ಸೇವಾ ಮನೋಭಾವದಿಂದ ಪರಿಪಕ್ವ ವ್ಯಕ್ತಿತ್ವ: ಮಂಗೇಶ್ ಶೆಣೈ


ತೆಕ್ಕಟ್ಟೆ: ಸೇವಾ ಮನೋಭಾವ, ಕರ್ತವ್ಯನಿಷ್ಠೆ, ದಾನಗುಣದಿಂದ ವಿದ್ಯಾರ್ಥಿಗಳು ಪರಿಪಕ್ವವಾದ ವ್ಯಕ್ತಿತ್ವವನ್ನು ಹೊಂದಲು ಸಾಧ್ಯ ಎಂದು ಯಳಜಿತ್ನ ಸಿದ್ಧಿವಿನಾಯಕ ಸಾಂಸ್ಕೃತಿಕ ಕೇಂದ್ರದ ಸಂಚಾಲಕ ಮಂಗೇಶ್ ಶೆಣೈ ಅವರು ಹೇಳಿದರು. 
   ತೆಕ್ಕಟ್ಟೆಯ ಸೇವಾಸಂಗಮ ವಿದ್ಯಾಕೇಂದ್ರದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ವಿದ್ಯಾರ್ಥಿ ವ್ಯಕ್ತಿತ್ವ ನಿರ್ಮಾಣಕ್ಕೆ ಭಗವದ್ಗೀತೆಯ ಸಂದೇಶ ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
   ಅಧ್ಯಯನದಲ್ಲಿನ ಅನಾಸಕ್ತಿಯಿಂದಾಗಿ ವಿದ್ಯಾರ್ಥಿಗಳಲ್ಲಿ ಜ್ಞಾನಸಂಗ್ರಹ ಕುಂಠಿತಗೊಳ್ಳುತ್ತದೆ. ಮಾನಸಿಕ, ಅಧ್ಯಾತ್ಮಿಕ ಶಕ್ತಿಸಂಪನ್ನತೆಯಿಂದ ಜ್ಞಾನಸಂವರ್ಧನೆಯುಂಟಾಗುತ್ತದೆ. ಭಗವದ್ಗೀತೆಯ ಮೌಲ್ಯಯುತವಾದ ವಿಚಾರಧಾರೆಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ವಿದ್ಯಾಥರ್ಿಗಳು ತಮ್ಮ ಶೈಕ್ಷಣಿಕ ಜೀವನ ಹಾಗೂ ಭವಿಷ್ಯದಲ್ಲಿ ಉತ್ತಮ ನೆಲೆಯನ್ನು ಕಾಣಬಹುದು ಎಂದರು.
   ಸಂಸ್ಥೆಯ ಸಂಚಾಲಕ ರಮೇಶ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ ಶಾಲಾ ಶೈಕ್ಷಣಿಕ ಸಲಹೆಗಾರ ಲಕ್ಷ್ಮೀನಾರಾಯಣ ಉಪಾಧ್ಯಾಯ, ವಿಶ್ವಸ್ಥ ಮಂಡಳಿ ಸದಸ್ಯರಾದ ಸುರೇಶ್ ಪೈ ಮತ್ತು ವಿನಯಾ ಸುರೇಶ್ ಪೈ, ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿ, ಪ್ರೌಢಶಾಲಾ ಮುಖ್ಯಶಿಕ್ಷಕ ಸುಬ್ರಾಯ ಹಂದೆ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಇಂದ್ರಾಕ್ಷಿ ಉಡುಪ ಉಪಸ್ಥಿತರಿದ್ದರು.
   ಶಿಕ್ಷಕಿ ಸಂಧ್ಯಾ ಭಟ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ಅಶ್ವಿತಾ ವಂದಿಸಿದರು.  
ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com