ಕುಂದಾಪುರ: ಕಾರ್ಮಿಕ ಸಂಘಟನೆಗಳಾದ ಸಿಐಟಿಯು, ಬಿಎಂಎಸ್, ಎಐಟಿಯುಎಸಿ, ಇಂಟಕ್ ಮತ್ತು ಎಚ್ಎಂಎಸ್ ಫೆ. 20 ಮತ್ತು 21 ರಂದು ನಡೆಸಲುದ್ದೇಶಿಸಿರುವ ಅಖೀಲ ಭಾರತ ಸಾರ್ವತ್ರಿಕ ಮುಷ್ಕರದ ಅಂಗವಾಗಿ ಎರಡೂ ದಿನಗಳಲ್ಲಿ ಬಸ್ ಮತ್ತು ಆಟೋ ರಿಕ್ಷಾ ಬಂದ್ಗೆ ಸಾರಿಗೆ ಕಾರ್ಮಿಕರ ಸಂಘಟನೆಗಳು ಕರೆ ನೀಡಿವೆ
ಅಗತ್ಯ ವಸ್ತುಗಳ ಬೆಲೆಯೇರಿಕೆಗೆ, ಕೂಲಿ ಕಾರ್ಮಿಕರ ಮಾಸಿಕ ವೇತನ, ಗುತ್ತಿಗೆ ಕಾರ್ಮಿಕ ಪದ್ಧತಿ ರದ್ಧತಿ, ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳ ಖಾಸಗೀಕರಣ ಮುಂತಾದ ಜನವಿರೋಧೀ ನೀತಿಗಳನ್ನು ವಿರೋಧಿಸಿ ಮುಷ್ಕರ ನಡೆಯಲಿದೆ.
ಕುಂದಾಪ್ರ ಡಾಟ್ ಕಾಂ - editor@kundapra.com