ಕುಂದಾಪುರ: ಕುಳಿತಲ್ಲೇ ಭರವಸೆ ನೀಡುತ್ತಾ ರಾಜಕೀಯ ಮಾಡುವವರು ಸಾಧಿಸಿದ್ದೆನೂ ಇಲ್ಲ. ಅಭಿವೃದ್ಧಿ ಎನ್ನುವುದು ನಿಂತ ನೀರಲ್ಲ. ಸದಾ ಕ್ರಿಯಾಶಿಲತೆಯಿಂದ ಜನರ ನಡುವೆ ಬೆರೆಯಬಲ್ಲ ಸಜ್ಜನ ವ್ಯಕ್ತಿಗೆ ಕುಂದಾಪುರದ ಜನತೆ ಮಣೆ ಹಾಕಬೇಕಿದೆ ಎಂದು ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಅವರು ಕುಂದಾಪುರದ ಹೋಟೇಲ್ ಪಾರಿಜಾತದ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ನಡೆದ ಬಿಜೆಪಿ ಅಭ್ಯರ್ಥಿ ಬಿ. ಕಿಶೋರಕುಮಾರ ಅಭಿಮಾನಿ ಬಳಗದ ಸಭೆಯಲ್ಲಿ ಮಾತನಾಡಿದರು.
ಜಾತಿ ಆಧಾರದಲ್ಲಿ ಜನಪ್ರತಿನಿಧಿಯನ್ನು ಆರಿಸುವ ಕೀಳು ಸಂಪ್ರದಾಯಕ್ಕೆ ಮತದಾರರು ಅಂತ್ಯ ಹಾಡಬೇಕು ಎಂದರು.
ಬಿಜೆಪಿ ಅಭ್ಯರ್ಥಿ ಕಿಶೋರಕುಮಾರ ಮಾತನಾಡಿ ಅನೀರಿಕ್ಷಿತ ಬೆಳವಣಿಯಿಂದಾಗಿ ದೊರೆಕಿದ ಅವಕಾಶವನ್ನು ಸಮರ್ಥವಾಗಿ ಜನಸೇವೆಗೆ ಬಳಸಿಕೊಳ್ಳುತ್ತೇನೆ ಎಂಬ ವಿಶ್ವಾಸವಿದೆ. ವ್ಯಕ್ತಿ ಕಾಲಕ್ಕೆ ತಕ್ಕಂತೆ ಬದಲಾಗ ಬಾರದು ಎನ್ನುವ ಸಿದ್ದಾಂತದಲ್ಲಿ ನಂಬಿಕೆ ನಾನು ನಂಬಿಕೆ ಇಟ್ಟಿದ್ದೆನೆ, ಅದರಂತೆ ನಡೆದುಕೊಳ್ಳುತ್ತೆನೆ. ಎಂದರು.
ಇನ್ನಾ ಉದಯ್ಕುಮಾರ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಜೇಸಿ ಸದಾನಂದ ನಾವುಡ ನಿರೂಪಿಸಿದರು, ವಂದಿಸಿದರು.
ಕುಂದಾಪ್ರ ಡಾಟ್ ಕಾಂ - editor@kundapra.com