ವಕ್ವಾಡಿ: ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯಿಂದ ಇಡೀ ಸಮಾಜಕ್ಕೆ ಲೋಕ ಕಲ್ಯಾಣ ಪ್ರಾಪ್ತಿಯಾಗುತ್ತದೆ. ವಕ್ವಾಡಿಯ 45 ವಿಶ್ವಕರ್ಮ ಕುಟುಂಬಗಳಿರುವ ಈ ಸಣ್ಣ ಗ್ರಾಮಕ್ಕೆ ವಿಶ್ವ ಬ್ರಾಹ್ಮಣಪುರ ಎಂದು ಹೆಸರನ್ನಿಟ್ಟಿರುವುದು ಕರ್ನಾಟಕದಲ್ಲೇ ಪ್ರಥಮ ಎಂದು ಶ್ರೀಕಾಳಹಸ್ತೇಂದ್ರ ಸರಸ್ವತೀ ಸ್ವಾಮಿಜಿ ಹೇಳಿದರು.
ವಕ್ವಾಡಿ ವಿಶ್ವಬ್ರಾಹ್ಮಣ ಸಂಘದ ಸಹಕಾರದೊಂದಿಗೆ ಶ್ರೀ ನಂದೀಕೇಶ್ವರ ಸ್ವಸಹಾಯ ಸಂಘ, ಶ್ರೀ ಮಹಾಲಿಂಗೇಶ್ವರ ಸ್ವಸಹಾಯ ಸಂಘ, ಶ್ರೀ ಕಾಳಿಕಾಂಬಾ ಮಹಿಳಾ ಸ್ವಸಹಾಯ ಸಂಘ ಆಶ್ರಯದಲ್ಲಿ ಗುರುವಾರ ಜರುಗಿದ ವಾರ್ಷಿಕೋತ್ಸವ ಮತ್ತು ಸಾಮೂಹಿಕ ಸತ್ಯನಾರಾಯಣ ಪೂಜೆ ಮಹೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ಮಾಡಿದರು.
ಈ ಸಂದರ್ಭ ಸಮಾಜದ ಹಿರಿಯ ನಾಗರಿಕರು ಹಾಗೂ ಸಂಸ್ಥೆ ಏಳಿಗೆಗಾಗಿ ದುಡಿದ ವಿಶ್ವಕರ್ಮ ಯುವಕ ಸೇವಾ ಸಂಘ ಕೋಟೇಶ್ವರದ ಅಧ್ಯಕ್ಷ ಆನಂದ ಆಚಾರ್ಯ ಹಾಗೂ ಪಣಿಯ ಆಚಾರ್ ಅವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ವಕ್ವಾಡಿ ಶ್ರೀ ನಂದೀಕೇಶ್ವರ ಸ್ವಸಹಾಯ ಸಂಘ ಅಧ್ಯಕ್ಷ ಶ್ರೀನಿವಾಸ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ನಾಗಲಾಪುರದ ಉದ್ಯಮಿ ಎನ್.ಆರ್. ಭೋಜರಾಜ್, ಸಿವಿಲ್ ಕಂಟ್ರಾಕ್ಟರ್ ಶ್ರೀಧರ್ ಆಚಾರ್ಯ, ಕುಂದಾಪುರ ವಿಶ್ವಕರ್ಮ ಯುವ ಒಕ್ಕೂಟದ ರಾಜಗೋಪಾಲ ಆಚಾರ್ಯ ಕೋಟೇಶ್ವರ, ವಕ್ವಾಡಿ ವಿಶ್ವ ಬ್ರಾಹ್ಮಣ ಸಂಘದ ಗೌರವಾಧ್ಯಕ್ಷ ವಿ.ಟಿ. ಬಾಬು ರಾವ್ ಆಚಾರ್, ಅಧ್ಯಕ್ಷ ದಯಾನಂದ ಆಚಾರ್ಯ, ಶ್ರೀಮಹಾಲಿಂಗೇಶ್ವರ ಸ್ವಸಹಾಯ ಸಂಘದ ಅಧ್ಯಕ್ಷ ಕೆ. ದಯಾನಂದ ಆಚಾರ್ಯ, ಕಾಳಿಕಾಂಬಾ ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷೆ ಸುಜಾತ ರಾಮಚಂದ್ರ ಆಚಾರ್ಯ ಉಪಸ್ಥಿತರಿದ್ದರು.
ಕೃಷ್ಣ ಆಚಾರ್ ಸ್ವಾಗತಿಸಿದರು. ಎಂ. ರಾಘವೇಂದ್ರ ಆಚಾರ್ ವರದಿ ಮಂಡಿಸಿದರು. ಜಿ. ರಾಘವೇಂದ್ರ ಆಚಾರ್ ಕಾರ್ಯಕ್ರಮ ನಿರ್ವಹಿಸಿದರು. ವಿ.ಬಿ. ನಾಗರಾಜ್ ಆಚಾರ್ ವಂದಿಸಿದರು.
ಕುಂದಾಪ್ರ ಡಾಟ್ ಕಾಂ - editor@kundapra.com