ ಹೆಗ್ಡೆ ಹೇಳಿದರು. 
     ಸುರಭಿ (ರಿ) ಬೈಂದೂರು, ಭಾರತೀಯ ಯುನಸ್ಕೋ ಕ್ಲಬ್ ಬೈಂದೂರು ಹಾಗೂ ಸಂಚಲನ ಹೊಸೂರು ಇವರ ಆಶ್ರಯದಲ್ಲಿ ನಡೆಸುವ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಬೈಂದೂರಿನ ಪರಿಶಿಷ್ಟ ವರ್ಗ ಆಶ್ರಮ ಶಾಲೆಯಲ್ಲಿ ಜರುಗಿದ ಕಾರ್ಯಕ್ರಮವನ್ನು "ಗುಲಾಬಿ ಟಾಕೀಸ್" ಚಲನಚಿತ್ರದ ಬಾಲನಟ ಪ್ರವೀರ್ ಬಂಕೇಶ್ವರ ಉದ್ಘಾಟಿಸಿದರು.
 ಮುಖ್ಯ‌ ಅತಿಥಿಗಳಾಗಿ ಹಿರಿಯ ರಂಗ ವಿಮರ್ಶಕ ಬಿ.ವಿಶ್ವೇಶ್ವರ ಅಡಿಗ, ಜಾದುಗಾರ ಸತೀಶ ಹೆಮ್ಮಾಡಿ, ಮಾಜಿ ರೋಟರಿ ಅಧ್ಯಕ್ಷರಾದ ಮಂಜುನಾಥ ಮಹಾಲೆ, ಎಮ್.ಅಬ್ದುಲ್ ರೆಹಮಾನ್ ಉಪಸ್ಥಿತರಿದ್ದರು. ಸುರಭಿಯ ಗಣಪತಿ ಹೋಬಳಿದಾರ ಪ್ರಾಸ್ತಾವಿಕವಾಗಿ ಮಾತನಾಡಿದರು, ಸುಧಾಕರ ಪಿ. ಕಾರ್ಯಕ್ರಮ ನಿರ್ವಹಿಸಿದರು. 8 ದಿನಗಳ ಕಾಲ ನಡೆಯುವ ಬೇಸಿಗೆ ಶಿಬಿರದಲ್ಲಿ ಗ್ರಾಮೀಣ ಪ್ರದೇಶದ ಹಲವು ಜಾನಪದ ಆಟ, ಕಲೆಯ ಜೊತೆಗೆ ಸಂಗೀತ, ಸಾಹಿತ್ಯ ಹಾಗೂ ಜಾದೂಗಳನ್ನು ಕಲಿಸಲಾಗುವುದು. 

ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com