ಹಾಲಾಡಿ ಪರ ಬೆಂಬಲಿಗರ ಅಂಚೆ ಪ್ರಚಾರ


ಕುಂದಾಪುರ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕುಂದಾಫುರದ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಪರವಾಗಿ ಅವರ ಬೆಂಬಲಿಗರು ಕುಂದಾಪುರ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದು ಇದೀಗ ಅಂಚೆ ಪ್ರಚಾರದ ಮೂಲಕ ಪ್ರಚಾರ ಆರಂಭಿಸಿದ್ದಾರೆ.
     ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗೆ ಆರೋಗ್ಯದ ಸಮಸ್ಯೆ ಇರುವುದರಿಂದ ಮನೆಮನೆಗೆ ಭೇಟಿ ನೀಡಲು ಸಾಧ್ಯವಾಗದ  ಹಿನ್ನೆಲೆಯಲ್ಲಿ ಅಂಚೆ ಮೂಲಕ ಮತದಾರನಿಗೆ ಮನವಿಯನ್ನು ತಲುಪಿಸುವ ಕಾರ್ಯಕ್ಕೆ ಅವರ ಬೆಂಬಲಿಗರು ಮುಂದಾಗಿದ್ದಾರೆ. ಈಗಾಗಲೇ ಅವರ ಜನಸೇವಾ ಕೇಂದ್ರದಲ್ಲಿ ಅಂಚೆ ಮೂಲಕ ರವಾನಿಸಲು ಮನವಿಪತ್ರ ಸಿದ್ಧಗೊಂಡಿದೆ. ಈವರೆಗೂ ಪ್ರಚಾರದಲ್ಲಿ ಕಾಣಿಸಿಕೊಳ್ಳದೇ ಬೆಂಬಲಿಗರ ಮೂಲಕವೇ ಮತದಾರನನ್ನು ತಲುಪಲು ಹೋರಟಿರುವ ಈ ಪ್ಲ್ಯಾನ್ ಎಷ್ಟರ ಮಟ್ಟಿಗೆ ಯಶ ಕಾಣಲಿದೆ ಎಂಬುದು ಕಾದು ನೋಡಬೇಕಾಗಿದೆ.


ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com