ಕುಂದಾಪುರ: ಯುವಜನರಲ್ಲಿ ದೇಶಭಕ್ತಿ, ಧಾರ್ಮಿಕ ಮನೋಭಾವನೆ ಕಡಿಮೆಯಾಗುತ್ತಿರುವುದು, ಗುರುಹಿರಿಯರಲ್ಲಿ ಗೌರವ, ಸುಶಿಕ್ಷಿತತೆ, ಉತ್ತಮ ಸಂಸ್ಕೃತಿ ಮರೆಯಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಧಾರ್ಮಿಕ ಸಂಸ್ಕಾರದಿಂದ ಯುವಶಕ್ತಿಯ ಸದ್ಬಳಕೆ ಸಾಧ್ಯವಾಗುತ್ತದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಹೇಳಿದರು.
ಹಕ್ಲಾಡಿ ಗ್ರಾಮದ ತೊಪ್ಲುವಿನ ಅರೆಕಲ್ಲು ಶ್ರೀ ನಾಗ ದೇವಸ್ಥಾನದ ದಶಮಾನೋತ್ಸವ ಮತ್ತು ವರ್ಧಂತ್ಯುತ್ಸವದ ಅಂಗವಾಗಿ ನಡೆದ ಧಾಮರ್ಿಕ ಸಭೆಯಲ್ಲಿ ವಿಶೇಷವಾಗಿ ಹೊರತರಲಾದ ಸ್ಮರಣಸಂಚಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ತಾವು ಮುಜರಾಯಿ ಸಚಿವರಾದ ಬಳಿಕ ಇಲಾಖೆಗೆ ಹೊಸರೂಪವನ್ನು ನೀಡಲು ಯತ್ನಿಸಿದ್ದೇನೆ. ಮುಜರಾಯಿ ಇಲಾಖೆಯಿಂದ ಹಿಂದೂ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲು ಹಾಗೂ ಯೋಜನೆಗಳನ್ನು ಅನುಷ್ಠಾನಗೊಳಿಸಲು ಹಿಂದೆಂದಿಗಿಂತಲೂ ಹೆಚ್ಚು ಆದ್ಯತೆ ನೀಡಲಾಗಿದೆ ಎಂದ ಅವರು ತೊಪ್ಲು ಶ್ರೀ ನಾಗ ದೇವಸ್ಥಾನ ಅಭಿವೃದ್ಧಿಗೆ ಸರಕಾರದ ಮುಜರಾಯಿ ಇಲಾಖೆಯಿಂದ 15 ಲಕ್ಷ ರೂಪಾಯಿ ಅನುದಾನವನ್ನು ಮಂಜೂರುಗೊಳಿಸಿರುವುದಾಗಿ ಪ್ರಕಟಿಸಿದರು.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಮಂಡಳಿಯ ಅಧ್ಯಕ್ಷ ಕೃಷ್ಣಪ್ರಸಾದ ಅಡ್ಯಂತಾಯ ಅಧ್ಯಕ್ಷತೆ ವಹಿಸಿದ್ದರು. ದಾನಿ ಆರ್. ಎಸ್. ಮುಂಗ್ರವಾಡಿ ಹಲ್ಕಣರ್ಿ ಅವರು ಕೊಡಮಾಡಿದ ಪ್ರತಿಭಾ ಪುರಸ್ಕಾರವನ್ನು ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ವಿತರಿಸಲಾಯಿತು. ಮುಖ್ಯ ಅತಿಥಿ ಬೈಂದೂರು ಬ್ಲಾಕ್ ಬಿಜೆಪಿ ಅಧ್ಯಕ್ಷ ಪ್ರಣಯಕುಮಾರ್ ಶೆಟ್ಟಿ, ಉದ್ಯಮಿ ನಾಣು ಡಿ. ಚಂದನ್ ಮಸ್ಕಿ, ಮೊಗವೀರ ಮಹಾಜನ ಸೇವಾ ಸಂಘದ ಬಗ್ವಾಡಿ ಹೋಬಳಿ ಶಾಖಾಧ್ಯಕ್ಷ ಎಂ. ಎಂ. ಸುವರ್ಣ, ಜಿ. ಪಂ. ಸದಸ್ಯ ಪ್ರಕಾಶ್ ಟಿ. ಮೆಂಡನ್, ಹೆಮ್ಮಾಡಿ ಮೀನುಗಾರಿಕಾ ಸಹಕಾರಿ ಸಂಘದ ಅಧ್ಯಕ್ಷ ಚಂದ್ರ ನಾಯ್ಕ್, ಉದ್ಯಮಿ ಸುರೇಶ್ ತೋಳಾರ್ ಮರವಂತೆ, ದಾನಿ ಎನ್. ಜಿ. ಮೆಂಡನ್, ಊರಿನ ಹಿರಿಯರಾದ ಆರ್. ಎನ್. ನಾಯ್ಕ್, ಮೊಗವೀರ ಯುವಸಂಘಟನೆಯ ಹೆಮ್ಮಾಡಿ ಘಟಕಾಧ್ಯಕ್ಷ ರಾಘವೇಂದ್ರ, ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಟಿ. ಕೆ. ಆನಂದ, ಸಂತೋಷ್ ಎಸ್. ಎಂ., ಶೇಖರ ಜಿ. ಮೊಗವೀರ ಮೊದಲಾದವರು ಉಪಸ್ಥಿತರಿದ್ದರು.
ಮಹೇಶ್ ಎಸ್. ಚಂದನ್ ತೊಪ್ಲು ಸ್ವಾಗತಿಸಿದರು. ಉಪನ್ಯಾಸಕ ಮಂಜುನಾಥ ನೆಂಪು ಕಾರ್ಯಕ್ರಮ ನಿರ್ವಹಿಸಿದರು. ಸಂಜೀವ ಹೊಸಾಡು ವಂದಿಸಿದರು.
ಕುಂದಾಪ್ರ ಡಾಟ್ ಕಾಂ - editor@kundapra.com