ರಾಜ್ಯದ ಆರೂವರೆ ಕೋಟಿ ಜನರೇ ಕೆಜೆಪಿ ಪಕ್ಷದ ಹೈಕಮಾಂಡ್: ಚಿತ್ರನಟಿ ಶೃತಿ

ಬೈಂದೂರು: ರಾಷ್ಟ್ರೀಯ ಪಕ್ಷದ ಹೈಕಮಾಂಡ್ ದೆಹಲಿಯಲ್ಲಿದ್ದರೆ, ಒಂದು ಪ್ರಾದೇಶಿಕ ಪಕ್ಷದ ಹೈಕಮಾಂಡ್ ಮನೆಯಲ್ಲಿದ್ದು ಅದು ಅಪ್ಪ ಮಕ್ಕಳ ದರಬಾರಿನ ಪಕ್ಷ, ಇನ್ನೋಂದು ಪಕ್ಷದ ಹೈಕಮಾಂಡ್ ಜೈಲಿನಲ್ಲಿದ್ದರೆ, ಉಳಿದೊಂದು ಪಕ್ಷದ ಹೈಕಮಾಂಡ್ ಕರೆಂಟ್ ಇದ್ದರೆ ಮಾತ್ರ ಕಾರ್ಯವೆಸಗುತ್ತದೆ ಆದರೆ ನಮ್ಮ ಕೆಜೆಪಿ ಪಕ್ಷದ ಹೈಕಮಾಂಡ್ ಈ ರಾಜ್ಯದ ಆರೂವರೆ ಕೋಟಿ ಜನರು ಆಗಿದ್ದಾರೆ ಎಂದು ನಟಿ ಶೃತಿ ಹೇಳಿದರು.
     ಅವರು ಉಪ್ಪುಂದದ ಪೇಟೆಯಲ್ಲಿ ಕೆಜೆಪಿ ಅಭ್ಯರ್ಥಿ ನವೀನ ಚಂದ್ರ ಉಪ್ಪುಂದ ಪರ ಪ್ರಚಾರ ಸಭೆಯಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡಿದರು.
      ಪಕ್ಷದ ಪ್ರಣಾಳಿಕೆಯನ್ನು ನೋಡಿಯೋ ಅಥವಾ ಅವರು ಕೊಡುವ ಹಣ ಹೆಂಡಕ್ಕೋ ಮತವನ್ನು ಮಾರಿಕೊಳ್ಳದೇ ಅಭ್ಯರ್ಥಿಯ ಧ್ಯೆಯ ಹಾಗೂ ಉದ್ದೇಶವನ್ನು ನೋಡಿ ಮತ ಹಾಕುಬೇಕು, ಎಂದಿಗೂ ಸಾಧನೆಯೇ ಮಾತಾಗಬೇಕೇ ಹೊರತು ಮಾತೇ ಸಾಧನೆಯಾಗಬಾರದು, ಪಕ್ಷಕ್ಕೆ ಹಾಗೂ ನಾವಾಡುವ ಮಾತಿಗೆ ಬದ್ದರಾಗಿ ಕಾರ್ಯ ಮಾಡಬೇಕು. ಜನರ ಕೈಯಲ್ಲಿರೋ ಮತ ಅವರ ತಾಯಿಗೆ ಸಮಾನವಾಗಿದೆ ಅದನ್ನು ಹಣಕ್ಕಾಗಿ ಎಂದಿಗೂ ಮಾರಬಾರದು ಎಂದು ಅವರು ಈ ಸಂದರ್ಭದಲ್ಲಿ ಅವರು ಹೇಳಿದರು.
      ಬೈಂದೂರು ವಿಧಾನಸಭಾ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ನವೀನ ಚಂದ್ರ ಉಪ್ಪುಂದ ಮಾತನಾಡಿ ` ನಮ್ಮ ನಾಯಕರಾದ ಬಿ.ಎಸ್.ಯಡಿಯೂರಪ್ಪರವರ ಸಾಧನೆಯನ್ನು ನೋಡಿ ಈ ಕ್ಷೆತ್ರದಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ, ಎಲ್ಲರೂ ಸಮಾನರೂ ಎಂಬ ಮನಸ್ಕರಾದ ಯಡಿಯೂರಪ್ಪ ಸರ್ವರಿಗೂ ಸ್ಥಾನಮಾನ ಸಿಗಲು ಆಶಿಸುತ್ತಾರೆ, 20 ವರ್ಷಗಳಿಂದ ತಾನೂ ಸಾಮಾಜಿಕ ಸೇವೆಯಲ್ಲಿ ತೊಡಗಿದ್ದು ಯಾವುದೇ ಈವರೆಗೂ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲವಾದರೂ ಕೂಡ ಬಹುತೇಕ ಚುನಾವಣೆಗಳಲ್ಲಿ ಕೆಲಸ ಮಾಡಿದ ಅನುಭವವಿದೆ. 10 ದಿನಗಳಲ್ಲಿ ಇಲ್ಲಿನ 240 ಬೂತ್ ಗಳಲ್ಲಿನ 200 ಕ್ಕೂ ಹೆಚ್ಚಿನ ಬೂತ್ ಗಳಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸುವ ಮೂಲಕ ಚುನಾವಣಾ ತಯಾರಿ ನಡೆಸಿದ್ದೆವೆ. ಯಡಿಯೂರಪ್ಪನವರೂ ಕ್ಷೆತ್ರಕ್ಕೆ ನೀಡಿದ ಅಭಿವ್ರದ್ದಿ ಕಾರ್ಯಗಳನ್ನು ಮನಗಂಡು ಮತದಾರರು ಮತ ನೀಡಬೇಕು ಹಾಗೆಯೇ ಆದರ್ಶವನ್ನು ಮೆರೆಯುವ ಪ್ರತಿಯೊಬ್ಬರೂ ಕೆಜೆಪಿಗೆ ಮತಹಾಕಬೇಕು ಎಂದು ಅವರು ಹೇಳಿದರು.
    ಕೆಜೆಪಿ ಜಿಲ್ಲಾಧ್ಯಕ್ಷ ಅಶೋಕ ಶೆಟ್ಟಿ, ಉಪಾಧ್ಯಕ್ಷ ಸುಭಾಷ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಧುಕರ ಮುದ್ರಾಡಿ, ಕೆಜೆಪಿ ಮುಖಂಡ ಹಾಗೂ ಚಿತ್ರ ನಿರ್ದೇಶಕ ರಾಜಬಲ್ಲಾಳ್, ವಿಜಯ ಕುಮಾರ್, ವಿರೇಂದ್ರ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯ ಪ್ರಸನ್ನ ಕುಮಾರ್, ಸುಶೀಲ ದೇವಾಡಿಗ, ಸಂಜೀವ ಖಾರ್ವಿ, ಸೀತಾ ಹೆರಿಯ, ರಾಜು ದೇವಾಡಿಗ, ನಾಗಮ್ಮ ದೇವಾಡಿಗ, ಮಂಜು ದೇವಾಡಿಗ, ಕೇಶವ ಪ್ರಭು ಮೊದಲಾದವರು ಉಪಸ್ಥಿತರಿದ್ದರು.
   ಮೂರ್ತಿ ಬೈಂದೂರು ಪ್ರಾರ್ಥಿಸಿದರು, ಜಯರಾಂ ಕಾರ್ಯಕ್ರಮ ನಿರೂಪಿಸಿದರು, ಜಗನ್ನಾಥ ಉಪ್ಪುಂದ ಸ್ವಾಗತಿಸಿ, ಗೌರಿ ದೇವಾಡಿಗ ವಂದಿಸಿದರು.


ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com