ಇದೇ ಸಂದರ್ಭದಲ್ಲಿ ಹಾಲಾಡಿ ಮಾಧ್ಯಮದವರೊಂದಿಗೆ ಮಾತನಾಡಿ, ಜನರ ಪ್ರೀತಿ, ಅಭಿಮಾನ, ಆಶೀರ್ವಾದದೊಂದಿಗೆ ಮೂರು ಭಾರಿ ಈ ಕ್ಷೇತ್ರದಲ್ಲಿ ಶಾಸಕನಾಗಿ ಆಯ್ಕೆಯಾದ ನಂತರ ಜನರಿಗೆ ಉತ್ತಮ ಸೇವೆ ನೀಡುವಲ್ಲಿ ಯಾವುದೇ ಜಾತಿ, ಧರ್ಮ, ಪಕ್ಷ ನೋಡದೆ ಸಾಮಾಜಿಕ ನ್ಯಾಯದ ಅನುಷ್ಠಾನಕ್ಕಾಗಿ ಶಕ್ತಿ ಮೀರಿ ಪ್ರಯತ್ನಿಸಿದ್ದೇನೆ ಎಂಬ ಆತ್ಮವಿಶ್ವಾಸ ನನಗಿದೆ. ಕ್ಷೇತ್ರದ ಅಭಿವೃದ್ಧಿಗಾಗಿ ಸಕ್ರೀಯ ರಾಜಕಾರಣದಲ್ಲಿ ಇದ್ದು ಜನ ಮಾಡಬೇಕು ಎಂಬ ಜನರ ಅಪೇಕ್ಷೆಯಂತೆ ಅವರ ಋಣ ತೀರಿಸಲು ಪಕ್ಷೇತರ ಅಭ್ಯರ್ಥಿಯಾಗಿ ಜನಸಾಮಾನ್ಯರಿಗೆ ತಿಳಿದಿರುವ ಆಟೋ ರಿಕ್ಷಾ ಚಿಹ್ನೆಯಡಿ ಸ್ಪರ್ಧಿಸುತ್ತಿದ್ದೇನೆ. ಕ್ಷೇತದಲ್ಲ್ರಿ 64 ಗ್ರಾಮದ 212 ಬೂತ್ಗಳಲ್ಲಿ ಜನರು ಉತ್ತಮ ಪ್ರತಿಕ್ರಿಯೆ ತೋರಿಸಿದ್ದಾರೆ ಎಂದರು.
ಜಿ.ಪಂ ಸದಸ್ಯ ಗಣಪತಿ ಶ್ರೀಯಾನ್ ಮಾತನಾಡಿ, ಬಿಜೆಪಿಯಿಂದ ಆಯ್ಕೆಯಾದ 5 ಜನ ಜಿಲ್ಲಾ ಪಂಚಾಯಿತಿ ಸದಸ್ಯರು ನಮ್ಮ ನಾಯಕ ಹಾಲಾಡಿಯವರೊಂದಿಗೆ ಗುರುತಿಸಿಕೊಂಡಿದ್ದೇವೆ. ಪಕ್ಷದಿಂದ ಉಚ್ಚಾಟಿಸಲು ಇಲ್ಲಿಯವರೆಗೆ ನಮಗೆ ಯಾವುದೇ ನೋಟೀಸು ಬಂದಿಲ್ಲ. ಒಂದು ವೇಳೆ ನೋಟೀಸು ಬಂದಲ್ಲಿ ಎದೆಗುಂದದೆ ಅದಕ್ಕೆ ತಕ್ಕ ಉತ್ತರ ನೀಡಲಿದ್ದೇವೆ ಎಂದರು.
ತಾ.ಪಂ. ಸದಸ್ಯ ಮಂಜು ಬಿಲ್ಲವ, ರಾಮಣ್ಣ ಶೆಟ್ಟಿ, ಹಂಗ್ಲೂರು ಗ್ರಾಮ ಪಂ. ಅಧ್ಯಕ್ಷ ಸಂತೋಷ ದೇವಾಡಿಗ, ಮಾಜಿ ಪಂಚಾಯಿತಿ ಅಧ್ಯಕ್ಷರಾದ ನರಸಿಂಹ ಪೂಜಾರಿ, ಆನಂದ ಪೂಜಾರಿ ಮುಂತಾದ ಪ್ರಮುಖ ನಾಯಕರಿದ್ದರು.
ಕುಂದಾಪ್ರ ಡಾಟ್ ಕಾಂ - editor@kundapra.com