ಶಂಕರನಾರಾಯಣ : ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯೂತ್ ರೆಡ್ಕ್ರಾಸ್ ಘಟಕ ಇತ್ತಿಚಿಗೆ ಆರಂಭಗೊಂಡಿತು. ಇದರ ಕುಂದಾಪುರ ಘಟಕದ ಚೆರ್ಮೆನ್ ಜಯಕರ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಭಾರತವು ಹೆಚ್ಚು ಮಾನವ ಸಂಪನ್ಮೂಲವನ್ನು ಹೊಂದಿದ್ದ ವಿದ್ಯಾವಂತ ವಿಚಾರವಂತರಿಂದ ತುಂಬಿದ್ದರೂ ಆರೋಗ್ಯದ ಅರಿವು ಕನಿಷ್ಠತಮವಾಗಿದೆ. ಇಲ್ಲಿನ ಪ್ರತಿಯೊಬ್ಬ ವ್ಯಕ್ತಿಯ ಬೆಳವಣಿಗೆಯಲ್ಲಿ ಸಮಾಜದ ಪಾಲು ಇದ್ದೇ ಇದೆ. ಸಮಾಜದಿಂದ ಸಹಾಯ ಪಡೆದ ಮನುಷ್ಯ ಸಮಾಜದ ಋಣಮುಕ್ತಿಗಾಗಿ ಸೇವಾಮನೋಭಾವದಿಂದ ಬದುಕಿದಲ್ಲಿ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಶ್ರೀ. ನಾಗರಾಜ ವೈದ್ಯ ಎಂ. ವಹಿಸಿದ್ದರು. ಕುಂದಾಪುರ ಯೂತ್ರೆಡ್ಕ್ರಾಸ್ ಘಟಕದ ಕಾರ್ಯದರ್ಶಿ ಎ.ಮುತ್ತಯ್ಯ ಶೆಟ್ಟಿ, ಕೋಶಾಧಿಕಾರಿಯಾದ ಶ್ರೀ ಶಿವರಾಮ್ ಶೆಟ್ಟಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯೂತ್ರೆಡ್ಕ್ರಾಸ್ ಕಾಲೇಜು ಘಟಕದ ಸಂಯೋಜನಾಧಿಕಾರಿಯಾದ ಡಾ. ಸಂಪತ್ಕುಮಾರ್ ಸ್ವಾಗತಿಸಿದರು. ತೃತೀಯ ಬಿ.ಕಾಂ ವಿದ್ಯಾರ್ಥಿ ಶ್ರೀಕಾಂತ್ ಕಾರ್ಯಕ್ರಮ ನಿರೂಪಿಸಿ ತೃತೀಯ ಬಿ.ಎ ಶ್ವೇತಾ ವಂದಿಸಿದರು.
ಕುಂದಾಪ್ರ ಡಾಟ್ ಕಾಂ - editor@kundapra.com