ಕುಂದಾಪುರ: ಸರ್ಕಾರವು ಒಂದು ವರ್ಷದಿಂದ ವೇತನ ನೀಡದೆ ಪ್ರಥಮದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರನ್ನು ದುಡಿಸಿಕೊಳ್ಳುತ್ತಿರುವುದು ತೀರ ಅಮಾನವೀಯ. ಈ ಬಗ್ಗೆ ಅಗತ್ಯ ಕ್ರಮ ಕೇವಲ ಭರವಸೆಯಲ್ಲೇ ಉಳಿದ್ದು ದುರಂತ. ಈ ಕಾರಣ ನೊಂದ ಉಪನ್ಯಾಸಕರು ಮಾ.21 ರಂದು ಗುರುವಾರ ಕೊಡಗು,ಮಂಗಳೂರು,ಉಡುಪಿ,ಮೈಸೂರು ಭಾಗದಲ್ಲಿ ತರಗತಿ ಬಹಿಷ್ಕರಿಸಿ ಜಂಟಿ ನಿರ್ಧೇಶಕರ ಕಛೇರಿಯಲ್ಲಿ ಪ್ರತಿಭಟನೆ ನಡೆಸಲಾಗುವುದು.ಆ ಕಾರಣ ಉಡುಪಿ ಜಿಲ್ಲೆಯ ಎಲ್ಲಾ ಅತಿಥಿ ಉಪನ್ಯಾಸಕರು ತರಗತಿಗೆ ಹಾಜರಾಗದಿರುವುದು ಮತ್ತು ಮಂಗಳೂರಿನಲ್ಲಿ ಬೆಳಿಗ್ಗೆ 9.30 ಕ್ಕೆ ನಡೆಯುವ ಪ್ರತಿಭಟನೆಯಲ್ಲಿ ಭಾಗವಹಿಸಬೇಕಾಗಿ ಉಡುಪಿ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ರಂಜಿತ್ ಕುಮಾರ್ ಶೆಟ್ಟಿ ತಿಳಿಸಿರುತ್ತಾರೆ.
ಕುಂದಾಪ್ರ ಡಾಟ್ ಕಾಂ - editor@kundapra.com