ಕುಂದಾಪುರ: ಕೋಟೇಶ್ವರ ಹಾಲು ಉತ್ಪಾದಕರ ಸಹಕಾರಿ ಸಂಘದ ಶ್ರೀ ಗೋಪಾಲಕೃಷ್ಣ ನೂತನ ಕಟ್ಟಡ ಇತ್ತಿಚಿಗೆ ಉದ್ಘಾಟನೆಗೊಂಡಿತು. ಉಡುಪಿ ಜಿಲ್ಲಾ ಪಂಚಾಯತ್ನ ಅಧ್ಯಕ್ಷ ಉಪೇಂದ್ರ ನಾಯಕ್ ನೂತನ ಕಟ್ಟಡ ಉದ್ಘಾಟಸಿದರು.
ದ.ಕ.ಸ.ಹಾ.ಉ.ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಕಾರ್ಯಕ್ರಮವನ್ನು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಗಣಪತಿ ಟಿ. ಶ್ರೀಯಾನ್ ಗೋದಾಮು ಹಾಗೂ ಕೋಟೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜಶೇಖರ ಶೆಟ್ಟಿ ಹಾಲು ಶೇಖರಣ ಕೊಠಡಿಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ದ.ಕ.ಸ.ಹಾ.ಉ. ಒಕ್ಕೂಟದ ನಿರ್ದೇಶಕರಾದ ಸಬ್ಲಾಡಿ ಎನ್.ಮಂಜಯ್ಯ ಶೆಟ್ಟಿ, ಎಸ್.ಪ್ರಕಾಶ್ಚಂದ್ರ ಶೆಟ್ಟಿ, ಹದ್ದೂರು ರಾಜೀವ ಶೆಟ್ಟಿ, ಕೋಟೇಶ್ವರ ಹಾಲು ಉತ್ಪಾದಕರ ಸಹಕಾರಿ ಸಂಘದ ಉಪ ವ್ಯವಸ್ಥಾಪಕ ಡಾ.ಮನೋಹರ, ಕಾರ್ಯದರ್ಶಿ ಸಾಧನಾ, ನಿರ್ದೇಶಕರಾದ ಕೆ.ವಾಸುದೇವ, ಮಂಜುನಾಥ ಶೆಟ್ಟಿಗಾರ್, ಶ್ರೀನಿವಾಸ ಮೂರ್ತಿ, ಶ್ರೀನಿವಾಸ ಕೆ, ಲಚ್ಚ ದೇವಾಡಿಗ, ಗಿರಿಜಾ ಎಚ್, ಸಿಬ್ಬಂದಿ ಸಹಾಯಕ ಭಾಸ್ಕರ್ ಶೆಟ್ಟಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಹಾಲೂ ಒಕ್ಕೂಟ ಅಧಿಕಾರಿಗಳಾದ ಜಯದೇವಪ್ಪ, ಬಿ.ಶಂಕರ್, ಶಿವಪ್ಪ, ಸತೀಶ್ ಯಾಡಿಯಾಳ್, ರಾಘವೇಂದ್ರ ಹೊಳ್ಳ ಹಾಗೂ ವೈದ್ಯರಾದ ಡಾ.ಅನಿಲ್ ಕುಮಾರ್, ಡಾ.ಮಾಧವ ಐತಾಳ್, ನಿತ್ಯಾನಂದ ಭಕ್ತ, ಡಾ.ಮನೋಹರ, ಡಾ.ಕೃಷ್ಣಮೂರ್ತಿ ಉಪಾಧ್ಯಾಯ ಮತ್ತು ಸಂಘದ ಮಾಜಿ ಅಧ್ಯಕ್ಷರುಗಳಾದ ಪುರಂದರ ಕಡೇಕಾರ್, ಬುದ್ಧರಾಜ ಶೆಟ್ಟಿ, ನಾಗರಾಜ, ಶ್ರೀಪತಿ ಹೆಬ್ಬಾರ್ ಹಾಗೂ ದಾನಿಗಳಾದ ಪಾಂಡುರಂಗ, ಹನುಮಂತ ಶೇರಿಗಾರ್, ಸತ್ಯನಾರಾಯಣ ಶೇಟ್ ಇವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕೋಟೇಶ್ವರ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಶ್ರೀಕಾಂತ್ ಕೆ ಸ್ವಾಗತಿಸಿದರು. ಆಡಳಿತ ಮಂಡಳಿ ಮಾಜಿ ಅಧ್ಯಕ್ಷ ಶ್ರೀಪತಿ ಹೆಬ್ಬಾರ್ ಪ್ರಾಸ್ತಾವಿಕ ಮಾತನಾಡಿ ವರದಿ ವಾಚಿಸಿದರು. ಗುರುರಾಜ್ ರಾವ್ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಬಿ.ಆರ್.ಅನೂಪ್ ಕುಮಾರ್ ವಂದಿಸಿದರು.
ಕುಂದಾಪ್ರ ಡಾಟ್ ಕಾಂ - editor@kundapra.com