ಜನಸೇವೆ ಮಾಡಿದ ತೃಪ್ತಿ ನನಗಿದೆ: ಹಾಲಾಡಿ


ಕುಂದಾಪುರ: ಹಲವು ವರ್ಷ ವಿರೂಧ ಪಕ್ಷದ ಶಾಸಕನಾಗಿ ಸೇವೆ ಸಲ್ಲಿಸುವ ಮೂಲಕ ನಮ್ಮ ಕ್ಷೇತ್ರದ ಶಾಂತಿ ಕಾಪಾಡಿಕೊಂಡು ಬರುವುದರೊಂದಿಗೆ ಜನತೆಗೆ ಸಾಮಾಜಿಕ ನ್ಯಾಯ ನಿಡಿದ ಸತೃಪ್ತಿ ತನಗಿದೆ ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ, ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದರು.
     ಅವರ ಕುಂದಾಪುರದ ಆರ್.ಎನ್. ಶೆಟ್ಟಿ ಸಭಾಭವನದಲ್ಲಿ ನಡೆದ 'ನಮಗಾಗಿ ನೀವು ನಿಮ್ಮೋಂದಿಗೆ ನಾವು' ಹಿತೈಷಿಗಳು, ಅಭಿಮಾನಿಗಳು ಹಾಗೂ ಕಾರ್ಯಕರ್ತರ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
  ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಸದನದಲ್ಲಿ ರಾಜ್ಯದ ಆಶ್ರಯ ಮನೆಗಳು, ಮತ್ಸ್ಯ ಕ್ಷಾಮ, ಅಂಗನವಾಡಿ ಕಾರ್ಯಕರ್ತರು, ಗ್ರಾಮ ಸಹಾಯಕರ ಬಗ್ಗೆ ಮಾತನಾಡಿದ ದಾಝಲೆಗಳಿವೆ. ಆದರೆ ವಿರೋಧ ಪಕ್ಷದವರು ಸದನದಲ್ಲಿ ಹಾಲಾಡಿ ಮಾತನಾಡಿಲ್ಲ, ಕುಂದಾಪುರ ಕ್ಷೇತ್ರ ಅಭಿವೃದ್ಧಿಯಾಗಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಹೀಗೆ ಆರೋಪಿಸುವವರು ಕುಂದಾಪುರ ವನ್ನು ಒಮ್ಮೆ ಬೇರೆ ಕ್ಷೇತ್ರಗಳೊಂದಿಗೆ ಹೋಲಿಕೆ ಮಾಡಿ ನೋಡಲಿ ಎಂದರು.
     
ಕಾರ್ಯಕ್ರಮದಲ್ಲಿ ವಕೀಲ ಟಿ. ಬಾಲಚಂದ್ರ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಗಣಪತಿ ಟಿ. ಶ್ರೀಯಾನ್, ಪ್ರಕಾಶ್ ಟಿ ಮೆಂಡನ್, ತಾಲೂಕು ಪಂಚಾಯತ್ ಸದಸ್ಯ ಮಂಜು ಬಿಲ್ಲವ, ಅಖಿಲ ಭಾರತ ಕೊಂಕಣ ಖಾರ್ವಿ ಸಭಾದ ಅಧ್ಯಕ್ಷ ಕೆ.ಬಿ.ಖಾರ್ವಿ 
ತಾ.ಪಂ.ಅಧ್ಯಕ್ಷೆ ದೀಪಿಕಾ ಶೆಟ್ಟಿ, ಎಪಿ‌ಎಂಸಿ ಅಧ್ಯಕ್ಷ ದೀನಪಾಲ್ ಶೆಟ್ಟಿ , ಸಾಲಿಗ್ರಾಮ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ರಾಜು ಪೂಜಾರಿ, ಕುಂದಾಪುರ ಜೆಡಿ‌ಎಸ್ ಮುಖಂಡ ಸಬ್ಲಾಡಿ ಮಂಜಯ್ಯ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಸುನೀತಾ ರಾಜರಾಂ, ಜ್ಯೋತಿ ಶೆಟ್ಟಿ, ರಶ್ವತ್ ಶೆಟ್ಟಿ, ತಾ.ಪಂ.ಸದಸ್ಯರಾದ ನವೀನಚಂದ್ರ ಶೆಟ್ಟಿ, ಲಕ್ಷಣ ಬಿಜೂರು, ನಾಗೇಶ್, ಪಾರ್ವತಿ, ಪೂರ್ಣಿಮಾ ಪೂಜಾರಿ ಬಸ್ರೂರು, ಭಾಸ್ಕರ ಬಿಲ್ಲವ ಕೋಣಿ, ರಮೇಶ್ ಶೆಟ್ಟಿ ಮೊಳಹಳ್ಳಿ, ಪ್ರದೀಪ್ ಶೆಟ್ಟಿ ಬಿದ್ಕಲ್‌ಕಟ್ಟೆ, ದೇವಕಿ ಶೆಟ್ಟಿ , ಪುರಸಭಾ ಸದಸ್ಯರಾದ ನಾಗರಾಜ್ ಕೆ., ರಾಘವೇಂದ್ರ ದೇವಾಡಿಗ, ಉದಯ ಮೆಂಡನ್, ವಿಜಯ ಎಸ್. ಪೂಜಾರಿ, ವಿಠಲ ಕುಂದರ್, ಸಿಸಿಲಿ ಕೋಟ್ಯಾನ್, ಗೀತಾ, ಮಾಜಿ ಸದಸ್ಯರಾದ ನಾಗರಾಜ ಕಾಂಚನ್, ಶಂಕರ ಖಾರ್ವಿ, ಕುಷ್ಟ ಪೂಜಾರಿ, ದಿನಕರ, ಪ್ರಕಾಶ, ವೀಣಾ ಪ್ರಕಾಶ್, ಉಪಸ್ಥಿತರಿದ್ದರು.
    ರಾಜೇಶ್ ಕಡ್ಗಿಮನೆ ಸ್ವಾಗತಿಸಿ, ಬೆಳ್ವೆ ವಸಂತ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿ, ರಾಫು ವಿಠಲವಾಡಿ ನಿರೂಪಿಸಿ, ವಂದಿಸಿದರು.

ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com