ಯು.ಎಸ್.ಶೆಣೈಯವರಿಗೆ ಅಕಾಡೆಮಿಯ ಕೊಂಕಣಿ ನಕ್ಷತ್ರ ಬಿರುದು, ಸನ್ಮಾನ


ಶಿರೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಂಗಳೂರು ಇವರು ಮೇಸ್ತ ಕಲಾತಂಡದೊಂದಿಗೆ ಶಿರೂರು ಕರಿಕಟ್ಟೆ ಸಭಾ ಭವನದಲ್ಲಿ ಪ್ರಾಯೋಜಿಸಿದ ಪ್ರಪ್ರಥಮ ಪ್ರಾದೇಶಿಕ ಸರ್ವ ಧರ್ಮ ಕೊಂಕಣಿ ಸಾಂಸ್ಕೃತಿಕ ಜಾಥಾ ಕೊಂಕಣಿ ಭಾರತ್ 2013ಸಮಾರಂಭದಲ್ಲಿ ಕುಂದಾಪುರದ ಹಿರಿಯ ಪತ್ರಕರ್ತ ಯು ಎಸ್ ಶೆಣೈ ಯವರನ್ನು ಕೊಂಕಣಿ ನಕ್ಷತ್ರ ಬಿರುದು ನೀಡಿ ಸನ್ಮಾನಿಸಲಾಯಿತು. 
      ತಮ್ಮ ಜೈ ಕೊಂಕಣಿ ಸಂಸ್ಥೆಯ ಮೂಲಕ ಕುಂದಾಪುರ ತಾಲೂಕಿನಾದ್ಯಂತ ಹಲವು ಕಾರ್ಯಕ್ರಮಗಳ ಮುಖೇನ ಭಾಷೆ ಹಾಗೂ ಸಂಸ್ಕೃತಿಯ ಜನಜಾಗೃತಿಯನ್ನು ಮೂಡಿಸಿದ ಶೆಣೈಯವರು ಕರಾವಳಿಯ ಹಲವಾರು ಕೊಂಕಣಿ ಸಾಹಿತಿ ಕಲಾವಿದರನ್ನು ಪ್ರೋತ್ಸಾಹಿಸಿರುವುದಲ್ಲದೆ ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನವನ್ನು ಕುಂದಾಪುರದಲ್ಲಿ ಸಂಘಟಿಸಿದ ಸಾಧಕರಾಗಿದ್ದಾರೆ. ಇವರ  ನಿರಂತರ ಕ್ರಿಯಾಶೀಲತೆಯ ಧ್ಯೋತಕವಾಗಿ ಇವರನ್ನು ಅಭಿಮಾನದಿಂದ ಸನ್ಮಾನಿಸಿ ಗೌರವಿಸಲಾಗುತ್ತಿದೆ ಎಂದು ಅಧ್ಯಕ್ಷತೆ ವಹಿಸಿದ ಅಕಾಡೆಮಿ ಅಧ್ಯಕ್ಷ ಕಾಸರಗೋಡು ಚಿನ್ನಾ ಹೇಳಿದರು. 
      ಪ್ರಸಾರ ಭಾರತಿ ಅಧ್ಯಕ್ಷ ಎಂ ವಿ ಕಾಮತ್, ಸಂಧ್ಯಾ ಪೈ, ಕ್ರೀಡಾಳು ವಂದನಾ ಶ್ಯಾನುಭಾಗ್, ರೇಮಂಡ್ ಡಿಸೋಜಾ ಮುಂತಾದ ಶ್ರೇಷ್ಠ ಸಾಧಕರಿಗೆ ದೊರೆತ ಈ ಗೌರವ ನಾನು ನಿರೀಕ್ಷಿಸಿರಲಿಲ್ಲ, ನನ್ನ ಪರಿಧಿಯೊಳಗೆ ನನ್ನ ಖುಷಿಗಾಗಿ ಭಾಷೆಯನ್ನು ಭಾಷಿಕರನ್ನು ಪ್ರೀತಿಸುತ್ತಿದ್ದೆ ಅದನ್ನು ಗುರುತಿಸಿದ ಅಕಾಡೆಮಿಯ ಸರ್ವರನ್ನು ಸದಾ  ಸ್ಮರಿಸುತ್ತೇನೆ ಎಂದು ಸನ್ಮಾನ ಸ್ವೀಕರಿಸಿದ ಯು ಎಸ್ ಶೆಣೈ ಯವರು ನುಡಿದರು.
     ಶಿರೂರು ಗ್ರಾ. ಪ. ಅಧ್ಯಕ್ಷ ರಾಮು ಎ ಮೇಸ್ತ ಸಭೆಯನ್ನು ಉದ್ಘಾಟಿಸಿದರು, ಮುಖ್ಯ ಅತಿಥಿಗಳಾಗಿ ರಾಮಚಂದ್ರ ಬಿ ಶಿರೂರಕರ್ , ದೇವಿದಾಸ ಆರ್ ಎಮ್, ಮೌಲಾನಾ ಬಾರಿಸಲ್ಲಾ ಇಸ್ಮಾಯಿಲ್ ನದ್ವಿ, ಕುಪ್ಪ ಮರಾಠಿ, ಅರ್ ಜೆ ಮೇಸ್ತ, ಚಿತ್ರನಟ ಮನ್‌ದೀಪ ರಾಯ್, ಎಂ ಎಂ ಮೀರನ್, ವಸಂತ ಮೇಸ್ತ ಶಂಕರ್ ಡಿ ಮೇಸ್ತ, ರ ವೀಂದ್ರ ಕೀಣಿ ಮುಂತಾದವರು ಉಪಸ್ಥಿತರಿದ್ದರು.
  ಅಕಾಡೆಮಿ ಸದಸ್ಯ ಓಂಗಣೇಶ್ ಕಾರ್ಯಕ್ರಮ ನಿರೂಪಿಸಿ ಮೋಹನ್ ರೇವಣ್ಕರ್ ಸನ್ಮಾನಿತರನ್ನು ಪರಿಚಯಿಸಿದರು.ರಿಜಿಸ್ಟ್ರಾರ್ ದೇವದಾಸ ಪೈ ವಂದಿಸಿದರು. 

ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com