ಕುಂದಾಪುರ: ಇಲ್ಲಿನ ಸುವರ್ಣ ಸಂಭ್ರಮದಲ್ಲಿರುವ ಭಂಡಾರ್ಕಾರ್ಸ್ ಕಾಲೇಜಿನ ಇತಿಹಾಸ ವಿಭಾಗವು ಇಂಡಿಯನ್ ಕೌಸಿಲ್ ಆಫ್ ಹಿಸ್ಟೋರಿಕಲ್ ರಿಸರ್ಚ ಸಹಕಾರದೊಂದಿಗೆ 'ಲೊಕಾಲಿಟಿ ರಿಜನ್ ಆ್ಯಂಡ್ ಮೇಕಿಂಗ್ ಆಫ್ ದಿ ನೇಷನ್’ ಎಂಬ ವಿಷಯದ ಕುರಿತು ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಿತ್ತು. ನಿವೃತ್ತ ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಬಿ. ಸುರೇಂದ್ರ ರಾವ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಚರಿತ್ರೆ ಕೇವಲ ಗತವಲ್ಲ. ಬದಲಿಗೆ ವರ್ತಮಾನದ ಜತೆ ಬದುಕಿರುವ ನಮ್ಮನ್ನು ಗತದೊಂದಿಗೆ ಸಂಪರ್ಕಿಸುವ ಸಂಗತಿ. ವಿಚಾರಸಂಕಿರಣದ ಪರಿಕಲ್ಪನೆಯು ಮೂರು ಪ್ರತ್ಯೇಕವಾದ ಗುರುತುಗಳನ್ನು ಚರ್ಚಿಸುತ್ತದೆ. ಸ್ಥಳಿಯತೆ ಕುಂದಾಪುರದ ಪರಿಸರವನ್ನು ಹೇಳುತ್ತದೆ. ಪ್ರಾದೇಶಿಕತೆ ಪ್ರಾದೇಶಿಕ ವ್ಯಾಪ್ತಿಯ ವೈಶಿಷ್ಟ್ಯತೆಯನ್ನು ಹೇಳುತ್ತದೆ. ಈ ಪ್ರಾದೇಶಿಕ ಎನ್ನುವುದು ಸಾಪೇಕ್ಷವಾದ ಕಲ್ಪನೆ. ಚಾರಿತ್ರಿಕವಾಗಿ ಈ ವಲಯಗಳನ್ನು ರಾಜಕೀಯವಾಗಿ ಮಾತ್ರ ವ್ಯಾಖ್ಯಾನಿಸಲಾಗಿದೆ ಮತ್ತು ಉಳಿದ ಆಯಾಮಗಳನ್ನು ನಿರಾಕರಿಸಲಾಗಿದೆ. ರಾಷ್ಟ್ರ ಎಂಬ ಕಲ್ಪನೆ ಅತ್ಯಂತ ಸರಳವೆಂಬ ಗ್ರಹಿಕೆಯಿದೆ. ರಾಷ್ಟ್ರವನ್ನು ಸಂಕೇತಿಸುವ ಮಾನ್ಯತೀಕರಿಸುವ ಮತ್ತು ರಕ್ಷಿಸುವ ಅನೇ ಸಂಗತಿ ಮಾಧ್ಯಮಗಳಿವೆ. ಆದರೂ ಕೂಡಾ ರಾಷ್ಟ್ರದ ನಿರ್ವಚನ ತುಂಬಾ ಕಷ್ಟ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ನ ಆಡಳಿತಾಧಿಕಾರಿ ಡಾ. ಹೆಚ್. ಶಾಂತಾರಾಮ್ ವಹಿಸಿದ್ದರು. ಪ್ರಾಂಶುಪಾಲ ಪ್ರೊ. ಚಂದ್ರಶೇಖರ ದೋಮ ಉಪಸ್ಥಿತರಿದ್ದರು.
ಇತಿಹಾಸ ವಿಬಾಗದ ಮುಖ್ಯಸ್ಥರಾದ ಪ್ರೊ. ಜಿ.ಎಂ.ಉದಯಕುಮಾರ್ ಸ್ವಾಗತಿಸಿದರು. ಪ್ರಾಧ್ಯಾಪಕ ಕೆ. ಗೋಪಾಲ್ ವಂದಿಸಿ ವಾಣಿಜ್ಯಶಾಸ್ತ್ರ ವಿಬಾಗದ ಉಪನ್ಯಾಸಕಿ ಸವಿತಾ ಶಾಸ್ತ್ರಿ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ - editor@kundapra.com