ಹೊಸ ಪಡಿತರ ಚೀಟಿಗೆ ಆನ್‌ಲೈನ್ ಅರ್ಜಿ ವ್ಯವಸ್ಥೆ

ಕುಂದಾಪುರ: ಆನ್‌ಲೈನ್ ಮೂಲಕ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದು, ಹೊಸದಾಗಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವವರನ್ನು, ಪಡಿತರ ಚೀಟಿ ಹೊಂದಿದವರು ಪರಿಚಯಿಸುವುದು ಕಡ್ಡಾಯವಾಗಿದೆ. 
     ನಗರ ಪ್ರದೇಶದಲ್ಲಿ ಹೊಸ ಪಡಿತರಕ್ಕಾಗಿ ಅರ್ಜಿ ಸಲ್ಲಿಸಲು ಬಯಸುವವರು ಮೊಬೈಲ್ ಮೂಲಕ 9212357123 ಸಂಖ್ಯೆಗೆ ಟೈಪ್ ಮಾಡಿ ಅರ್ಜಿದಾರರ ಹೆಸರು ಬರೆದು ಕಳುಹಿಸಬೇಕು. ಮೊಬೈಲ್‌ಗೆ ಟೋಕನ್ ನಂಬರ್, ಸೆಕ್ಯುರಿಟಿ ಕೋಡ್ ರವಾನೆಯಾಗುತ್ತದೆ. ವಿದ್ಯುತ್ ಆರ್‌ಆರ್ ನಂಬರುಳ್ಳ ರಶೀದಿಯ ಮೂಲ ಪ್ರತಿ, ಕುಟುಂಬ ಸದಸ್ಯರಲ್ಲಿ ಒಬ್ಬರ ಫೋಟೋ ಗುರುತಿನ ಚೀಟಿ, ಕುಟುಂಬದ ವಿಳಾಸ ದಾಖಲೆ ಸಹಿತವಾಗಿ, ಅರ್ಜಿದಾರರನ್ನು ಪರಿಚಯಿಸುವವರೊಂದಿಗೆ ಫೋಟೋ ಬಯೋ ಸೇವಾ ಕೇಂದ್ರಕ್ಕೆ ತೆರಳಬೇಕು. 
      ಸ್ಕ್ಯಾನರ್ ಹೊಂದಿದ ಸೇವಾ ಕೇಂದ್ರದಲ್ಲಿ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುವವರನ್ನು, ಪರಿಚಯಿಸುವವರ ದಾಖಲೆಗಳನ್ನು ತಾಳೆ ಹಾಕಿ ಫೊಟೋ ಮತ್ತು ಬಯೋಮೆಟ್ರಿಕ್ ಪಡೆಯಲಾಗುತ್ತದೆ. ಬಳಿಕವಷ್ಟೇ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ಸಾಧ್ಯ. 
     ವಿವರಗಳನ್ನು ಭರ್ತಿ ಮಾಡಿದ ಬಳಿಕ ಫೋಟೋ ಮತ್ತು ಬೆರಳಚ್ಚು ಬಯೋಮೆಟ್ರಿಕ್ ಸಂಗ್ರಹಿಸಲಾಗುತ್ತದೆ. ಅರ್ಜಿದಾರರ ಮೊಬೈಲ್‌ಗೆ ಬಂದಿರುವ ಟೋಕನ್ ನಂಬರ್ ಮತ್ತು ಸೆಕ್ಯುರಿಟಿ ಕೋಡ್ ನಮೂದಿಸಿದಾಗ ಅರ್ಜಿದಾರರ ಫೋಟೋ ಮತ್ತು ಬಯೋಮೆಟ್ರಿಕ್ ಪುಟ ತೆರೆದುಕೊಳ್ಳುತ್ತದೆ. 
         ಕುಟುಂಬದ 12 ವರ್ಷ ಮೇಲ್ಪಟ್ಟ ಎಲ್ಲರ ಫೋಟೋ ಮತ್ತು ಬಯೋಮೆಟ್ರಿಕ್ ಪಡೆಯಲಾಗುತ್ತದೆ. ಕುಟುಂಬದ ಒಬ್ಬರ ಫೋಟೋ ಗುರುತಿನ ಚೀಟಿ, ವಿಳಾಸ ದಾಖಲೆ ಮತ್ತು ಅರ್ಜಿದಾರರ ಘೋಷಣೆಯನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡುವುದು ಕಡ್ಡಾಯ. ಅರ್ಜಿದಾರರು 50 ರೂ. ಪಾವತಿಸಬೇಕು. 
        ಗ್ರಾಮೀಣ ಪ್ರದೇಶದವರು ಹೊಸದಾಗಿ ಪಡಿತರ ಚೀಟಿ ಪಡೆಯಲು ಏಪ್ರಿಲ್‌ನಿಂದ ಆಯಾ ಗ್ರಾ.ಪಂ. (ಪಂಚತಂತ್ರ ಸಾಫ್ಟ್‌ವೇರ್) ಮೂಲಕ ಅರ್ಜಿ ಸಲ್ಲಿಸಬೇಕು. ಮೊಬೈಲ್ ಎಸ್‌ಎಂಎಸ್ ಗ್ರಾಮೀಣ ಜನತೆಗೆ ಅನ್ವಯವಾಗದು. 

ಫೋಟೋ-ಬಯೋ ಸೇವಾ ಕೇಂದ್ರ

ಮಾಲಿನಿ ಡಿ. ಭಟ್, ದಿವ್ಯ ಫೋಟೋ ಕಾಪಿಯರ್ಸ್‌, ಸ್ವಾದಿಷ್ಟ, 324/1/ವಿ, ಮುಖ್ಯ ರಸ್ತೆ, ಕುಂದಾಪುರ(ಕೆನರಾ ಬ್ಯಾಂಕ್ ಶಾಖೆ ಎದುರು) 9845069961 
ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com