ಬಾಲ್ಯದಲ್ಲಿಯೇ ಸಂಸ್ಕೃತಿಯ ಸಂಸ್ಕಾರ ಅಗತ್ಯ : ಬಾಳೆಕುದ್ರು ಶ್ರೀ


ಸೇವಾ ಸಂಗಮ ದತ್ತಾತ್ರೇಯ ಶಿಶುಮಂದಿರ ಲೋಕಾರ್ಪಣೆ
ಕುಂದಾಪುರ: ಶಿಶು ಶಿಕ್ಷಣ, ಗುರುಕುಲ ಪದ್ಧತಿಯ ಭದ್ರ ತಳಪಾಯದ ಹಿನ್ನಲೆಯಲ್ಲಿ ಭಾರತದ ಪುರಾತನ ಸಂಸ್ಕೃತಿ ಇಂದಿನವರೆಗೂ ಉಳಿದು ಬರಲು ಸಾಧ್ಯವಾಗಿದೆ. ಎಳೆವೆಯಲ್ಲಿಯೇ ಮಕ್ಕಳಿಗೆ ಸಂಸ್ಕಾರ ಕೊಟ್ಟರೇ ಅವರು ಮುಂದಿನ ದಿನಗ ಳಲ್ಲಿ ಸುಸಂಸ್ಕೃತರಾಗಿ ಭಾರತೀಯ ಭವ್ಯ ಪರಂಪರೆಯ ಬೆಳವಣಿಗೆಗೆ ಕಾರಣೀಕರ್ತರಾಗು ವರು ಆದುದರಿಂದ ಮಕ್ಕಳಿಗೆ ಎಳೆವೆಯಲ್ಲಿಯೇ ಭಾರತೀಯ ಸಂಸ್ಕೃತಿಯ ಸಂಸ್ಕಾರ ಸಿಗುವಂತಾಗಬೇಕು ಈ ನಿಟ್ಟಿನಲ್ಲಿ ಶಿಶುಮಂದಿರ ಗಳ ಪಾತ್ರ ಹಿರಿದಾದುದು ಎಂದು ಹಂಗಾರಕಟ್ಟೆ ಶ್ರೀ ಬಾಳೆಕುದ್ರು ಮಠದ ಶ್ರೀ   ನೃಸಿಂಹಾಶ್ರಮ ಸ್ವಾಮೀಜಿಯವರು ಹೇಳಿದರು.
     ಅವರು ಕುಂದಾಪುರದ ಹೊನ್ನನಕೇರಿಯ ನಾಗಬನದ ಎದುರು ಭಾಗದಲ್ಲಿ ನೂತನವಾಗಿ ನಿರ್ಮಾಣಗೊಂಡ ಸೇವಾ ಸಂಗಮ ದತ್ತಾತ್ರೇಯ ಶಿಶುಮಂದಿರದ ಕಟ್ಟಡವನ್ನು ಉದ್ಘಾಟಿಸಿ, ಆಶೀರ್ವಚನ ನೀಡಿದರು.
ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ನ ಪ್ರವರ್ತಕ ಡಾ.ಜಿ.ಶಂಕರ್, ಉದ್ಯಮಿ ದತ್ತಾನಂದ ಗಂಗೊಳ್ಳಿ, ಸೇವಾ ಸಂಗಮ ಟ್ರಸ್ಟ್ನ ಸ್ಥಾಪಕರಾದ ಡಾ.ಎಸ್.ಎನ್. ಪಡಿಯಾರ್ ಶುಭಾಶಂಸನೆಗೈದರು. ಟ್ರಸ್ಟ್ನ ಕಾರ್ಯದಶರ್ಿ ಕೇಶವರಾಯ ಪ್ರಭು ಪ್ರಾಸ್ತಾವಿಕ ಮಾತುಗಳ ನ್ನಾಡಿದರು. 
    ಶಿಶು ಮಂದಿರ ನಿರ್ಮಾಣ ಕಾರ್ಯದಲ್ಲಿ ಸಹಕರಿಸಿದ ರಾಕೇಶ್, ಶಾಂತಾ ಅಡಿಗ, ಮಹಾಬಲ, ಚಂದ್ರಶೇಖರ ಪಡಿಯಾರ್ ಅವರನ್ನು  ಸನ್ಮಾನಿಸಲಾಯಿತು. ಶಿಶು ಮಂದಿರದಲ್ಲಿ ಮಾತಾಜಿಯಾಗಿ ಸೇವೆ ಸಲ್ಲಿಸಿದ ಅನಸೂಯ ಕೋಟ, ದೀಪಾ ಕೋಟೇಶ್ವರ, ಸರಸ್ವತಿ ಗೋಪಾಡಿ, ಸುವರ್ಣ ಕುಂದಾಪುರ, ಸ್ವಪ್ನ ಕುಂದಾಪುರ, ಜ್ಯೋತಿ ಬೆಣ್ಣೆಕುದ್ರು, ಸಂಧ್ಯಾ ಅವರುಗಳನ್ನು ಗೌರವಿಸಲಾಯಿತು.
      ವೇದಿಕೆಯಲ್ಲಿ ಸೇವಾ ಸಂಗಮ ಟ್ರಸ್ಟ್ನ ವಿಶ್ವಸ್ಥರಾದ ಪಾಂಡುರಂಗ ಪ್ರಭು, ಸುಬ್ರಹ್ಮಣ್ಯ ಹೊಳ್ಳ,, ಡಾ.ಎಚ್.ರಾಮಮೋಹನ್, ಸೇವಾ ಸಂಗಮ ದತ್ತಾತ್ರೇಯ ಶಿಶು ಮಂದಿರದ ಸ್ಥಾಪಕಾಧ್ಯಕ್ಷೆ ಶಾಂತಾ ಅಡಿಗ ಉಪ ಸ್ಥಿತರಿದ್ದರು. 
ಶಿಶುಮಂದಿರ ಕಟ್ಟಡ ರಚನಾ ಸಮಿತಿ ಅಧ್ಯಕ್ಷ ಅಭಿನಂದನ ಶೆಟ್ಟಿ ಸ್ವಾಗತಿಸಿದರು. ಶಿಶುಮಂದಿರದ ಅಧ್ಯಕ್ಷ ನಾರಾಯಣ ಕೆ.           ಶಿಶು ಮಂದಿರ ನಡೆದು ಬಂದ ಹಾದಿಯನ್ನು ಸ್ಮರಿಸಿದರು. ರೂಪಾ ರವಿಕಿರಣ್ ಬಹುಮಾನಿತರ ಪಟ್ಟಿ ವಾಚಿಸಿದರು. 
ರಶ್ಮಿರಾಜ್ ಕಾರ್ಯಕ್ರಮ ನಿರ್ವಹಿಸಿದರು. ಪ್ರೀತಮ್ ವಿವೇಕ್ ಪೈ ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com