ಮರವಂತೆ ಗ್ರಾ.ಪಂ. ಗೆ ಪ್ರಶಸ್ತಿ


ಕುಂದಾಪುರ: ಪಂಚಾಯಿತಿಗಳ ಸಬಲೀಕರಣ ಮತ್ತು ಉತ್ತರದಾಯಿತ್ವ ಪ್ರೋತ್ಸಾಹ ಯೋಜನೆ (ಪಿಇಎಐಎಸ್) ರಾಷ್ಟ್ರೀಯ ಪ್ರಶಸ್ತಿಗೆ  ತಾಲೂಕಿನ ಮರವಂತೆ ಗ್ರಾ.ಪಂ ಆಯ್ಕೆಯಾಗಿವೆ
     2012-13ನೇ ಸಾಲಿನಲ್ಲಿ ಪಂಚಾಯಿತಿಗಳ ಸಬಲೀಕರಣ ಸಾಧನೆಗಾಗಿ ಈ ಪ್ರಶಸ್ತಿ ನೀಡಲಾಗಿದ್ದು, ಪ್ರಶಸ್ತಿ ಜತೆಗೆ ಆಯಾ ಕ್ಷೇತ್ರಗಳಿಗೆ ಹೆಚ್ಚುವರಿ ಅನುದಾನ ಕೂಡಾ ದೊರೆಯಲಿದೆ. ಗ್ರಾಮ ಪಂಚಾಯಿತಿಗೆ 12 ಲಕ್ಷ ರೂ. ದೊರೆಯಲಿದೆ.
      ಉಡುಪಿಯ ಮೂರೂ ಸ್ಥರದ ಪಂಚಾಯಿತಿ ವ್ಯವಸ್ಥೆ ಒಂದೆ ಬಾರಿ ರಾಷ್ಟ್ರೀಯ ಪ್ರಶಸ್ತಿ ಪಡೆದು ಅಚ್ಚರಿ ಮೂಡಿಸಿದೆ. ಉಡುಪಿ ಜಿ.ಪಂ., ಕಾರ್ಕಳ ತಾ.ಪಂ, ಹಾಗೂ ಮರವಂತೆ ಗ್ರಾ.ಪಂ ಏಕ ಕಾಲದಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿವೆ. 
       ಜಿಲ್ಲಾ ಮಾನವ ಅಭಿವೃದ್ಧಿ ವರದಿ, ಪಂಚವಾರ್ಷಿಕ ಯೋಜನೆ ಅವಗೆ ಜಿಲ್ಲಾ ಸಮಗ್ರ ಅಭಿವೃದ್ಧಿ ವರದಿ, ಜಿಲ್ಲಾ ದೂರದೃಷ್ಟಿ ಯೋಜನೆ ವರದಿ, ಜೆಂಡರ್ ಸಬ್ ಪ್ಲಾನ್ ವರದಿ, ಸ್ವಚ್ಚತಾ ಆಂದೋಲನ, ಆರೋಗ್ಯ ಪ್ರಗತಿ, ಗ್ರಾಮ ಪಂಚಾಯಿತಿ ಮಾಹಿತಿ ಪಂಚತಂತ್ರ ತಂತ್ರಾಂಶದಲ್ಲಿ ಅಳವಡಿಕೆ, ಸಾಕ್ಷರತೆ, ಶೈಕ್ಷಣಿಕತೆ, ಎಲ್ಲ ಗ್ರಾಮ ಪಂಚಾಯಿತಿಗಳ ನಕ್ಷೆ ತಯಾರಿ, ಕುಡಿಯುವ ನೀರು, ರಸ್ತೆಗಳ ವಿವರ, ಶಾಲೆ, ಆರೋಗ್ಯ ಕೇಂದ್ರ ಸಹಿತ ಸಾಮಾನ್ಯ ಮಾಹಿತಿ, ನದಿ, ಕೆರೆ ಮಾಹಿತಿ, ಪ್ರಾಕೃತಿಕ ವಿಕೋಪ ಪ್ರದೇಶಗಳು, ಜಲಾನಯನ ಅಭಿವೃದ್ಧಿ ಕೇಂದ್ರ, ನಾನಾ ಇಲಾಖಾ ಮಾಹಿತಿ, ಸಕಾಲ ಸೇರಿದಂತೆ ಮಾಹಿತಿ ಕಂಪ್ಯೂಟರೀಕರಣ, ಗ್ರಾಮೀಣ ಅಭಿವೃದ್ಧಿಗಳಿಗಾಗಿ ಈ ಪ್ರಶಸ್ತಿ ನೀಡಲಾಗಿದೆ


ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com