ಹೆಮ್ಮಾಡಿ ದೇವಾಡಿಗರ ಸಮಾಜ ಸೇವಾ ಸಂಘವನ್ನು ಆಲೂರು ರಘುರಾಮ ದೇವಾಡಿಗ ಉದ್ಘಾಟಿಸಿದರು. |
ಹೆಮ್ಮಾಡಿ: ಇಂದು ಸರಕಾರವು ಬೇರೆ ಬೇರೆ ಸಮುದಾಯದವರಿಗೆ ಹತ್ತುಹಲವು ಸೌಲಭ್ಯ ಹಾಗೂ ಅನುದಾನಗಳನ್ನು ನೀಡುತ್ತಿದೆ. ಆದರೆ ದೇವಾಡಿಗ ಸಮಾಜವು ಇಂದಿಗೂ ಸರಕಾರದ ಯಾವುದೇ ಸೌಲಭ್ಯಗಳನ್ನಾಗಲೀ, ಅನುದಾನವನ್ನಾಗಲೀ ಪಡೆದಿಲ್ಲ. ದೇವಾಡಿಗರು ಸಂಘಟಿತರಾಗಿ ಪ್ರಬಲ ಹೋರಾಟವನ್ನು ನಡೆಸಿದಲ್ಲಿ ಮಾತ್ರ ಸಾಮಾಜಿಕ ನ್ಯಾಯ ಪಡೆಯಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಆಲೂರು ರಘುರಾಮ ದೇವಾಡಿಗ ಅವರು ಹೇಳಿದರು.
ಹೆಮ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೆಮ್ಮಾಡಿ, ಕಟ್ಬೇಲ್ತೂರು ಮತ್ತು ದೇವಲ್ಕುಂದ ಗ್ರಾಮಗಳನ್ನೊಳಗೊಂಡಂತೆ ನೂತನವಾಗಿ ಅಸ್ತಿತ್ವಕ್ಕೆ ಬಂದ ದೇವಾಡಿಗರ ಸಮಾಜ ಸೇವಾ ಸಂಘವನ್ನು ಹೆಮ್ಮಾಡಿ ಜಯಶ್ರೀ ಸಭಾಭವನದಲ್ಲಿ ಜರಗಿದ ಸಮಾರಂಭದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ದೇವಾಡಿಗ ಸಮುದಾಯಕ್ಕೆ ತನ್ನದೇ ಆದ ಪರಂಪರೆಯಿದೆ. ಪರಂಪರೆಯನ್ನು ಮರೆಯದೇ ಮುನ್ನಡೆಯಲು ಪ್ರತಿಯೊಬ್ಬರೂ ಬದ್ಧರಾಗಬೇಕು. ಸಂಘಟಿತರಾಗಿ ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡಲು ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದು ಸಮಾಜಬಾಂಧವರಿಗೆ ಕಿವಿಮಾತು ಹೇಳಿದರು.
ಮುಖ್ಯ ಅತಿಥಿ ಸಂಘದ ಗೌರವ ಮಾರ್ಗದರ್ಶಕ, ಗಂಗೊಳ್ಳಿ ಪಂಚಗಂಗಾವಳಿ ಕ್ರೆಡಿಟ್ ಕೋಅಪರೇಟಿವ್ ಸೊಸೈಟಿ ಅಧ್ಯಕ್ಷ ರಾಜು ದೇವಾಡಿಗ ತ್ರಾಸಿ ಅವರು ಶುಭಾಶಂಸನೆ ಮಾಡಿ ಮಾತನಾಡುತ್ತಾ, ಸಾಮಾಜಿಕ ಹಿತಚಿಂತನೆಯ ದೃಷ್ಟಿಕೋನವನ್ನಿಟ್ಟುಕೊಂಡು ಸಂಘಟನೆಯನ್ನು ಬಲಪಡಿಸುವ ಹಾಗೂ ಸಮಾಜದ ಸವರ್ಾಂಗೀಣ ಅಭಿವೃದ್ಧಿಗೆ ದುಡಿಯುವ ನಿಟ್ಟಿನಲ್ಲಿ ದೇವಾಡಿಗರ ಸಮಾಜ ಸೇವಾ ಸಂಘವು ಯಶಸ್ವೀ ಕಾರ್ಯವನ್ನು ಕೈಗೊಳ್ಳಲಿ ಎಂದರು. ಸಂಘದ ಗೌರವಾಧ್ಯಕ್ಷ ನಂದಿ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು.
ಉದ್ಯಮಿ ಶೀನ ದೇವಾಡಿಗ, ಜಿಲ್ಲಾ ಪಂಚಾಯತ್ ಸದಸ್ಯೆ ಗೌರಿ ದೇವಾಡಿಗ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಶಾರದಾ ಎಂ. ಡಿ. ಬಿಜೂರು, ಗ್ರಾಮ ಪಂಚಾಯತ್ ಸದಸ್ಯೆ ಗಿರಿಜಾ ದೇವಾಡಿಗ, ಕೊಲ್ಲೂರು ಮುಕಾಂಬಿಕಾ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯೆ ಸವಿತಾ ದೇವಾಡಿಗ, ಎಸ್ಸಿಡಿಸಿಸಿ ಬ್ಯಾಂಕ್ ನಿವೃತ್ತ ಮೆನೇಜರ್ ಅಣ್ಣಯ್ಯ ಶೇರುಗಾರ್, ತಲ್ಲೂರು ಸಪ್ತಸ್ವರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ದೇವಾಡಿಗ, ಕುಂದಾಪುರ ದೇವಾಡಿಗರ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ದೇವಾಡಿಗ, ಕೋಟೇಶ್ವರ ದೇವಾಡಿಗರ ಸಮಾಜ ಸೇವಾ ಸಂಘದ ಅಧ್ಯಕ್ಷ ಸಂಜೀವ ದೇವಾಡಿಗ, ತಲ್ಲೂರು ದೇವಾಡಿಗರ ಸಮಾಜ ಸೇವಾ ಸಂಘದ ಅಧ್ಯಕ್ಷ ಸುಧಾಕರ ದೇವಾಡಿಗ, ಪ್ರಕೃತಿ ಸೇವಾ ಕೇಂದ್ರದ ಅಧ್ಯಕ್ಷ ರಮೇಶ್ ದೇವಾಡಿಗ ಕಂಬದಕೋಣೆ, ದೇವಾಡಿಗ ಯುವಸಂಘಟನೆ ಅಧ್ಯಕ್ಷ ಅಶೋಕ್ ದೇವಾಡಿಗ, ಮಹಿಳಾ ಸಂಘಟನೆ ಅಧ್ಯಕ್ಷೆ ಲಲಿತಾ ಎಸ್. ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ದಿವಾಕರ ದೇವಾಡಿಗ ಸ್ವಾಗತಿಸಿದರು. ಕಾರ್ಯದಶರ್ಿ ಮಂಜು ಕೆ. ಸುಳ್ಸೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ಅಶೋಕ್ ದೇವಾಡಿಗ, ಗೋಪಾಲ ದೇವಾಡಿಗ ಮತ್ತು ರವಿ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು.
ಕುಂದಾಪ್ರ ಡಾಟ್ ಕಾಂ - editor@kundapra.com