ಜೀರ್ಣೋದ್ಧಾರ ಕಾರ್ಯಗಳಿಗೆ ಇಲಾಖಾ ನೆರವು - ಮುಜರಾಯಿ ಸಚಿವ ಕೋಟ ಭರವಸೆ


ಗುಡ್ಡಟ್ಟು ದೇವಾಲಯ ವರ್ಧಂತ್ಯುತ್ಸವ

ಕುಂದಾಪುರ: ಭಾರತೀಯ ಸಂಸ್ಕೃತಿ, ಇಲ್ಲಿನ ನಿಗಮಾಗಮ ಶಾಸ್ತ್ರಗಳ ಬಗ್ಗೆ ನಮಗೇ ಒಲವು ಕಡಿಮೆಯಾಗುತ್ತಿರುವಂತೆಯೆ ವಿದೇಶೀಯರಿಗೆ ಆಸಕ್ತಿ ಮೂಡುತ್ತಿದೆ. ಈ ಪರಿಸ್ಥಿತಿಯ ಬದಲವಣೆಗಾಗಿ ನಮ್ಮ ಸಂಸ್ಕೃತಿ, ಧರ್ಮ, ಪೂಜಾ ಪದ್ಧತಿಗಳನ್ನು ಪರಿಚಯಿಸಲು ಮುಜರಾಯಿ ಇಲಾಖೆ ಪ್ರತಿ ಜಿಲ್ಲೆಯಲ್ಲೂ ಆಗಮ ಶಾಸ್ತ್ರ ತರಬೇತಿ ಕೇಂದ್ರ ಪ್ರಾರಂಭಿಸಲು ಯೋಜಿಸಿದೆ. ನಾಡಿನ ಎಲ್ಲಾ ದೇವಾಲಯಗಳಲ್ಲೂ ತ್ರಿಕಾಲ ಪೂಜೆ ನಡೆದರೆ, ಭಕ್ತರ ಆಸಕ್ತಿ, ಆಗಮನ ಹೆಚ್ಚುವುದರೊಂದಿಗೆ ಅರ್ಚಕರಿಗೂ ಜೀವನಾಧಾರವಾಗುತ್ತದೆ. ಇದಕ್ಕಾಗಿಯೇ ನಾಡಿನ ಎಲ್ಲಾ ದೇವಾಲಯಗಳ ತಸ್ತೀಕನ್ನು ಜಾಸ್ತಿ ಮಾಡಿ ಮೌಲ್ಯ ವೃದ್ಧಿಯ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುತ್ತಿದೆ ಎಂದು ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. 
  ಗುಡ್ಡಟ್ಟು ಶ್ರೀ ವಿನಾಯಕ ದೇವಳದ ವಾರ್ಷಿಕೋತ್ಸವ ಸಂದರ್ಭದಲ್ಲಿ ನೂತನ ವಸತಿಗ್ರಹವನ್ನು ಉದ್ಘಾಟಿಸಿ, ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 
  ಬಾಲ್ಯದಿಂದಲೂ ಗುಡ್ಡಟ್ಟು ವಿನಾಯಕ ದೇವಾಲಯಕ್ಕೆ ಬರುತ್ತಿದ್ದುದನ್ನು ಸ್ಮರಿಸಿಕೊಂಡ ಅವರು ಇತ್ತೀಚಿನ ವರ್ಷಗಳಲ್ಲಿ ನಡೆದ ದೇವಳದ ಅಭಿವೃದ್ಧಿಯನ್ನು ಶ್ಲಾಘಿಸಿದರು. ದೇವಳದ ಯೋಜಿತ 10 ಕೋಟಿ ರೂ. ವೆಚ್ಚದ ಜೀರ್ಣೋದ್ಧಾರ  ಕಾಮಗಾರಿಗೆ ಮುಜರಾಯಿ ಇಲಾಖೆಯಿಂದ ಸಹಕಾರ ನೀಡುವುದಾಗಿ ಅವರು ಭರವಸೆ ನೀಡಿದರು. 
  ಧಾಮರ್ಿಕ ಪ್ರವಚನ ನೀಡಿದ ಹಾಲಾಡಿ ಪಂಚಾಂಗ ಕತರ್ಾ, ಜ್ಯೋತಿಷ್ಯ ವಿದ್ವಾನ್ ತಟ್ಟುವಟ್ಟು ವಾಸುದೇವ ಜೋಯಿಸರು ಚೇತನ - ಅಚೇತನ ಎಲ್ಲವುಗಳಲ್ಲೂ ದೇವರಿದ್ದರೂ, ಆತನನ್ನು ಕಾಲ್ಪನಿಕವಾಗಿ ಕಾಣಲು, ಸ್ತುತಿಸಲು ದೇವಾಲಯ ಅಗತ್ಯ. ಎಲ್ಲಿ ಭಕ್ತಿ ಅನುಷ್ಠಾನಗಳು ಕ್ರಮಬದ್ಧವಾಗಿರುತ್ತವೋ ಆ ದೇವಾಲಯದಲ್ಲಿ ಸಾನ್ನಿದ್ಧ್ಯ, ಶಕ್ತಿ ಜಾಸ್ತಿ ಇರುತ್ತದೆಯೇ ಹೊರತು ದಏವರಲ್ಲಿ ಪ್ರಬಲ - ದುರ್ಬಲ ಎಂಬುದಿಲ್ಲ ಎಂದರು. 
  ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಕೆ.ಎನ್.ಚಂದ್ರಶೇಖರ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ದೇವಳದ ಅನುವಂಶಿಕ ಧರ್ಮದರ್ಶಿ ವೇದಮೂರ್ತಿ ಅನಂತ ಪದ್ಮನಾಭ ಅಡಿಗರು ಸ್ವಾಗತಿಸಿ, ದೇವಳದಲ್ಲಿ ಪೂರ್ಣಗೊಂಡ ಜೀರ್ಣೋದ್ಧಾರ ಕಾಮಗಾರಿಗಳು ಹಾಗೂ ಭವಿಷ್ಯದ ಯೋಜನೆಗಳನ್ನು ವಿವರಿಸಿ, ಭಕ್ತಾಭಿಮಾನಿಗಳ ಸಹಕಾರ ಕೋರಿದರು. 
  ಸಂಗೀತಾ, ವಿಧಾತ್ರಿ ಮತ್ತು ದೀಪಿಕಾ ಪ್ರಾರ್ಥಿಸಿದರು. ಮಹೇಶ್ ಭಟ್ ಕಾರ್ಯಕ್ರಮ ನಿರೂಪಿಸಿ, ಅನಂತ ಪದ್ಮನಾಭ ಅಡಿಗ ವಂದಿಸಿದರು. ನೂತನ ಶಿಲಾಮಯ ದೇಗುಲ ಸಮರ್ಪಣಾ ವರ್ಧಮತಿಯ ಅಂಗವಾಗಿ ಶ್ರೀ ವಿನಾಯಕನ ಸನ್ನಿಧಿಯಲ್ಲಿ 1111 ಗಣಯಾಗ, ವಿಶೇಷ ಆಯುರ್ಕೊಡ, ಬ್ರಹ್ಮಕಲಷಾಭಿಶೇಕ, ಮದ್ಯಾಹ್ನ ಮಹಾ ಅನ್ನ ಸಂತರ್ಪಣೆ ನಡೆಯಿತು. ಸಂಜೆ ಯಕ್ಷ ಸಿಂಚನ ತಂಡದವರಿಂದ 'ಕುಶ - ಲವ' ಯಕ್ಷಗಾನ, ನಂತರ ಸಂಕಷ್ಟಹರ ಚತುರ್ಥಿ ಪೂಜೆ, ಪ್ರಸಾದ ವಿತರಣೆ ನಡೆಯಿತು. 


ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com