ಕುಂದಾಪುರ: 2013ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಎಸ್ಆರ್ ಕಾಂಗ್ರೆಸ್ ಮತ್ತು ಕೆಜೆಪಿ ಹೊಸದಾಗಿ ರಂಗಪ್ರವೇಶಿಸುತ್ತಿರುವುದು ಹೊಸ ಮಜಲು. 2008ರಲ್ಲಿ ನಡೆದ ವಿಧಾನಸಭೆ ಚುನಾವಣೆ ವೇಳೆ ಕುಂದಾಪುರ ತಾಲೂಕು ಕ್ಷೇತ್ರ ಪುನರ್ವಿಂಗಡನೆಯ ಮಜಲು ಕಂಡುಕೊಂಡಿತ್ತು. ಬ್ರಹ್ಮಾವರ ಕ್ಷೇತ್ರ ಕಳೆದುಹೋಗಿ ಅಲ್ಲಿನ ಕೋಟ ಹೋಬಳಿಯ 31 ಗ್ರಾಮಗಳು ಕುಂದಾಪುರ ಕ್ಷೇತ್ರಕ್ಕೆ ಸೇರಿಹೋಗಿತ್ತು.
ಕುಂದಾಪುರದ ಕ್ಷೇತ್ರದ 26 ಗ್ರಾಮಗಳು ಬೆಂದೂರು ಕ್ಷೇತ್ರಕ್ಕೆ ಸೇರಿಹೋದವು. ಅತ್ಯಂತ ಕುತೂಹಲ ಮೂಡಿಸಿದ ಈ ವಿದ್ಯಮಾನದಲ್ಲಿ ಕುಂದಾಪುರ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕಾಂಗ್ರೆಸ್ನಿಂದ ಕೆ. ಜಯಪ್ರಕಾಶ್ ಹೆಗ್ಡೆ ಸ್ಪರ್ಧಿ ಸಿದ್ದು ಇಬ್ಬರು ನಡುವೆ ಭಾರಿ ಹಣಾಹಣಿ ನಡೆದಿತ್ತು. ಅಂತಿಮ ವಾಗಿ ಬಿಜೆಪಿಯ ಹಾಲಾಡಿ ಶ್ರೀನಿವಾಸ ಶೆಟ್ಟಿ ಗೆಲುವು ಸಾಧಿಸಿ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಸರದಾರರೆನಿಸಿಕೊಂಡರು. ಅತ್ತ ಬೆಂದೂರಿನಲ್ಲಿ ಸೋಲಿಲ್ಲದ ಸರದಾರ ಎಂಬ ಹಣೆಪಟ್ಟಿ ಹೊತ್ತುಕೊಂಡಿದ್ದ ಕಾಂಗ್ರೆಸ್ನ ಗೋಪಾಲ ಪೂಜಾರಿ ಬಿಜೆಪಿಯ ಕೆ.ಲಕ್ಷ್ಮೀನಾರಾಯಣ ವಿರುದ್ಧ ಸೋಲುಂಡಿದ್ದರು.
ಕುಂದಾಪ್ರ ಡಾಟ್ ಕಾಂ - editor@kundapra.com