ಕುಂದಾಪುರ: ಸಂಘಟನೆಗಳು ಅಭಿವೃದ್ಧಿಗೊಂಡಾಗ ಜನರ ಬದುಕಿನಲ್ಲಿ ಮಹತ್ತರ ಬದಲಾವಣೆಗೆ ಸಾಧ್ಯ. ಜಿಲ್ಲೆಯಲ್ಲಿ ಮೋಗವೀರ ಸಂಘಟನೆಯು ಸಂಘಟಿತಗೊಂಡು ಅಭಿವೃದ್ಧಿ ಹೊಂದುತ್ತಿದೆ. ಮೀನುಗಾರರ ಅಭಿವೃದ್ಧಿಗಾಗಿ ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘವು ಅರ್ಥಿಕ ಸೌಲಭ್ಯಗಳನ್ನು ನೀಡಿ ಸ್ಪಂದಿಸುತ್ತಿದೆ ಎಂದು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಜಿ. ಶಂಕರ್ ಹೇಳಿದರು.
ಶಂಕರನಾರಾಯಣ ಶ್ರೀನಿವಾಸ ಕಾಂಪ್ಲೆಕ್ಸ್ನಲ್ಲಿ ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಶಂಕರನಾರಾಯಣ ಶಾಖೆಯನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಜನರ ಅವಶ್ಯತೆಗಳಿಗೆ ಅರ್ಥಿಕ ಸೌಲಭ್ಯ ನೀಡಲು ಮೀನುಗಾರಿಕೆ ಫೆಡರೇಶನ್ ಹಾಗೂ ಕಾರ್ಪೊರೇಶನ್ ಬ್ಯಾಂಕ್ ಸಹಭಾಗಿತ್ವದಲ್ಲಿ ಹೆಮ್ಮಾಡಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘವು ಶಂಕರನಾರಾಯಣದಲ್ಲಿ ಶಾಖೆಯನ್ನು ತೆರೆದು ಮೀನುಗಾರರ ಪಾಲಿನ ಆಶಾಕಿರಣವಾಗಿದೆ. ಜನತೆ ಸಹಕಾರಿ ಸಂಘದಿಂದ ಸಿಗುವ ಸೌಲಭ್ಯವನ್ನು ಸದುಪಯೋಗಿಸಿಕೊಂಡು ಅರ್ಥಿಕ ಪ್ರಗತಿ ಕಾಣಬೇಕು ಎಂದು ಅವರು ಹೇಳಿದರು.
ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಅಧ್ಯಕ್ಷ ಚಂದ್ರ ನಾಯ್ಕ ಅಧ್ಯಕ್ಷತೆ ವಹಿಸಿದ್ದರು.
ದ.ಕ ಮತ್ತು ಉಡುಪಿ ಜಿಲ್ಲಾ ಮೀನುಗಾರಿಕೆ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ ನೂತನ ಶಾಖೆಯ ಭದ್ರತಾ ಕೋಶ ಉದ್ಘಾಟಿಸಿ, ಸಾಲ ಪತ್ರ ವಿತರಿಸಿದರು. ಮುಂಬಯಿ ಮೊಗವೀರ ಮಹಾಜನ ಸೇವಾ ಸಂಘದ ಅಧ್ಯಕ್ಷ ಸುರೇಶ್ ಎಸ್. ಕಾಂಚನ್ ಷೇರುಪತ್ರ ವಿತರಿಸಿದರು. ಕಾರ್ಪೋರೇಶನ್ ಬ್ಯಾಂಕಿನ ವಡೇರಹೋಬಳಿ ಶಾಖೆ ಪ್ರಬಂಧಕ ಮಹಾಲಿಂಗ ದೇವಾಡಿಗ ಸ್ಮಾರ್ಟ್ ಕಾರ್ಡ್ ವಿತರಿಸಿದರು.
ಮುಂಬಯಿ ಉದ್ಯಮಿ ಎನ್.ಟಿ. ಪೂಜಾರಿ ಠೇವಣಿ ಪತ್ರ ವಿತರಿಸಿದರು. ಈ ಸಂದರ್ಭ ನಾಡೋಜ ಜಿ. ಶಂಕರ್, ಯಶ್ಪಾಲ್ ಸುವರ್ಣ, ಕಟ್ಟಡ ಮಾಲೀಕ ಶ್ರೀನಿವಾಸ ಹದ್ದೂರು, ಸಹಕಾರಿ ಸಂಘದ ಸ್ಥಾಪಕಾಧ್ಯಕ್ಷ ಸುರೇಶ ಆರ್. ಪುತ್ರನ್, ಸಹಕಾರಿ ಸಂಘದ ಹಿರಿಯ ಮಾರ್ಗದರ್ಶಕ ಶೀನ ಮೊಗವೀರ ಕಟ್ಬೆಲ್ತೂರು, ಮಹಾಲಿಂಗ ದೇವಾಡಿಗ, ಶಂಕರ ಮೊಗವೀರ ಅವರನ್ನು ಸನ್ಮಾನಿಸಲಾಯಿತು.
ಕೋಟ ಉದ್ಯಮಿ ಆನಂದ್ ಸಿ. ಕುಂದರ್, ಶಂಕರನಾರಾಯಣ ಸಿ.ಎ. ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಮಧ್ಯಸ್ಥ, ಮೊಗವೀರ ಮಹಾಜನ ಸೇವಾ ಸಂಘದ ಕುಂದಾಪುರ ಶಾಖಾಧ್ಯಕ್ಷ ಎಂ.ಎಂ. ಸುವರ್ಣ, ಕಟ್ಟಡ ಮಾಲೀಕ ಶ್ರೀನಿವಾಸ ಹದ್ದೂರು, ತಾಲೂಕು ಸಹಕಾರಿ ನೌಕರರ ಸಂಘದ ಅಧ್ಯಕ್ಷ ಪಿ. ಜಗನ್ನಾಥ ಶೆಟ್ಟಿ, ಜಿಲ್ಲಾ ಮೊಗವೀರ ಯುವ ಸಂಘಟನೆ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಶಂಕರನಾರಾಯಣ ಗ್ರಾ.ಪಂ. ಅಧ್ಯಕ್ಷ ವನಜ ಮೊಗವೀರ, ಹಾಲಾಡಿ, ಶಂಕರನಾರಾಯಣ ಮೊಗವೀರ ಯುವ ಸಂಘಟನೆ ಅಧ್ಯಕ್ಷ ಶಂಕರ ಮೊಗವೀರ, ಹೆಮ್ಮಾಡಿ ಸಂಘದ ಆಡಳಿತ ಮಂಡಳಿ ಉಪಾಧ್ಯಕ್ಷೆ ಸುಮತಿ ಬಿ. ಮೊಗವೀರ ಹೆಮ್ಮಾಡಿ, ನಿರ್ದೇಶಕರಾದ ಭಾಸ್ಕರ್ ಕೆ. ನಾಯ್ಕ ಕುಂಟಾನೇರ್ಲು, ರಾಮ ಮೊಗವೀರ ಕೊಡ್ಲಾಡಿ, ಉದಯ್ ನಾಯ್ಕ ವಂಡ್ಸೆ, ಎಂ.ಆರ್. ನಾಯ್ಕ ಗುಲ್ವಾಡಿ, ವಿಜಯ್ ಪುತ್ರನ್ ಆರಾಟೆ, ರಾಘವೇಂದ್ರ ನೆಂಪು, ರಾಜೀವ ಕರ್ಕಿ ಉಪಸ್ಥಿತರಿದ್ದರು.
ನಿರ್ದೆಶಕ ಎಂ.ಆರ್. ನಾಯ್ಕ ಸ್ವಾಗತಿಸಿದರು.ಪ್ರಧಾನ ವ್ಯವಸ್ಥಾಪಕ ಉದಯಕುಮಾರ ಹಟ್ಟಿಯಂಗಡಿ ಕಾರ್ಯಕ್ರಮ ನಿರ್ವಹಿಸಿದರು. ಶಂಕರನಾರಾಯಣ ಶಾಖಾ ವ್ಯವಸ್ಥಾಪಕ ಚಂದ್ರ ವಂದಿಸಿದರು.
ಕುಂದಾಪ್ರ ಡಾಟ್ ಕಾಂ - editor@kundapra.com