ಕುಂದಾಪುರ: ತಾಲೂಕಿನ ಪ್ರಸಿದ್ಧ ಶಿವಾಲಯಗಳಲ್ಲಿ ಶಿವರಾತ್ತಿ ಹಬ್ಬ ಸಂಭ್ರವದಿಂದ ಜರುಗಿತು.
ನಗರದ ಕುಂದೇಶ್ವರ ದೇವಳಕ್ಕೆ ಬೆಳಗ್ಗಿನಿಂದಲೇ ಆಗಮಿಸಿದ ಭಕ್ತಾದಿಗಳು ಪೂಜೆ-ಪೊನಸ್ಕಾರಗಳನ್ನು ನೆರವೇರಿಸಿದರು. ಶಂಕರನಾರಾಯಣ ದೇವಾಲಯ, ಕೋಟೇಶ್ವರ, ಕೋಟಿಲಿಂಗೇಶ್ವರ, ಬೈಂದೂರು ಸೇನೆಶ್ವರ, ಬಸ್ರೂರು ಮಹಾಲಿಂಗೇಶ್ವರ, ಗಂಗೊಳ್ಳಿ ಇಂಧೂದರ ದೇವಸ್ಥಾನ, ಕುಂಭಾಶಿ ಹರಿ ದೇವಾಲಯ, ತೆಕ್ಕಟ್ಟೆ ಮಹಾಲಿಂಗೇಶ್ವರ ದೇವಸ್ಥಾನ, ಗಂಗಾನಾಡು-ಒಣಕೋಡ್ಲು ದೇವಸ್ಥಾನ, ಕಿರಿಮಂಜೇಶ್ವರ ಅಗಸ್ತೈಶ್ವರ ದೇವಸ್ಥಾನ, ತಲ್ಲೂರು ಶ್ರಿ ಮಹಾಲಿಂಗೇಶ್ವರ ದೇವಾಲಯ, ಆಜ್ರಿ ತ್ರೈಂಬಕೇಶ್ವರ ದೇವಾಲಯ ಸೇರಿದಂತೆ ವಿವಿಧೆಡೆಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು, ಜಾಗರಣೆ ಹಾಗೂ ಸಾಸ್ಕ್ರತಿಕ ಕಾರ್ಯಕ್ರಮಗಳು ಜರುಗಿದವು.
ಬೈಂದೂರು: ಇಲ್ಲಿನ ಒಣಕೊಡ್ಲು ಶಿವ ದೇವಸ್ಥಾನದಲ್ಲಿ ಭಕ್ತರು ಶಿವರಾತ್ರಿ ದಿನ ಮಾತ್ರ ಶಿವಲಿಂಗವನ್ನು ಮುಟ್ಟಿ ಪೂಜಿಸುವ ಸಂಪ್ರದಾಯವಿದ್ದು ಅಸಂಖ್ಯ ಭಕ್ತರು ಮುಟ್ಟಿ ಪೂಜಿಸಿದರು.
ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ. ಎನ್. ರಾಜೇಂದ್ರ ಕುಮಾರ ಸೇರಿದಂತೆ ಸುಮಾರು ಆರು ಸಾವಿರಕ್ಕೂ ಅಧಿಕ ಸಾವಿರಾರು ಭಕ್ತರು ದೇವರ ದರ್ಶನ ಪಡೆದರು.
ಗೋಕರ್ಣ ಹೊರತುಪಡಿಸಿದರೆ ಒಣಕೊಡ್ಲುವಿನಲ್ಲಿ ಲಿಂಗಮುಟ್ಟಿ ಪೂಜೆ ಮಾಡುವ ಅವಕಾಶವಿದೆ.
ಕುಂದಾಪ್ರ ಡಾಟ್ ಕಾಂ - editor@kundapra.com