ಹಿರಿಯ ನಾಗರಿಕರ ಕಾರ್ಡ್ ವಿತರಣೆ ರಾಷ್ಟ್ರೀಕರಣಕ್ಕೆ ಆಗ್ರಹ

ಕುಂದಾಪುರ: ಹಿರಿಯ ನಾಗರಿಕ ಕಾರ್ಡ್ ವಿತರಣೆ ಸೇವೆಯನ್ನು ರಾಷ್ಟ್ರೀಕರಣಗೊಳಿಸಬೇಕು ಎಂದು ರಾಜ್ಯ ಹಿರಿಯ ನಾಗರಿಕರ ಒಕ್ಕೂಟದ ಕಾರ್ಯದರ್ಶಿ ಶಾಂತ ವೀರಯ್ಯ ಆಗ್ರಹಿಸಿದ್ದಾರೆ. 
  ಸರಕಾರ ಪ್ರಚಾರ ತೆವಲಿನಲ್ಲಿ ಹಿರಿಯ ನಾಗರಿಕರ ಬದುಕಿಗೆ ಕೊಳ್ಳಿ ಇಡಲು ಹೊರಟಿದೆ. ಏಳು ದಿನದೊಳಗೆ ಹಿರಿಯ ನಾಗರಿಕರಿಗೆ ಕಾರ್ಡ್ ವಿತರಣೆ ಎಂದು ಜಾಹೀರಾತು ನೀಡಿದೆ. ಈ ತನಕ ಯಾವೊಬ್ಬ ಹಿರಿಯ ನಾಗರಿಕರಿಗೂ ಒಂದು ವಾರದಲ್ಲಿ ಕಾರ್ಡ್ ನೀಡಲಾಗಿಲ್ಲ ಎಂದು ಅವರು ತಿಳಿಸಿದ್ದಾರೆ. 
      ನಾಗರಿಕ ಸೇವಾ ಖಾತ್ರಿ ಯೋಜನೆ 2011ರ ಪ್ರಕಾರ ಸುಮಾರು 150 ಅಗತ್ಯ ಸೇವೆಗಳನ್ನು ಸರಕಾರದ ನಾನಾ ಇಲಾಖಾಧಿಕಾರಿಗಳಿಗೆ ಹಂಚಿಕೆ ಮಾಡಿ ಕಾಲಮಿತಿ ನಿಗದಿ ಮಾಡಿತು. ಸೇವೆಗಳು ಸಂಪೂರ್ಣವಾಗಿ ರಾಷ್ಟ್ರೀಕರಣವಾಯಿತು. ಹಿರಿಯ ನಾಗರಿಕರ ಕಾರ್ಡ್‌ಗೆ ವಾರದ ಮಿತಿ ಹಾಕಲಾಯಿತು. ಆದರೆ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯಡಿ ಬರುವ ಹಿರಿಯ ನಾಗರಿಕ ಇಲಾಖೆ ಜಿಲ್ಲಾಧಿಕಾರಿ, ತಾಲೂಕು ಶಿಶು ಕಲ್ಯಾಣಾಧಿಕಾರಿ, ಸಹಾಯಕ ಶಿಶು ಕಲ್ಯಾಣಾಧಿಕಾರಿ, ಅಂಗನವಾಡಿ ಮೇಲ್ವಿಚಾರಕರನ್ನು ಬಳಸಿಕೊಳ್ಳುವುದನ್ನು ಬಿಟ್ಟು ಮಹಿಳಾ ಕಲ್ಯಾಣ ಕಾರ್ಯದರ್ಶಿ ಮತ್ತು ನಿರ್ದೇಶಕರು ಹಿರಿಯ ನಾಗರಿಕ ಕಾರ್ಡ್ ವಿತರಣೆಯಂತಹ ಜನ ಕಲ್ಯಾಣ ಯೋಜನೆಯನ್ನು ಸಂಪೂರ್ಣವಾಗಿ ಇಲಾಖೆಯಿಂದ ಬೇರ್ಪಡಿಸಿ ಖಾಸಗೀಕರಣಗೊಳಿಸಿದೆ. ಇದರಿಂದ ಭ್ರಷ್ಟಾಚಾರ ಹೊಗೆಯಾಡುತ್ತಿದೆ. 
      ಖಾಸಗೀಕರಣದಿಂದಾಗಿ ಹಿರಿಯ ನಾಗರಿಕ ತತ್ತರಿಸಿದ್ದು ಸರಕಾರ ತತ್‌ಕ್ಷಣ ವ್ಯವಸ್ಥೆಯನ್ನು ರಾಷ್ಟ್ರೀಕರಣಗೊಳಿಸಿ ಹಿರಿಯ ನಾಗರಿಕರಿಗೆ ನೇರವಾಗಿ ಕಾರ್ಡ್ ಸಿಗುವ ವ್ಯವಸ್ಥೆ ಜಾರಿಗೆ ತರಬೇಕು ಎಂದು  ಪತ್ರಿಕಾ ಹೇಳಿಕೆಯಲ್ಲಿ  ಅವರು ಒತ್ತಾಯಿಸಿದ್ದಾರೆ. 
ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com