ನೈತಿಕ ಶಿಕ್ಷಣದಿಂದ ಮಾನವೀಯ ಪರಿವರ್ತನೆ: ಮಂಗೇಶ್ ಶೆಣೈ
ಉತ್ತಮ ನೈತಿಕ ಮೌಲ್ಯ ಹಾಗೂ ಆದರ್ಶ ಎಂದು ಗುರುತಿಸಿದ ಸಂಸ್ಕಾರಗಳನ್ನು ಮ್ಕಕಳಿಗೆ ಶಿಕ್ಷಣದ ಮೂಲಕ ನೀಡಿದಾಗ ಅವರಲ್ಲಿ ಅಪೇಕ್ಷಿತ ಮಾನವೀಯ ಪರಿವರ್ತನೆ ಮೂಡಿಬರಲು ಸಾಧ್ಯ ಎಂದು ಯಳಜಿತ್ ಗ್ರಾಮದ ಶ್ರೀ ಸಿದ್ಧಿವಿನಾಯಕ ಸಾಂಸ್ಕøತಿಕ ಕೇಂದ್ರದ ಸಂಚಾಲಕ ಮಂಗೇಶ್ ಶೆಣೈ ಅವರು ಹೇಳಿದರು.
ಸ್ವಾಮಿ ವಿವೇಕಾನಂದರ 150ನೇ ಜನ್ಮಜಯಂತಿ ವರ್ಷಾಚರಣೆಯ ಅಂಗವಾಗಿ ತಾರಾಪತಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಜರಗಿದ ಉಪನ್ಯಾಸ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸ್ವಾಮಿ ವಿವೇಕಾನಂದರ ಜೀವನಸಂದೇಶ ಎಂಬ ವಿಷಯದ ಕುರಿತು ಅವರು ಮಾತನಾಡಿದರು. ಭಾರತೀಯ ಸನಾತನ ಧರ್ಮ, ಸಂಸ್ಕøತಿ, ಸಂಸ್ಕಾರ ಹಾಗೂ ಜೀವನಧರ್ಮದ ಕುರಿತು ಇಂದಿನ ಮಕ್ಕಳಿಗೆ ತಿಳಿಸಿಹೇಳುವ ಅಗತ್ಯವಿದೆ ಎಂದರು.
ಮುಖ್ಯಶಿಕ್ಷಕಿ ಲಕ್ಷ್ಮೀದೇವಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಹಶಿಕ್ಷಕರಾದ ರಮೇಶ್ ನಾಯ್ಕ್, ಸಂತೋಷ್ ಪೂಜಾರಿ, ಗಣೇಶ್ ಪೂಜಾರಿ, ಶಾಂತಾ ಮೊದಲಾದವರು ಉಪಸ್ಥಿತದ್ದರು.
ಸಹಶಿಕ್ಷಕ ಮಹಾಬಲೇಶ್ವರ ವಿ. ಐತಾಳ್ ಸ್ವಾಗತಿಸಿದರು. ಕಾರ್ಯಕ್ರಮದ ನಿರ್ದೇಶಕ, ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮ ನಿರ್ವಹಿಸಿದರು. ಸಹಶಿಕ್ಷಕ ರಾಮ ದೇವಾಡಿಗ ವಂದಿಸಿದರು. ಕಾರ್ಯಕ್ರಮದ ಬಳಿಕ ಮಕ್ಕಳಿಗೆ ಸ್ವಾಮಿ ವಿವೇಕಾನಂದರ ಕುರಿತ ಪುಸ್ತಕಗಳನ್ನು ಉಚಿತವಾಗಿ ಹಂಚಲಾಯಿತು.
ಕುಂದಾಪ್ರ ಡಾಟ್ ಕಾಂ - editor@kundapra.com