ಕುಂದಾಪುರ: ಕಾರ್ಮಿಕ ಸಂಘಟನೆಗಳು ಕರೆನೀಡಿದ್ದ ಭಾರತ್ ಬಂದ್ ಕುಂದಾಪುರದಲ್ಲಿ ಮೊದಲ ದಿನ ಬಹುತೇಕ ಯಶಸ್ವಿಗೊಂಡರೂ ಎರಡನೆ ದಿನ ನಿರಸ ಪ್ರತಿಕ್ರಿಯೆ ವ್ಯಕ್ತವಾಯಿತು.
ಮೊದಲ ದಿನದ ಬೆಳಗ್ಗೆಯಿಂದಲೇ ಖಾಸಗಿ ಹಾಗೂ ಸರ್ಕಾರಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಆಟೋ ಸಂಚಾರವೂ ಇಲ್ಲವಾಗಿತ್ತು. ನಗರದ ಅಂಗಡಿ ಮುಂಗಟ್ಟುಗಳನ್ನು ಮಾಲೀಕರು ಸ್ವಯಂಪ್ರೇರಿತವಾಗಿ ಬಂದ್ ಮಾಡಿ ಬೆಂಬಲ ಸೂಚಿಸಿದರು. ಬ್ಯಾಂಕ್ ಗಳು ಕಾರ್ಯ ನಿರ್ವಹಿಸಿಲಿಲ್ಲ. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಗ್ರಾಮೀಣ ಪ್ರದೇಶದಲ್ಲೂ ಬಂದ್ ಗೆ ಉತ್ತಮ ಪ್ರತ್ತಿಕ್ರಿಯೆ ದೊರೆಯಿತು. ಬಂದ್ ನಿಂದಾಗಿ ಜನರು ತೊಂದರೆ ಅನುಭವಿಸುವಂತಾಯಿತು.
ಹೆದ್ದಾರಿ ತಡೆ: ಬುಧವಾರ ವಿವಿಧ ಸಂಘಟನೆಗಳ ಕಾರ್ಮಿಕರು ಇಲ್ಲಿನ ಶಾಸ್ತ್ರೀ ವೃತ್ತದಲ್ಲಿ ರಾ.ಹೆ. 66ರ ಸಂಚರಿಸುತ್ತಿದ್ದ ಲಾರಿ, ರಿಕ್ಷಾಗಳು, ಶಾಲಾ ವಾಹನಗಳನ್ನು ತಡೆದು ನಿಲ್ಲಿಸಿದರು. ಇದರಿಂದ ಹೆದ್ದಾರಿಯಲ್ಲಿ ನೂರಾರು ಲಾರಿಗಳು, ವಾಹನಗಳು ಜಮೆಗೊಂಡು ಸಂಚಾರಕ್ಕೆ ತೀವ್ರ ತೊಂದರೆಯಾಯಿತು.
ಗುರುವಾರ ಖಾಸಗಿ ಬಸ್ ಹಾಗೂ ರಿಕ್ಷಾ ಸಂಚಾರ ಸ್ಥಗಿತಗೊಂಡಿತ್ತು. ಸರಕಾರಿ ಬಸ್ ಸಂಚಾರ ವಿರಳವಾಗಿತ್ತು. ಬ್ಯಾಂಕ್ ಗಳು ತೆರೆದಿದ್ದರೂ ನೌಕರರು ವಿರಳವಾಗಿದ್ದರು. ಶಾಲಾ ಕಾಲೇಜುಗಳು ಎಂದಿನಂತೆ ಇದ್ದರೂ ವಿದ್ಯಾರ್ಥಿಗಳಿರಲಿಲ್ಲ. ಗ್ರಾವೀಣ ಪ್ರದೇಶದಲ್ಲಿ ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ಸಂಜೆಯ ವೇಳೆಗೆ ಬಸ್ ಸಂಚಾರವಿತ್ತು. ಎರಡು ದಿನದಿಂದ ಬಸ್ ಗಾಗಿ ಪರದಾಡುತ್ತಿದ್ದ ಜನರಿಗೆ ಸಂಜೆಯ ವೇಳೆ ಬಸ್ ಸಂಚಾರ ಆರಂಭಗೊಂಡದ್ದು ನಿರಾರಳವಾಯಿತು.
ಅಗತ್ಯ ವಸ್ತುಗಳ ಬೆಲೆಯೇರಿಕೆಗೆ, ಕೂಲಿ ಕಾರ್ಮಿಕರ ಮಾಸಿಕ ವೇತನ, ಗುತ್ತಿಗೆ ಕಾರ್ಮಿಕ ಪದ್ಧತಿ ರದ್ಧತಿ, ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳ ಖಾಸಗೀಕರಣ ಮುಂತಾದ ಜನವಿರೋಧೀ ನೀತಿಗಳನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳಾದ ಸಿಐಟಿಯು, ಬಿಎಂಎಸ್, ಎಐಟಿಯುಎಸಿ, ಇಂಟಕ್ ಮತ್ತು ಎಚ್ಎಂಎಸ್ ಫೆ. 20 ಮತ್ತು 21 ರಂದು ಮುಷ್ಕರಕ್ಕೆ ಕರೆ ನೀಡಿದ್ದವು.
ಕುಂದಾಪ್ರ ಡಾಟ್ ಕಾಂ - editor@kundapra.com