ಕುಂದಾಪುರ: ಇಲ್ಲಿನ ನಾರಾಯಣಗುರು ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ, ಬಿಎಸ್ಸಾರ್ ಕಾಂಗ್ರೇಸ್, ಜಯಕರ್ನಾಟಕ ಸಂಘಟನೆ ಮತ್ತಿತ್ತರ ಪಕ್ಷಗಳಿಂದ ನೂರಾರು ಕಾರ್ಯಕರ್ತರು ಕಾಂಗ್ರೇಸ್ ಪಕ್ಷಕ್ಕೆ ವಿದ್ಯುಕ್ತವಾಗಿ ಸೇರ್ಪಡೆಗೊಂಡರು. ಸೇರ್ಪಡೆಯ ನೇತೃತ್ವವನ್ನು ಶರತ್ಕುಮಾರ್ ಶೆಟ್ಟಿ, ಅರುಣ್ ಶೇಟ್, ವಾಸುದೇವ ಶೆಣೈ, ಅಬ್ದುಲ್ ವಾಹಿದ್, ಬಿ.ಪ್ರಸಾದ್ ಕುಂದಾಪುರ, ರಮಾನಂದ ಶೆಟ್ಟಿ ವಹಿಸಿದ್ದರು.
ವೇದಿಕೆಯಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದ ಕೆ.ಜಯಪ್ರಕಾಶ ಹೆಗ್ಡೆ, ಕಾಂಗ್ರೇಸ್ ಅಭ್ಯರ್ಥಿ, ಮಲ್ಯಾಡಿ ಶಿವರಾಮ್ ಶೆಟ್ಟಿ, ಹಿರಿಯ ಕಾಂಗ್ರೇಸಿಗರಾದ ಕೆ.ರಾಧಾಕೃಷ್ಣ ಅಡಿಗ, ಎಸ್.ದಿನಕರ ಶೆಟ್ಟಿ, ರಾಮಕೃಷ್ಣ ಹೇರ್ಳೆ, ಬ್ಲಾಕ್ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಜ್ಯೋತಿ ವಿ.ಪುತ್ರನ್, ಮಾಜಿ ಪುರಸಭಾ ಅಧ್ಯಕ್ಷರಾದ ದೇವಕಿ ಪಿ.ಸಣ್ಣಯ್ಯ, ಹಾರೂನ್ ಸಾಹೇಬ್, ಮಾಜಿ ಪುರಸಭಾ ಉಪಾಧ್ಯಕ್ಷರಾದ ಲೇನಿ ಕ್ರಾಸ್ತಾ, ನಗರ ಕಾಂಗ್ರೇಸ್ ಅಧ್ಯಕ್ಷ ಗಣೇಶ್ ಶೇರೆಗಾರ, ಕೋಟ ಬ್ಲಾಕ್ ಯುವ ಕಾಂಗ್ರೇಸ್ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ, ಪುರಸಭಾ ಸದಸ್ಯರಾದ ಚಂದ್ರಶೇಖರ್ ಖಾರ್ವಿ, ಶ್ರೀಧರ ಶೇರೆಗಾರ, ಪ್ರಭಾಕರ ಕೋಡಿ, ಸಂದೀಪ್ ಪೂಜಾರಿ, ಪುಷ್ಪಾ ಶೇಟ್, ವಸಂತಿ ಸಾರಂಗ, ಶಕುಂತಲಾ ಗುಲ್ವಾಡಿ, ರವಿಕಲಾ ಗಣೇಶ್, ಜ್ಯೋತಿ ಮುಂತಾದವರು ಭಾಗವಹಿಸಿದ್ದರು.
ನಗರ ಕಾಂಗ್ರೇಸ್ ಕಾರ್ಯದರ್ಶಿ ವಿನೋದ ಕ್ರಾಸ್ತಾ ಸ್ವಾಗತಿಸಿ, ಬ್ಲಾಕ್ ಕಾಂಗ್ರೇಸ್ ಕಾರ್ಯದರ್ಶಿ ನಾರಾಯಣ ಆಚಾರ್ ಕಾರ್ಯಕ್ರಮ ನಿರ್ವಹಿಸಿ, ಉದಯ ಪೂಜಾರಿ ವಂದಿಸಿದರು.
ಕುಂದಾಪ್ರ ಡಾಟ್ ಕಾಂ - editor@kundapra.com