ಭಂಡಾರ್ಕಾರ್ಸ್ ಕಾಲೇಜು: 'ರಂಗ ಆಟಗಳು' ತರಬೇತಿ


ಕುಂದಾಪುರ: ನಾಟಕದ ನಂಟನ್ನು ಬೆಳೆಸಿಕೊಳ್ಳುವುವದರಿಂದ ಜೀವನವನ್ನು ಚೆನ್ನಾಗಿ ರೂಪಿಸಿಕೊಳ್ಳಲು ಸಾಧ್ಯ. ನಾಟಕವು ಬದುಕನ್ನು ಕಲಿಸಿಕೊಡುವುದರೊಂದಿಗೆ ಮನಸ್ಸಿಗೂ ಸಮಾಧಾನ ನೀಡುತ್ತದೆ ಎಲ್ಲಾ ವರ್ಗದ ಜನರಿಗೂ ಮುದನೀಡುತ್ತದೆ ಎಂದು ನೀನಾಸಂ ಪದವೀಧರ ಶ್ರೀಧರ ಉಡುಪ ಹೇಳಿದರು.
       ಇವರು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತವಿಶ್ವವಿದ್ಯಾನಿಲಯ ಅಧ್ಯಯನ ಕೇಂದ್ರದಲ್ಲಿ ಎನ್.ಎಸ್.ಎಸ್ ವಿದ್ಯಾರ್ಥಿಗಳಿಗೆ ರಂಗ ಆಟಗಳ ತರಬೇತಿ ನೀಡಿ ಮಾತನಾಡಿದರು.
      ಎನ್.ಎನ್.ಎಸ್ ಯೋಜನಾಧಿಕಾರಿ ಡಾ| ಪ್ರಸನ್ನಕುಮಾರ ಐತಾಳ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸಂತೋಷ್ ಸ್ವಾಗತಿಸಿ, ಸುಜಾತಾ ಆಜ್ರಿ ವಂದಿಸಿ, ಶೈಲಜಾ ಕಾರ್ಯಕ್ರಮ ನಿರ್ವಹಿಸಿದರು.

ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com