ಆಭಿವೃದ್ಧಿಗೆ ಬಿಜೆಪಿಯೇ ದಾರಿ: ಮುಖ್ಯಮಂತ್ರಿ ಶೆಟ್ಟರ್


ಬೈಂದೂರು/ಕುಂದಾಪುರ : ರಾಜ್ಯದಲ್ಲಿ ಬಿಜೆಪಿ ಸರಕಾರ ಕಳೆದ 5 ವರ್ಷಗಳಲ್ಲಿ ಕೈಗೋಂಡಿರುವ ಅಭಿವೃದ್ಧಿ ಕಾರ್ಯಗಳಿಂದಾಗಿ ರಾಜ್ಯದ ಜನೆತೆ ಬಿಜೆಪಿಯ ಪರ ಒಲವು ತೋರುತ್ತಿದ್ದು ವಿಧಾನಸಭಾ ಚುನಾವಣೆಯಲ್ಲಿ ಅತ್ಯಧಿಕ ಸೀಟು ಪಡೆಯುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.
ಅವರು ಉಪ್ಪಂದದಲ್ಲಿ ನಡೆದ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. 
    ಬಿಜೆಪಿ ಸರ್ಕಾರ ಸಾಧನೆಯನ್ನು ಮುಂದಿಟ್ಟುಕೊಂಡು ಮತದಾರರ ಕಡೆಗೆ ಬಂದಿದ್ದು, ಸರಕಾರದ ಜನಪರ ಕಾರ್ಯಗಳು, ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ಬಿಜೆಪಿಯನ್ನು ಬೆಂಬಲಿಸುವ ಋಣ ಮತದಾರನ ಮೇಲಿದೆ.
 ಕಾಂಗ್ರೆಸ್ ಅಧಿಕಾರವಧಿಯಲ್ಲಿ 26 ರಿಂದ 27 ಸಾವಿರ ಕೋಟಿ ಇದ್ದ ಬಜೆಟ್ ನ್ನು  ಬಿಜೆಪಿ ಸರ್ಕಾರ 1 ಲಕ್ಷದ 27 ಸಾವಿರ ಕೋಟಿಗೆ ಹೆಚ್ಚಿಸಿದೆ. ಪ್ರತ್ಯೇಕ ರೈತ ಬಜೆಟ್, ಸುವರ್ಣಗ್ರಾಮ ಯೋಜನೆ, ಕೃಷಿ ಸಾಲಮನ್ನಾ, ಭೂಚೇತನ ಯೋಜನೆ, ಕುಡಿಯುವ ನೀರಿಗಾಗಿ ಬಹುಗ್ರಾಮ ಯೋಜನೆ ಸೇರಿದಂತೆ ಮಹತ್ವಕಾಂಕ್ಷಿಯೋಜನೆಗಳು ಬಿಜೆಪಿ ಸರ್ಕಾರ ಅವಧಿಯಲ್ಲಿ ಘೋಷಣೆ ಮಾಡಿದೆ. ಅಧಿಕಾರವನ್ನು ವಿಕೇಂದ್ರಿಕರಣಗೊಳಿಸಿ 45 ಹೊಸ ತಾಲೂಕುಗಳನ್ನು ಘೋಷಿಸುವುದರ ಮೂಲಕ ಆಡಳಿತವನ್ನು ಜನರ ಬಳಿಗೆ ಕೊಂಡೋಯ್ಯುವ ದಿಟ್ಟ ನಿಲುವನ್ನು ಬಿಜೆಪಿ ಸರಕಾರ ತೆಗೆದುಕೊಂಡಿದೆ ಎಂದು ಅವರು ಹೇಳಿದರು.

ಬೈಂದೂರು ಕ್ಷೇತ್ರದ ಅಭಿವೃದ್ಧಿಗೆ 500 ಕೋಟಿ
ಬೈಂದೂರು ಕ್ಷೇತ್ರದಲ್ಲಿ ಶಾಸಕರ ನೇತ್ರತ್ವದಲ್ಲಿ 500 ಕೋಟಿ ಅಭಿವೃದ್ಧಿ ಕೆಲಸ ನಡೆದಿದೆ. ಇನ್ನೂ ಕೆಲವು ಕಾಮಗಾರಿಗಳು ಪ್ರಗತಿಯಲ್ಲಿದೆ, ಬೈಂದೂರನ್ನು ತಾಲೂಕನ್ನಾಗಿ ಫೋಷಿಸುವುದರ ಮೂಲಕ ಬಹುವರ್ಷಗಳ ಕಾಲದ ಕನಸನ್ನು ಸಾಕಾರಗೋಳಿಸಲಾಗಿದೆ.  ಹೀಗಾಗಿ ಇಲ್ಲಿನ ಜನರಿಗೆ ಬಿಜೆಪಿಯನ್ನು ಬೆಂಬಲಿಸುವ ಋಣವಿದೆ ಎಂದರು.

ರಾಹುಲ್ ಮಾತಿಗೆ ತಿರುಗೇಟು:
ಸಿಂಧನೂರಿನಲ್ಲಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ರಾಹುಲ್ ಗಾಂಧಿ,  ರಾಜ್ಯ ಸರ್ಕಾರ ಭ್ರಷ್ಠಾಚಾರ, ದಿವಾಳಿ ಸರ್ಕಾರ ಎಂದು ಆಪಾದನೆ ಮಾಡಿದ್ದರು. ಯಾರೋ ಬರೆದುಕೊಟ್ಟ ಭಾಷಣವನ್ನು ಓದುವ ರಾಹುಲ್ ಗಾಂಧಿಯವರು ಕಾಂಗ್ರೆಸ್ ಹಾಗೂ ಬಿಜೆಪಿ ಸರಕಾರದ ಅವಧಿಯ ಸಾಧನೆಯ ಅಂಕಿ-ಅಂಶಗಳನ್ನು ಮುಂದಿಟ್ಟುಕೊಂಡು ಚರ್ಚೆಗೆ ಬರಲಿ ಎಂದು ಸವಾಲೆಸಗಿದರು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಪ್ರಚಾರಕ್ಕೆ ಹೋದಲ್ಲೆಲ್ಲಾ ಕಾಂಗ್ರೆಸ್ ಸೋತಿದ್ದು ಅವರು ಕರ್ನಾಟಕಕ್ಕೂ ಪ್ರಚಾರಕ್ಕೆ ಬಂದರೆ ಒಳ್ಳೆಯದು ಎಂದು ಲೇವಡಿ ಮಾಡಿದರು. 

ವಿಸ್ಟರ್ ಕೂಲ್ ಸಿಎಂ ಯಡ್ಡಿ; ಅಲ್ಲ ಅಲ್ಲ ಜಗದೀಶ್ ಶೆಟ್ಟರ್!
    ಪ್ರಚಾರ ಸಭೆಯಲ್ಲಿ ಮಾತನಾಡಿದ ಬೈಂದೂರು ಕ್ಷೇತ್ರದ ಶಾಸಕ ಲಕ್ಷ್ಮೀನಾರಯಣ ಜಗದೀಶ್ ಶೆಟ್ಟರಿಗೆ ಮಿಸ್ಟರ್ ಕೂಲ್ ಸಿಎಂ ಎಂಬ ಬಿರುದು ನೀಡಿದ ಬೆನ್ನಲ್ಲೇ, ಮಿ. ಕೂಲ್ ಶೆಟ್ಟರೆ ಎನ್ನಲು ಹೋಗಿ, ಮಿ. ಕೂಲ್ ಯಡ್ಯೂರಪ್ಪ ಎಂದು ಕರೆದು ಹಾಸ್ಯಕ್ಕೆ ಗುರಿಯಾದರು. ಕೂಡಲೇ ತಪ್ಪಿನ ಅರಿವಾಗಿ  ಅದು ವಿ. ಕೂಲ್ ಶೆಟ್ಟರ್ ಎಂದಾಬೇಕಿತ್ತು, ಯಡ್ಯೂರಪ್ಪನವರು ನನ್ನ ಆತ್ಮೀಯರೇ ಬಿಡಿ ಎಂದು ಸಮಜಾಯಿಷಿ ನೀಡಿದರು.


 ಬೈಂದೂರಿನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಅಭ್ಯರ್ಥಿ ಸುಕುಮಾರ ಶೆಟ್ಟಿ, ಜಿ. ಪಂ ಸದಸ್ಯೆ ಮಮತಾ ಶೆಟ್ಟಿ, ಗೌರಿ ದೇವಾಡಿಗ, ಬಾಬು ಶೆಟ್ಟಿ, ಸುಮತಿ ಮೊಗವೀರ, ದಸ್ತಗಿರಿ ಸಾಹೇಬ್. ಪ್ರಣಯ ಕುಮಾರ ಶೆಟ್ಟಿ ಉಪಸ್ಥಿತರಿದ್ದರು. ಸುರೇಶ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾನಾ ಪಕ್ಷಗಳ ಮುಖಂಡರುಗಳೊಂದಿಗೆ 500ಕ್ಕೂ ಅಧಿಕ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡರು


 ಕುಂದಾಪುರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಅಭ್ಯರ್ಥಿ ಕಿಶೋರ್‌ ಕುಮಾರ್‌, ಪುರಸಭಾ ಮಾಜಿ ಅಧ್ಯಕ್ಷ ಮೋಹನದಾಸ್‌ ಶೆಣೈ, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಉದಯ ಕುಮಾರ್‌ ಶೆಟ್ಟಿ, ಶಂಕರ್‌ ಅಂಕದಕಟ್ಟೆ, ಮಟ್ಟಾರ್‌ ರತ್ನಾಕರ ಹೆಗ್ಡೆ, ಕಳಂಜೆ ಗೋಪಾಲ, ಹಾಲಾಡಿ ದುರ್ಗಾ ನಾಯಕ್‌, ಅಬ್ದುಲ್‌ ಎಸ್‌. ಮೊದಲಾದವರು ಉಪಸ್ಥಿತರಿದ್ದರು.


ನಿಮ್ಮ ಅಭಿಪ್ರಾಯ ಬರೆಯಿರಿ 
ಕುಂದಾಪ್ರ ಡಾಟ್ ಕಾಂ- editor@kundapra.com


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com