ಉಪ್ಪುಂದ: ತಂದೆ-ತಾಯಿ ಉತ್ತಮ ಸ್ನೇಹಿತರು. ಶಾಲೆಯಲ್ಲಿ ಕಲಿತ ದೈನಂದಿನ ಚಟುವಟಿಕೆಗಳ ಕುರಿತು ಹೆತ್ತವರೊಂದಿಗೆ ದಿನವೂ ಮಕ್ಕಳು ವಿಚಾರವಿನಿಮಯ ನಡೆಸಬೇಕು. ಹೆತ್ತವರು ಮಕ್ಕಳ ಪ್ರತಿಭೆಯನ್ನು ಗುರತಿಸಲು ಇದು ನೆರವಾಗುತ್ತದೆ. ಪರಸ್ಪರ ಜ್ಞಾನವನ್ನು ಹಂಚುವುದರಿಂದ ವ್ಯಕ್ತಿತ್ವದ ಬೆಳವಣಿಗೆ ಸಾಧ್ಯ ಎಂದು ಶಿಕ್ಷಕಿ ನಾಗರತ್ನಾ ಶೇಟ್ ಗಂಗೊಳ್ಳಿ ಅವರು ಹೇಳಿದರು.
ಉಪ್ಪುಂದದ ಗ್ರಾಮವಿಕಾಸ ಸಮಿತಿ ಹಾಗೂ ಅಂಬಾಗಿಲು ಸೇವಾಸಂಗಮ ಶಿಶುಮಂದಿರದ ಆಶ್ರಯದಲ್ಲಿ ಇಲ್ಲಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹತ್ತು ದಿನಗಳ ಕಾಲ ನಡೆದ ವಸಂತ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಪ್ರಮುಖ ಭಾಷಣ ಮಾಡಿದರು.
ಗ್ರಾಮವಿಕಾಸ ಸಮಿತಿಯ ಗೌರವಾಧ್ಯಕ್ಷ ಕೇಶವ ಪ್ರಭು ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕ ಮುಡೂರ ಅಂಬಾಗಿಲು, ಸಂಪನ್ಮೂಲ ವ್ಯಕ್ತಿಗಳಾದ ಯು. ರಾಜಾರಾಮ ಭಟ್, ಸುಬ್ರಹ್ಮಣ್ಯ ಜಿ., ಮಹಾಬಲ ಕೆ. ಕಿರಿಮಂಜೇಶ್ವರ, ಮಂಗೇಶ್ ಶೆಣೈ ಯಳಜಿತ್, ಚಂದ್ರ ಕೆ. ಹೆಮ್ಮಾಡಿ, ಭಾರತಿ, ಜಯಶ್ರೀ ಭಟ್, ಬಿ. ಪಿ. ಶೆಟ್ಟಿ, ಶೇಖರ್, ದಿನೇಶ್, ಕೃಷ್ಣ ಗಾಣಿಗ, ಸುಧಾಕರ್, ರಮೇಶ್ ಗಾಣಿಗ, ಶಂಕರನಾರಾಯಣ ಭಟ್, ರಾಮಕೃಷ್ಣ, ಗಣೇಶ್, ವಾಸುದೇವ ಗಂಗೇರ ಹಾಗೂ ಶಿಶುಮಂದಿರದ ಮಾತಾಜೀಯವರಾದ ಸುಜಾತಾ ಮತ್ತು ರತ್ನಾ ಮೊದಲಾದವರು ಉಪಸ್ಥಿತರಿದ್ದರು.
ಶಿಬಿರಾಥರ್ಿ ಅನುಪಮಾ ಸ್ವಾಗತಿಸಿದರು. ಸುರಜ್ ಮತ್ತು ತೇಜಸ್ವಿನಿ ಶಿಬಿರದ ಅನಿಸಿಕೆ ಹಂಚಿಕೊಂಡರು. ಗ್ರಾಮವಿಕಾಸ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ಐತಾಳ್ ಕಾರ್ಯಕ್ರಮ ನಿರ್ವಹಿಸಿದರು. ನಮೃತಾ ವಂದಿಸಿದರು.
ಕುಂದಾಪ್ರ ಡಾಟ್ ಕಾಂ - editor@kundapra.com