ಗಂಗೊಳ್ಳಿ: ರಾಜ್ಯ ಪೊಲೀಸ್ ಎಡಿಜಿಪಿ (ಅಡಿಶನಲ್ ಡೈರೆಕ್ಟರ್ ಜನರಲ್ ಆಫ್ ಪೋಲಿಸ್) ಐಎಸ್ಡಿ(ಇಂಟರ್ನಲ್ ಸೆಕ್ಯರಿಟಿ ಡಿವಿಜನ್) ಅಲೋಕ್ ಮೋಹನ್ ಅವರು ಶುಕ್ರವಾರ ಗಂಗೊಳ್ಳಿಯ ಕರಾವಳಿ ಕಾವಲು ಪೊಲೀಸ್ ಠಾಣೆಗೆ ಭೇಟಿ ನೀಡಿದರು.
ಗಂಗೊಳ್ಳಿಯಲ್ಲಿ ಕರಾವಳಿ ಕಾವಲು ಪೊಲೀಸ್ ಠಾಣೆ ರಚನೆಯಾದ ಬಳಿಕ ಪ್ರಥಮ ಬಾರಿ ಠಾಣೆಗೆ ಭೇಟಿ ನೀಡಿದ ಅಲೋಕ್ ಮೋಹನ್ ಅವರನ್ನು ಗಂಗೊಳ್ಳಿ ಠಾಣೆ ಇನ್ಸ್ಪೆಕ್ಟರ್ ತಾರಾನಾಥ್ ಬರಮಾಡಿಕೊಂಡರು.
ಗಂಗೊಳ್ಳಿ ಬಂದರು ಪ್ರದೇಶದಲ್ಲಿ ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಠಾಣೆ, ಬಂದರು ಪ್ರದೇಶದಲ್ಲಿ ಠಾಣೆಯ ಸ್ವಂತ ಕಟ್ಟಡ ನಿರ್ಮಾಣಕ್ಕೆ ಮಂಜೂರಾಗಿರುವ ಸ್ಥಳ ಹಾಗೂ ಠಾಣೆಯ ಕಾರ್ಯಚಟುವಟಿಕೆಗಳನ್ನು ಅವರು ವೀಕ್ಷಿಸಿದರು.
ಕರಾವಳಿ ಕಾವಲು ಪೊಲೀಸ್ ಎಸ್ಪಿ ಐ.ಎಂ. ಜಮೀಲ್, ಡಿವೈಎಸ್ಪಿ ಎಚ್.ಡಿ. ಮೆಂಡೊನ್ಸಾ ಹಾಗೂ ಠಾಣೆ ಸಿಬಂದಿ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ - editor@kundapra.com