ಕುಂದಾಪುರ: 56 ಸಾವಿರ ಕೋಟಿ ಇದ್ದ ರಾಜ್ಯದ ಒಟ್ಟು ಆಂತರಿಕ ಮತ್ತು ಬಾಹ್ಯ ಸಾಲಸಾಲ ಬಿಜೆಪಿಯ ಆಡಳಿತಾವಧಿಯಲ್ಲಿ 1 ಲಕ್ಷ 46 ಸಾವಿರ ಕೋಟಿ ಆಗಿದೆ. ಇಷ್ಟು ದೊಡ್ಡ ಮಟ್ಟದ ಸಾಲದಿಂದ ಯಾವ ಅಭಿವದ್ಧಿ ಯೋಜನೆ ಜಾರಿಮಾಡಿದ್ದಾರೆ. ರಾಜ್ಯ ತೀವ್ರ ವಿದ್ಯುತ್ ಕೊರತೆಯಿಂದ ಬಳಲುತ್ತಿದೆ. ಈ ಸಾಲದಲ್ಲಿ ವಿದ್ಯುತ್ ಸಮಸ್ಯೆ ನೀಗಿಸಲು ವಿದ್ಯುತ್ ಯೋಜನೆ ಹೊಸದಾಗಿ ರೂಪಿಸಿದ್ದಾರಾ ಎಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಜಿ.ಎನ್. ನಾಗರಾಜ್ ಪ್ರಶ್ನಿಸಿದರು.
ಸಿದ್ದಾಪುರ ಸಂತೆ ಮಾರುಕಟ್ಟೆ ಬಳಿ ಬೆಂದೂರು ವಿಧಾನಸಭೆ ಕ್ಷೇತ್ರದ ಸಿಪಿಐಎಂ ಅಭ್ಯರ್ಥಿ ಕೆ. ಶಂಕರ್ ಪರ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ನಡೆದಿರುವ ಸರ್ಕಾರಿ ಭೂಮಿಯ ಅಕ್ರಮ ಕಬಳಿಕೆಯಿಂದಾಗಿ ಸುಮಾರು 12 ಲಕ್ಷ ಎಕರೆ ಸರ್ಕಾರಿ ಭೂಮಿ ಭೂಗಳ್ಳರ ಪಾಲಾಗಿದೆ. ರಾಜ್ಯ ಸರ್ಕಾರಕ್ಕೆ ಎಲ್ಲ ರೀತಿಯ ಸಾಕ್ಷ್ಯಾಧಾರಗಳಿದ್ದರೂ ಕೂಡ ಭೂಗಳ್ಳರಿಂದ ಭೂಮಿಯ ಮರುವಶಕ್ಕೆ ಕ್ರಮಕೈಗೊಳ್ಳಲು ಆಸಕ್ತಿಯೇ ಇಲ್ಲ ಎಂದು ಅವರು ಟೀಕಿಸಿದರು.
ಸಿಪಿಐಎಂ ಅಭ್ಯರ್ಥಿ ಕೆ. ಶಂಕರ, ಮುಖಂಡರಾದ ಎಚ್.ವಿಠಲ ಪೂಜಾರಿ, ಬೆಂದೂರು ವಲಯ ಸಮಿತಿ ಕಾರ್ಯದರ್ಶಿ ವೆಂಕಟೇಶ ಕೋಣಿ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ - editor@kundapra.com