ಆರೋಗ್ಯ ಅರಿವು ಯಕ್ಷಗಾನದ ಸಮಾರೋಪ

ಕುಂದಾಪುರ: ಬೆಂಗಳೂರಿನ ಯಕ್ಷದೇಗುಲ ತಂಡದ ಆರೋಗ್ಯ ಅರಿವು ಯಕ್ಷಗಾನದ ಸಮಾರೋಪ ಕಾರ್ಯಕ್ರಮ 28-2-2013ರಂದು ಸುಳ್ಸೆಯಲ್ಲಿ ನಡೆಯಿತು.
   ಪ್ರತಿಯೊಬ್ಬ ಮನುಷ್ಯನಿಗೆ ಎಲ್ಲಾ ಸಂಪತ್ತುಗಳಿಗಿಂತ ಪ್ರಾಮುಖ್ಯವಾದದ್ದು ಆರೋಗ್ಯ ಸಂಪತ್ತು. ಆರೋಗ್ಯ ಉತ್ತಮವಾಗಿದ್ದರೆ, ಆತನ ಬಾಳಿನಲ್ಲಿ ನೆಮ್ಮದಿ ಇರುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯದ ಅರಿವಿನ ಕೊರತೆಯಿಂದ ರೋಗ-ರುಜಿನಗಳಿಗೆ ಬಲಿಯಾಗಿ ನಂತರ ಪರಿಹಾರಕ್ಕಾಗಿ ತಮ್ಮ ಮೂಢನಂಬಿಕೆಯಿಂದ ವಾಮ ಮಾರ್ಗವನ್ನು ಹಿಡಿಯುವುದು ವಿಷಾದದ ಸಂಗತಿ. ಈ ನಿಟ್ಟಿನಲ್ಲಿ ಮುಗ್ದ ಜನರ ಅಜ್ಞಾನವನ್ನು ಹೋಗಲಾಡಿಸಲು ಯಕ್ಷಗಾನದಂಥಹ ಕಲಾ ಮಾಧ್ಯಮದ ಮುಖಾಂತರ ಅರಿವು ಮೂಡಿಸುವುದು ಅವಶ್ಯವಾಗಿದೆ ಎಂದು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಯುತ ಚಂದ್ರ ನಾಯ್ಕರವರು 28-2-2013ರಂದು ಸುಳ್ಸೆಯ ಯಕ್ಷೆ ಬ್ರಹ್ಮ ನಂದಿಕೇಶ್ವರ ದೇವಸ್ಥಾನ ವಠಾರದಲ್ಲಿ ಭಾರತ ಸರಕಾರದ ಗೀತೆ ಮತ್ತು ನಾಟಕ ವಿಭಾಗ, ನೆಹರು ಯುವ ಕೇಂದ್ರ ಉಡುಪಿ ಇವರ ಆಶ್ರಯದಲ್ಲಿ ಬೆಂಗಳೂರಿನ ಯಕ್ಷದೇಗುಲ ತಂಡದವರಿಂದ ಆರೋಗ್ಯ ಅರಿವು ಯಕ್ಷಗಾನದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಉಡುಪಿ ಜಿಲ್ಲೆಯಲ್ಲಿ ನಡೆದ 20 ಕಾರ್ಯಕ್ರಮದ ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಜೆಸಿಐ ಅಧ್ಯಕ್ಷರಾದ ನಾಗೇಂದ್ರ ಪೈ, ಕಾರ್ಯದರ್ಶಿ ರಾಘವೇಂದ್ರ, ವಕೀಲರಾದ ರಾಘವೇಂದ್ರ ನಾವುಡರು, ಓಙಏ ಯ ನರಸಿಂಹ ಗಾಣಿಗ, ಯಕ್ಷೆ ಪಾತ್ರಿ ನಾಗೇಶ ದೇವಾಡಿಗ, ನಂದಿ ದೇವಾಡಿಗ, ಜೋಗ ಪೂಜಾರಿ ಯಕ್ಷದೇಗುಲದ ವ್ಯವಸ್ಥಾಪಕ ಸುದರ್ಶನ ಉರಾಳರು ವೇದಿಕೆಯಲ್ಲಿದ್ದರು. ಕಾರ್ಯಕ್ರಮವನ್ನು ಮಂಜು ಕೆ. ದೇವಾಡಿಗ ನಿರ್ವಹಿಸಿದರು. ನಂತರ ಯಕ್ಷದೇಗುಲದ ನೂರಿತ ಕಲಾವಿದರಿಂದ ಕೊನೆಯ ಪ್ರದರ್ಶನವಾಗಿ ಆರೋಗ್ಯ ಅರಿವು ಯಕ್ಷಗಾನ ನಡೆಯಿತು 
ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com