ಗಂಗೊಳ್ಳಿಯಲ್ಲಿ ಡಾ| ಅಂಬೇಡ್ಕರ್ ಜಯಂತಿ

ಗಂಗೊಳ್ಳಿ : ಹಿಂದುಳಿದ ವರ್ಗಗಳ ಜನರಿಗೆ ಮುಂದಾಗಬಹುದಾದ ಅನ್ಯಾಯವನ್ನು ಅರಿತು ಸಂವಿಧಾನ ರಚನೆ ಸಂದರ್ಭ ಹಿಂದುಳಿದ ವರ್ಗಗಳ ಜನರ ಅಭಿವೃದ್ಧಿಗೆ ಅವಕಾಶ ಕಲ್ಪಿಸಿ, ಹಿಂದುಳಿದ ಜನಾಂಗದವರು ಸಮಾಜದ ಮುಖ್ಯವಾಹಿನಿಗೆ ಬರಲು ಶ್ರಮಿಸಿದ ಡಾ| ಬಿ.ಆರ್.ಅಂಬೇಡ್ಕರ್‌ರವರು ರಾಷ್ಟ್ರ ನಾಯಕರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆದು, ಅವರ ಚಿಂತನೆಗಳು ಸಾಕಾರಗೊಳ್ಳಲು ಎಲ್ಲರೂ ಪ್ರಯತ್ನಿಸಬೇಕು ಜಿಲ್ಲಾ ಪಂಚಾಯತ್ ಸದಸ್ಯ ಅನಂತ ಮೊವಾಡಿ ಹೇಳಿದರು.
      ಅವರು ಭಾನುವಾರ ಗಂಗೊಳ್ಳಿ ಸ.ವಿ.ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಸ್ಥಳೀಯ ಶ್ರೀ ಇಂದುಧರ ಯುವಕ ಮಂಡಲದ ಆಶ್ರಯದಲ್ಲಿ ಜರಗಿದ ಡಾ| ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
      ಉಪ್ಪುಂದ ಕರ್ಣಾಟಕ ಬ್ಯಾಂಕಿನ ಅಸಿಸ್ಟೆಂಟ್ ಮ್ಯಾನೇಜರ್ ಮಹಾಬಲ ಕೆ. ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ, ಗಂಗೊಳ್ಳಿ ಗ್ರಾ.ಪಂ. ಸದಸ್ಯ ಬಿ.ರಾಘವೇಂದ್ರ ಪೈ, ಸ.ವಿ.ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಸುಮನಾ ಪಡಿಯಾರ್, ಬೀಜಾಡಿ ಕೆನರಾ ಬ್ಯಾಂಕಿನ ಶ್ಯಾಮ್‌ಸುಂದರ್, ನಿವೃತ್ತ ಬಂದರು ಅಧಿಕಾರಿ ಮೊನಪ್ಪ ಅದ್ಯಪಾಡಿ ಶುಭಾಶಂಸನೆಗೈದರು. ಇದೇ ಸಂದರ್ಭ ಹವ್ಯಾಸಿ ಯಕ್ಷಗಾನ ಕಲಾವಿದರಾದ ನಾಯಕವಾಡಿಯ ಸುಬ್ಬ ಜಿ. ಮತ್ತು ಶ್ರೀಧರ ಎನ್. ಅವರನ್ನು ಸನ್ಮಾನಿಸಲಾಯಿತು. ಯುವಕ ಮಂಡಲದ ವತಿಯಿಂದ ಸ.ವಿ.ಹಿರಿಯ ಪ್ರಾಥಮಿಕ ಶಾಲೆಗೆ ಗ್ರೈಂಡರ್‌ನ್ನು ಹಾಗೂ ಶ್ರೀ ಇಂದುಧರ ದೇವಸ್ಥಾನಕ್ಕೆ ಚಾರ್ಜರ್ ಲೈಟ್‌ನ್ನು ಕೊಡುಗೆಯಾಗಿ ನೀಡಲಾಯಿತು. ಕುಂದಾಪುರ ಕೆನರಾ ಬ್ಯಾಂಕಿನ ರವೀಂದ್ರ ಕೆ., ಗ್ರಾ.ಪಂ. ಸದಸ್ಯೆ ನಾಗಮ್ಮ, ಯುವಕ ಮಂಡಲದ ಗೌರವಾಧ್ಯಕ್ಷ ಅರುಣ್‌ಕುಮಾರ್ ಜಿ.ಬಿ., ಪ್ರಧಾನ ಕಾರ್ಯದರ್ಶಿ ಸುನೀಲ್ ಜಿ.ಎಂ. ಉಪಸ್ಥಿತರಿದ್ದರು.
     ಯುವಕ ಮಂಡಲದ ಅಧ್ಯಕ್ಷ ಸುಂದರ ಬೇಣದಮನೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com