ತಲ್ಲೂರು: ಮಕ್ಕಳಿಗೆ ಪಠ್ಯಬೋಧನೆಯಲ್ಲಿ ಉತ್ತಮ ನೈತಿಕ ಸಂಸ್ಕಾರಗಳನ್ನು ಒತ್ತಿಹೇಳುವುದರಿಂದ ಶ್ರೇಷ್ಠ ಶಿಕ್ಷಣವನ್ನು ನೀಡಲು ಸಾಧ್ಯ ಎಂದು ಯಳಜಿತ ಶ್ರೀ ಸಿದ್ಧಿವಿನಾಯಕ ಸಾಂಸ್ಕೃತಿಕ ಕೇಂದ್ರದ ಸಂಚಾಲಕ ಮಂಗೇಶ್ ಶೆಣೈ ಅವರು ಹೇಳಿದರು.
ತಲ್ಲೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸಿದ್ಧಿವಿನಾಯಕ ಸಾಂಸ್ಕೃತಿಕ ಕೇಂದ್ರದ ಆಶ್ರಯದಲ್ಲಿ ತಲ್ಲೂರು ಶಾಲೆಯಲ್ಲಿ ಜರಗಿದ ವಿದ್ಯಾಥರ್ಿಗಳಿಗೆ ಸ್ವಾಮಿ ವಿವೇಕಾನಂದರ ವಿಚಾರಧಾರೆಯ ಪ್ರೇರಣೆ ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು. ನಾವು ಯಾವುದನ್ನು ಮರೆಯುತ್ತೇವೋ ಅದು ಒಳ್ಳೆಯದೇ ಆಗಿದ್ದರೂ ಉತ್ತಮವಾದುದನ್ನು ಕಳೆದುಕೊಳ್ಳಬೇಕಾಗುತ್ತದೆ. ಒಳ್ಳೆಯ ಮೌಲ್ಯಗಳನ್ನು ಮತ್ತೆ ಮತ್ತೆ ಹೇಳಿ ಮನವರಿಕೆ ಮಾಡುತ್ತಿದ್ದರೆ ಮಾತ್ರ ಅವುಗಳು ನಮ್ಮ ಬದುಕಿನಲ್ಲಿ ಬೆರೆತು ನಿತ್ಯವೂ ಉತ್ತಮ ಫಲವನ್ನು ನೀಡಬಲ್ಲವು ಎಂದರು.
ಶಾಲಾಭಿವೃದ್ಧಿ ಮೆಲುಸ್ತುವಾರಿ ಸಮಿತಿ ಸದಸ್ಯ ನಾರಾಯಣ ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲಾ ಮುಖ್ಯಶಿಕ್ಷಕ ಶಂಕರ ಬೈಂದೂರು ಅವರು ಅಧ್ಯಕ್ಷತೆ ವಹಿಸಿದ್ದರು. ಸಹಶಿಕ್ಷಕರು ಉಪಸ್ಥಿತರಿದ್ದರು.
ಸಹಶಿಕ್ಷಕ ಐ. ನಾರಾಯಣ ಮಧ್ಯಸ್ಥ ಸ್ವಾಗತಿಸಿದರು. ಕಾರ್ಯಕ್ರಮ ನಿದರ್ೆಶಕ, ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮ ನಿರ್ವಹಿಸಿದರು.
ಕುಂದಾಪ್ರ ಡಾಟ್ ಕಾಂ - editor@kundapra.com