ಶಿರೂರು: ಕರಾವಳಿಯ ಸಾಂಸ್ಕ್ರತಿಕ ಶ್ರೀಮಂತಿಕೆಯ ಪ್ರಮುಖ ಭಾಗಗಳಲ್ಲೊಂದಾದ ಯಕ್ಷಗಾನ ಕಲೆ ತನ್ನದೇ ಆದ ಪ್ರೌಡಿಮೆ ಹಾಗೂ ಇತಿಹಾಸವನ್ನು ಹೊಂದಿದೆ. ಯಕ್ಷಗಾನದ ಹಿರಿಮೆಯ ಉಳಿವಿಗೆ ಹಿಂದೆ ಅನೇಕರ ತ್ಯಾಗ ಕೊಡುಗೆ ಇದೆ ಎನ್ನುವುದನ್ನು ಯುವ ಕಲಾವಿದರು ಮನಗಂಡು ಕಲಾಮೌಲ್ಯವನ್ನು ಉಳಿಸಿಕೊಳ್ಳಬೇಕು ಎಂದು ಯಕ್ಷಗಾನ ಅರ್ಥದಾರಿ ಮತ್ತು ಮಣೂರು ಸಂಚಾರಿ ಯಕ್ಷಗಾನ ಮಂಡಳಿ ಇದರ ಸಂಚಾಲಕ ಮಲ್ಪೆ ವಾಸುದೇವ ಸಾಮಗ ಹೇಳಿದರು.
ಅವರು ಶಿರೂರು ನಾಗಶ್ರೀ ದತ್ತಿನಿಧಿ ಪ್ರತಿಷ್ಟಾನದ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕೋತ್ಸವ ಹಾಗೂ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಇದೇ ಸಂದರ್ಭದಲ್ಲಿ ನಾಗಶ್ರೀ ದತ್ತಿನಿಧಿ ಪುರಸ್ಕಾರವನ್ನು ಯಕ್ಷಗಾನ ಕಲಾವಿದ ಗಣಪತಿ ನಾಯ್ಕ ಕುಮಟಾಗೆ ನೀಡಿ ಸನ್ಮಾನಿಸಲಾಯಿತು. ಹಾಗೂ ಹಿರಿಯ ಸ್ತ್ರೀ ವೇಷದಾರಿ ಎಮ್.ಕೆ. ರಮೇಶ ಆಚಾರ್ಯ ರವರನ್ನು ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ರಂಗ ಕಲಾವಿದ ಗಣೇಶ ಕಾರಂತ ಬೈಂದೂರು, ಗೋವರ್ಧನ ನಾಯ್ಕ ಗೊರಟೆ, ನಾಗಶ್ರೀ ದತ್ತಿನಿಧಿ ಪ್ರತಿಷ್ಠಾನದ ಟ್ರಸ್ಟ್ ಮಂಜುನಾಥ ಬಿಲ್ಲವ ಮುಂಬಯಿ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ - editor@kundapra.com