ಕುಂದಾಪುರ: ಆದಿ ಇಲ್ಲದ್ದು ಅನಾದಿ.ಅದೇ ಎಲ್ಲದಕ್ಕೂ ಆದಿ. ಬೆಳೆಯುವರೆಗೂ ಬೆಳೆದು ಅರಳುವರೆಗೂ ಅರಳಿ ಪರಿಪೂರ್ಣವಾದ ತನ್ನ ಪ್ರಭಾವದಿಂದ ಪ್ರಪಂಚಕ್ಕೂ ಸಂಪೂರ್ಣತೆಯನ್ನು ಕೊಡುವ ವಿದ್ಯೆಯಿಂದ ಪರೋಪಕಾರ ರೂಪದ ಪ್ರಜಾಸೇವೆಯಲ್ಲಿ ತೊಡಗಿಸಿಕೊಂಡಾಗ ಜೀವನ ಸಾರ್ಥಕಗೊಂಡು ಸುಖ, ಶಾಂತಿ, ನೆಮ್ಮದಿ ದೊರೆಯಲು ಸಾದ್ಯ ಎಂದು ಹೂವಿನ ಕೆರೆ ವಾದಿರಾಜ ಮಠದ ಪ್ರಧಾನ ಅರ್ಚಕ ವೇದಮೂರ್ತಿ ವಾದಿರಾಜ್ ಭಟ್ ಹೇಳಿದರು.
ಅವರು ವಕ್ವಾಡಿ ತೆಂಕಬೆಟ್ಟು ಶ್ರೀ ಬ್ರಹ್ಮಲಿಂಗೇಶ್ವರ ಹಾಗೂ ಚಿಕ್ಕು ಸಪರಿವಾರ ದೈವಸ್ಥಾನದ ವಾಷರ್ಿಕ ಹಾಲುಹಬ್ಬ, ಗೆಂಡೋತ್ಸವ ದಿನದಂದು ಇಲ್ಲಿನ ಬ್ರಹ್ಮಲಿಂಗೇಶ್ವರ ಯುವಕ ಮಂಡಲದ 3 ನೇ ವಾಷರ್ಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಯುವಕ ಮಂಡಲದ ಅಧ್ಯಕ್ಷ ಕನ್ನಾಲಿ ಮನೆ ಹೊಸಂಗಡಿ ರಾಜೀವ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಜನ್ಸಾಲಿ ಶಿವರಾಮ ಶೆಟ್ಟಿ ಮಾತನಾಡಿ, ವಿದ್ಯೆಯೊಂದಿಗೆ ಸದ್ಬಾವ, ಸದ್ಗುಣ, ಕುಟುಂಬ ಸಾಂಸ್ಕೃತಿಕ ನಡವಳಿಕೆಯನ್ನು ಮೈಗೂಡಿಸಿಕೊಂಡು, ಗಳಿಸಿದ ಜ್ಞಾನವನ್ನು ಉಪಯುಕ್ತ ರೀತಿಯಲ್ಲಿ ಬಳಸಿಕೊಳ್ಳಿ ಎಂದು ಯುವಕರಿಕೆ ಕರೆ ನೀಡಿದರು. ಇದೇ ಸಂದರ್ಭದಲ್ಲಿ ರೂ.60 ಲಕ್ಷ ವೆಚ್ಚದಲ್ಲಿ ನಡೆಯಲಿರುವ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಸರ್ವರೂ ನಮ್ಮೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿಕೊಂಡರು.
ರಾಜ್ಯ ಮಟ್ಟದ ಕ್ರೀಡಾ ಪ್ರತಿಭೆ ಕುಮಾರಿ ಶ್ರೀದೇವಿಕಾ ಶೆಟ್ಟಿ ಇವರನ್ನು ಪೋಲಿಸ್ ಅಧಿಕಾರಿ ಮಹಾಬಲ ಶೆಟ್ಟಿ ಸನ್ಮಾನ ನೀಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಅತ್ಯಧಿಕ ಅಂಕ ಗಳಿಸಿದ ಪ್ರತಿಭಾವನ್ವಿತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಯಿತು.
ಅಬಕಾರಿ ಉಪ ನಿರೀಕ್ಷಕ ಶಿವರಾಮ ಶೆಟ್ಟಿ, ಮೊಕ್ತೇಸರ ಹೆಬ್ಬಾಗಿಲುಮನೆ ಬಾಲಕೃಷ್ಣ ಶೆಟ್ಟಿ, ಯುವಕ ಮಂಡಲದ ಗೌರವಾಧ್ಯಕ್ಷ ಹೆಬ್ಬಾಗಿಲು ಮನೆ ಆನಂದ ಶೆಟ್ಟಿ, ಮುಖ್ಯ ಶಿಕ್ಷಕ ಜನಾರ್ದನ ಶೆಟ್ಟಿಗಾರ ಸಭೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯದರ್ಶಿ ವೆಂಕಟೇಶ್ ದೇವಾಡಿಗ ವರದಿವಾಚಿಸಿದರು. ರವೀಂದ್ರ ಶೆಟ್ಟಿಗಾರ, ಸಂಘಟನಾ ಕಾರ್ಯದರ್ಶಿ ಉದಯ ಕುಮಾರ ಹೆಗ್ಡೆ, ಅಣ್ಣಪ್ಪ ಬಾಳಕಟ್ಟು, ವಿಷ್ಣು ಶೆಟ್ಟಿಗಾರ ಯುವಕ ಮಂಡಲದ ವಾರ್ಷಿಕ ವಿವಿಧ ಚಟುವಟಿಕೆಗಳ ವರದಿಯ ಪಟ್ಟಿ ವಾಚಿಸಿದರು.
ಶಿಕ್ಷಕ ರಮೇಶ್ ಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕ ಪ್ರಭಾಕರ್ ಶೆಟ್ಟಿಗಾರ ಕಾರ್ಯಕ್ರಮ ನಿರೂಪಿಸಿದರು. ನವೀನ್ ಶೆಟ್ಟಿ ವಂದಿಸಿದರು.
ಕುಂದಾಪ್ರ ಡಾಟ್ ಕಾಂ - editor@kundapra.com