ಮಹಿಳೆ ಪುರುಷರಷ್ಟೇ ಸಮರ್ಥಳು: ಡಿವೈಎಸ್‌ಪಿ.ಯಶೋಧಾ ಸುನೀಲ್


ಕುಂದಾಪುರ: ಸಮಾನತೆ ಮಹಿಳೆಯರ ಹಕ್ಕು ಇದಕ್ಕಾಗಿ ಕರುಣೆ ಅಥವಾ ಅನುಕಂಪದ ಅಗತ್ಯವಿಲ್ಲ. ಸಮಾಜದಲ್ಲಿ ಶೇ 50ರಷ್ಟು ಇರುವ ಮಹಿಳೆಯರು ಸಾಮಾಜಿಕ, ರಾಜಕೀಯ ಹಾಗೂ ಇತರ ಕ್ಷೇತ್ರಗಳಲ್ಲಿ ಪುರುಷರಷ್ಟೇ ಸಮರ್ಥಳಾಗಿದ್ದಾಳೆ. ಮೀಸಲಾತಿ ಎನ್ನುವ ಹೆಸರಿನಲ್ಲಿ ಮಹಿಳೆಯರಿಗೆ ಭಿಕ್ಷೆ ನೀಡಬೇಕಾದ ಅಗತ್ಯವಿಲ್ಲ ಎಂದು ಕುಂದಾಪುರದ ಪೊಲೀಸ್ ಉಪ ವಿಭಾಗದ ಡಿವೈಎಸ್‌ಪಿ.ಯಶೋಧಾ ಸುನೀಲ್ ಒಂಟಗೋಡಿ ಹೇಳಿದರು.

ರೆಡ್‌ಕ್ರಾಸ್ ಕುಂದಾಪುರ ಘಟಕ ಹಾಗೂ ಕೆನರಾ ನರ್ಸಿಂಗ್ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಇಲ್ಲಿನ ಗಾಂಧಿ ಮೈದಾನದಲ್ಲಿ ಶುಕ್ರವಾರ ನಡೆದ ವಿಶ್ವ ಮಹಿಳಾ ದಿನಾಚರಣೆಯ ಕಾರ್ಯಕ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರಿಗೆ ಮೀಸಲಿಟ್ಟ ಮೀಸಲಾತಿಯ ಉಪಯೋಗವನ್ನು ಪಡೆದುಕೊಳ್ಳಲು ಕಟಿಬದ್ಧರಾಗಬೇಕು. ಅಭದ್ರತೆಯ ವಾತಾವರಣದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪರಿಸ್ಥಿತಿಯ ಸೂಕ್ಷತೆಯನ್ನು ಅರಿತುಕೊಳ್ಳಬೇಕು ಎಂದರು.

ಕುಂದಾಪುರದ ರೆಡ್‌ಕ್ರಾಸ್ ಘಟಕದ ಸಭಾಪತಿ ಎಸ್.ಜಯಕರ ಶೆಟ್ಟಿ ಪ್ರಾಸ್ತಾವಿಕವಾಗಿ  ಮಾತನಾಡಿದರು. ಹೇಳಿದರು. ಕೆನರಾ ಕಾಲೇಜಿನ ಆಡಳಿತಾಧಿಕಾರಿ ಎಚ್.ಬಾಲಕೃಷ್ಣ ಶೆಟ್ಟಿ, ಪ್ರಾಂಶುಪಾಲರಾದ ಅನಿತಾ ಸಿ ರಾವ್, ಕಾಲೇಜಿನ ಆಡಳಿತ ಮಂಡಳಿಯ ಟ್ರಸ್ಟಿ ಬೈಲೂರು ವಿನಯಕುಮಾರ ಶೆಟ್ಟಿ, ಡಾ.ಉಮೇಶ್ ಪುತ್ರನ್, ರೆಡ್‌ಕ್ರಾಸ್ ಸಂಸ್ಥೆಯ  ಶಿವರಾಮ ಶೆಟ್ಟಿ, ಎ.ಮುತ್ತಯ್ಯ ಶೆಟ್ಟಿ, ಪ್ಲೋರಾ ಎಂಡ್ ಫೌನಾ ಸಂಘಟನೆಯ ಡಾ.ಎಚ್.ಎಸ್ ಮಲ್ಲಿ ಇದ್ದರು.

ಉದ್ಘಾಟನಾ ಕಾರ್ಯಕ್ರಮದ ಬಳಿಕ ಆರೋಗ್ಯ ಮಾಹಿತಿ, ಮಹಿಳಾ ಸಬಲೀಕರಣ ಹಾಗೂ ಸಾಮಾಜಿಕ ಕಾಳಜಿಯ ಘೋಷಣೆಗಳನ್ನು ಹೊಂದಿದ್ದ ಭಿತ್ತಿ ಪತ್ರಗಳನ್ನು ಹಿಡಿದುಕೊಂಡು ಸುಮಾರು 250 ವಿದ್ಯಾರ್ಥಿನಿಯರು ನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಸಾಗಿದರು.

ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com