ವಿಧಾನಸಭಾ ಚುನಾವಣೆಗೆ ಸಜ್ಜಾಗಲು ಕಾರ್ಯಕರ್ತರಿಗೆ ಕರೆ
ರಾಜ್ಯದಲ್ಲಿ ಕಳೆದ ನಾಲ್ಕುವರೆ ವರ್ಷಗಳಿಂದ ಅಧಿಕಾರ ನಡೆಸಿದ ಬಿಜೆಪಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ದುರಾಡಳಿತದ ಮೂಲಕ ಕುಖ್ಯಾತಿ ಗಳಿಸಿದೆ. ಈಚೆಗೆ ನಡೆದ ನಗರಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ನಗರ ಪ್ರದೇಶದ ವಿದ್ಯಾವಂತ ಹಾಗೂ ಪ್ರಜ್ಞಾವಂತ ಮತದಾರರು ಅದಕ್ಕೆ ತಕ್ಕ ಉತ್ತರ ನೀಡಿದ್ದಾರೆ ಮತ್ತು ಕಾಂಗ್ರೆಸ್ಗೆ ದೊಡ್ಡ ಪ್ರಮಾಣದ ಬೆಂಬಲ ನೀಡುವ ಮೂಲಕ ಮುಂದಿನ ಚುನಾವಣೆಯ ಫಲಿತಾಂಶದ ದಿಕ್ಕು ತೋರಿದ್ದಾರೆ ಈ ಸಂದರ್ಭವನ್ನು ಕಾರ್ಯಕರ್ತರು ಒಗ್ಗಟ್ಟಾಗಿ ಶ್ರಮಿಸುವ ಮೂಲಕ ಕಾಂಗ್ರೆಸ್ ಪರವಾಗಿ ಬಳಸಿಕೊಂಡು ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲ ಪ್ರಯತ್ನ ನಡೆಸಬೇಕು ಎಂದು ಕರೆಯಿತ್ತರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಇಂದಿನ ಕಾರ್ಯಕ್ರಮವನ್ನು ವಿಧಾನ ಸಭಾ ಚುನಾವಣಾ ಪ್ರಚಾರದ ಉದ್ಘಾಟನೆ ಎಂದು ಕಾರ್ಯಕರ್ತರು ಭಾವಿಸಬೇಕು. ಇಂದಿನಿಂದಲೇ ತಮ್ಮ ವ್ಯಾಪ್ತಿಯಲ್ಲಿ ಜನರನ್ನು ಸಂಪಕರ್ಿಸಿ ಅವರಿಗೆ ಬಿಜೆಪಿ ದುರಾಡಳಿತದ ಕುರಿತು ಮತ್ತು ಹಿಂದಿನ ಕಾಂಗ್ರೆಸ್ ಸಕರ್ಾರ ಮಾಡಿರುವ ಕಲ್ಯಾಣ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡುವ ಮೂಲಕ ಅವರ ಮನ ಒಲಿಸಬೇಕು ಎಂದು ಹೇಳಿದರು.
ವಂಡ್ಸೆ ಬ್ಲೋಕ್ ಅಧ್ಯಕ್ಷ ಎಸ್. ಸಂಜೀವ ಶೆಟ್ಟಿ ಸ್ವಾಗತಿಸಿದರು. ಎಸ್. ಮದನಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬೈಂದೂರು ಬ್ಲೋಕ್ ಮಾಜಿ ಅಧ್ಯಕ್ಷ ಎಸ್. ವಾಸುದೇವ ಯಡಿಯಾಳ ವಂದಿಸಿದರು.
ಕೆಪಿಸಿಸಿ ಸದಸ್ಯ ಎಚ್. ಮಂಜಯ್ಯ ಶೆಟ್ಟಿ, ಬೈಂದೂರು ಬ್ಲೋಕ್ ಅಧ್ಯಕ್ಷ ಕೆ. ರಮೇಶ ಗಾಣಿಗ, ಜಿಲ್ಲಾ ಕಾಂಗ್ರೆಸ್, ಉಭಯ ಬ್ಲೋಕ್ ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳಾದ ಎಸ್. ರಾಜು ಪೂಜಾರಿ, ರಿಯಾಜ್ ಅಹಮದ್, ಮಂಜುನಾಥ ಖಾರ್ವಿ, ಸಾಧು ಬಿಲ್ಲವ, ನಾಗಪ್ಪ ಕೊಠಾರಿ, ಸುಬ್ರಹ್ಮಣ್ಯ ಪೂಜಾರಿ, ಸತೀಶ ಶೆಟ್ಟಿ, ಮಾಟರ್ಿನ್ ಡಾಯಸ್, ವೆಂಕಪ್ಪ ನಾಯ್ಕ್, ಎಸ್. ರಾಜು, ಸತೀಶ ನಾಡ ಉಪಸ್ಥಿತರಿದ್ದರು.
ಸೇರ್ಪಡೆ : ಸಮಾವೇಶದಲ್ಲಿ ಬೈಂದೂರು ಗ್ರಾಮ ಪಂಚಾಯತ್ ಸದಸ್ಯ ನಾರಾಯಣ ಶೇರೆಗಾರ್, ಮಾಜಿ ಸದಸ್ಯ ಗುರುದತ್ತ ಶೇರೆಗಾರ್, ಆಜ್ರಿ ಚೋನಮನೆ ಶನೀಶ್ವರ ದೇವಸ್ಥಾನದ ಮೊಕ್ತೇಸರ ಅಶೋಕ ಶೆಟ್ಟಿ, ನಿವರತ್ತ ಶಿಕ್ಷಕ ರಾಜೀವ ಶೆಟ್ಟಿ, ನಿವೃತ್ತ ಬ್ಯಾಂಕ್ ಅಧಿಕಾರಿ ಜಿ. ಪ್ರಭಾಕರ ಶೇರೆಗಾರ್, ನಿವೃತ್ತ ಪಿಡಬ್ಲ್ಯೂಡಿ ನೌಕರ ಹನುಮಂತ ಶೇರೆಗಾರ್, ಸಾಮಾಜಿಕ ಕಾರ್ಯಕರ್ತ ನಾಗರಾಜ ಗಾಣಿಗ ಸೇರಿದಂತೆ ಹಲವರು ಕಾಂಗ್ರೆಸ್ ಪಕ್ಷ ಸೇರಿದರು. ಅವರೆಲ್ಲರನ್ನು ಸೊರಕೆ ಮತ್ತು ಗೋಪಾಲ ಪೂಜರಿ ಸ್ವಾಗತಿಸಿ , ಬರಮಾಡಿಕೊಂಡರು.
ಕುಂದಾಪ್ರ ಡಾಟ್ ಕಾಂ - editor@kundapra.com