ಪುರಸಭೆಯ ಅಭಿವೃದ್ಧಿ ಕಾರ್ಯದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಜೊತೆ: ತಿಂಗಳೆ ವಿಕ್ರಮಾರ್ಜುನ

ಕುಂದಾಪುರ: ಕುಂದಾಪುರ ಪುರಸಭೆಯ ಅಭಿವೃದ್ಧಿ ಕಾರ್ಯದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಜೊತೆಯಾಗಿ ಕೈ ಜೋಡಿಸುತ್ತದೆ. ಕುಂದಾಪುರದ ಐದು ನದಿಗಳ ಸಂಗಮದ ಪಂಚ ಗಂಗಾವಳಿ ಪ್ರದೇಶವನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವ ಸಲುವಾಗಿ ಸಖ್ಯತಾ ವರದಿಗಾಗಿ ಕಳುಹಿಸಲಾಗಿದ್ದು, ವರದಿ ಆಧಾರದಲ್ಲಿ ಸಮಗ್ರ ಯೋಜನೆಯನ್ನು ಈ ಭಾಗದಲ್ಲಿ ರೂಪಿಸಲಾಗುವುದು  ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗಡೆ ಹೇಳಿದರು.
   ಅವರು ಕುಂದಾಪುರ ಪುರಸಭೆ ಸಭಾಂಗಣಕ್ಕೆ ನೂತನವಾಗಿ ಡಾ| ವಿ.ಎಸ್‌.ಆಚಾರ್ಯ ಸಭಾಂಗಣ ಉದ್ಘಾಟಿಸಿ ಮಾತನಾಡುತ್ತಿದ್ದರು.
     ಪುರಸಭೆ ಅಧ್ಯಕ್ಷ ಕೆ. ಮೋಹನದಾಸ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಯೋಜನಾ ನಿರ್ದೇಶಕ ಪ್ರಸನ್ನ ಕುಮಾರ್‌, ಯೋಜನಾ ಸಹಾಯಕ ಅಭಿಯಂತರ ಕೃಷ್ಣ ಹೆಬೂರ್‌, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಿಜಯ ಎಸ್‌. ಪೂಜಾರಿ, ಪುರಸಭೆ ಸದಸ್ಯರು ಉಪಸ್ಥಿತರಿದ್ದರು.
    ಈ ಸಂದರ್ಭದಲ್ಲಿ 2012 - 13ನೇ ಸಾಲಿನ ಶೇ. 13ರ ಅನುದಾನದಡಿ ಭಿನ್ನಸಾಮರ್ಥಯರಿಗೆ ವೈದ್ಯಕೀಯ ವೆಚ್ಚದ ಚೆಕ್‌ಗಳು ಹಾಗೂ ವಿದ್ಯಾರ್ಥಿವೇತನ ವಿತರಿಸಲಾಯಿತು. ಪುರಸಭಾ ವ್ಯಾಪ್ತಿಯಲ್ಲಿ ರಾಷ್ಟ್ರಮಟ್ಟದಲ್ಲಿ ಮಿಂಚಿದ ಮೂವರು ಕ್ರೀಡಾಪಟುಗಳನ್ನು ಸಮ್ಮಾನಿಸಲಾಯಿತು.
     ಪುರಸಭಾ ಮುಖ್ಯಾಧಿಕಾರಿ ಸದಾನಂದ ಅವರು ಸ್ವಾಗತಿಸಿ, ಚಂದ್ರಕಾಂತ್‌ ಕಾರ್ಯಕ್ರಮ ನಿರೂಪಿಸಿದರು. ಸದಸ್ಯ ರಾಜೇಶ್‌ ಕಾವೇರಿ ವಂದಿಸಿದರು.
ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com