ಅತಿಥಿ ಉಪನ್ಯಾಸಕರಿಂದ ವಿವಿ ಪರೀಕ್ಷೆ ಬಹಿಷ್ಕರಿಸುವ ಎಚ್ಚರಿಕೆ

ಕುಂದಾಪುರ: ಶೈಕ್ಷಣಿಕ ವರ್ಷದ ಎಲ್ಲ ಗೌರವಧನ ಬಿಡುಗಡೆ ಮಾಡುತ್ತೇವೆ ಎಂದು ಭರವಸೆ ನೀಡಿದ ಸರಕಾರ, ಇದೀಗ ಮೂರು ತಿಂಗಳ ಗೌರವ ಧನವನ್ನು ಎರಡು ಕಂತುಗಳಲ್ಲಿ ಬಿಡುಗಡೆಗೊಳಿಸಿ ಕೈ ತೊಳೆದುಕೊಂಡಿದೆ. ಸರಕಾರ ಬಿಡುಗಡೆಗೊಳಿಸಿದ ಹಣ ಇಲ್ಲಿಯವರೆಗೆ ನಾವು ಮಾಡಿದ ಸಾಲದ ಬಡ್ಡಿಗೂ ಸಾಲದು. ನಮ್ಮನ್ನು ನಂಬಿಕೊಂಡ ಸಂಸಾರ ಬೀದಿ ಪಾಲಾಗಿದೆ. ಸರಕಾರದ ಈ ಕಣ್ಣೊರೆಸುವ ತಂತ್ರಕ್ಕೆ ಮಣಿಯುವುದಿಲ್ಲ. ಕೂಡಲೇ ಪೂರ್ತಿ ಹಣ ಬಿಡುಗಡೆ ಮಾಡದಿದ್ದರೆ ವಿವಿ ಪರೀಕ್ಷಾ ಕರ್ತವ್ಯ ಬಹಿಷ್ಕರಿಸಲಾಗುವು ದು ಎಂದು ಅತಿಥಿ ಉಪನ್ಯಾಸಕರ ಸಂಘ ಎಚ್ಚರಿಸಿದೆ. 

ಒಂದು ವರ್ಷದವರೆಗೆ ಸರಕಾರಿ ಪದವಿ ಕಾಲೇಜಿನಲ್ಲಿ ಸಂಬಳವಿಲ್ಲದೆ ಕರ್ತವ್ಯ ನಿರ್ವಹಿಸಿದ್ದೇವೆ. ಈಗ ಒಂದು ವರ್ಷ ಮುಗಿದರೂ ವೇತನ ನೀಡುವಲ್ಲಿ ಸರಕಾರ ಇನ್ನೂ ವಿಳಂಬ ಧೋರಣೆ ತೋರುತ್ತಿದೆ. ಪ್ರತಿ ವರ್ಷ ವೇತನಕ್ಕಾಗಿ 3-4 ಬಾರಿ ಮುಷ್ಕರ ನಿರತರಾದರೂ ಕೂಡ ಶಿಕ್ಷಣ ಮಂತ್ರಿಗಳು ಕಣ್ಣೊರೆಸುವ ತಂತ್ರದ ಮೂಲಕ ವಿದ್ಯಾವಂತ ಹಾಗೂ ಪ್ರಜ್ಞಾವಂತಿಕೆಯಿಂದ ನಡೆದುಕೊಳ್ಳುವ ಉಪನ್ಯಾಸಕ ವರ್ಗದವರನ್ನು ತಪ್ಪು ದಾರಿಗೆ ಎಳೆಯುತ್ತಿರುವುದು ದುಃಖಕರ ಸಂಗತಿ. 

ಬಿಡುಗಡೆಯಾದ ಹಣ ಉಪನ್ಯಾಸಕರ ಕೈ ಸೇರುವುದಕ್ಕೆ ವೃತ್ತಿ ತೆರಿಗೆ ನೀಡಬೇಕು ಎಂದು ನೆಪವೊಡ್ಡಿ ಅಲ್ಲಲ್ಲಿ ವೇತನ ತಡೆ ಹಿಡಿಯಲಾಗಿದೆ. ವಿವಿ ಸೆಮಿಸ್ಟರ್ ಪರೀಕ್ಷಾ ಕರ್ತವ್ಯ ಬಹಿಷ್ಕರಿಸುವ ಬಗ್ಗೆ ಸಾಮೂಹಿಕ ನಿರ್ಣಯ ತೆಗೆದುಕೊಳ್ಳಲು ರಾಜ್ಯಮಟ್ಟದಲ್ಲಿ ಮುಂದಾಗುತ್ತಿದ್ದೇವೆ ಎಂದು ಉಡುಪಿ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ರಂಜಿತ್ ಕುಮಾರ್ ವಕ್ವಾಡಿ ತಿಳಿಸಿದ್ದಾರೆ.

ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com